ಪಂಚಮಸಾಲಿ ಪೀಠದಿಂದ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆಗೆ ನಿರ್ಧಾರ?

ಮೃತ್ಯುಂಜಯ ಶ್ರೀಗಳು ಲೋಕ ಸಂಚಾರಿಯಾಗಿ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿಯಲ್ಲಿ ಒಂದೊಂದು ಮನೆ ಮಾಡಿಕೊಂಡು ಧರ್ಮದ ಕಾರ್ಯ ಮರೆತಿದ್ದಾರೆ.
Basavajaya Mrutyunjaya seer
ಜಯಮೃತ್ಯುಂಜಯ ಸ್ವಾಮೀಜಿ
Updated on

ಹುಬ್ಬಳ್ಳಿ: ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಬೀಗ ಜಡಿದ ವಿವಾದ ಅಂತ್ಯಗೊಂಡ ನಡುವಲ್ಲೇ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಪೀಠದ ಪೀಠಾಧಿಪತಿ ಸ್ಥಾನದಿಂದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳನ್ನು ಉಚ್ಛಾಟನೆಗೊಳಿಸುವ ಕುರಿತು ಕಸರತ್ತುಗಳು ನಡೆಯುತ್ತಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ಮತ್ತು ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು, 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ತತ್ವಗಳನ್ನು ಪ್ರಚಾರ ಮಾಡುವ ಸಲುವಾಗಿ 2008 ರಲ್ಲಿ ಪೀಠವನ್ನು ಸ್ಥಾಪಿಸಲಾಯಿತು. ಬಸವಜಯ ಮೃತ್ಯುಂಜಯ ಸ್ವಾಮೀಜಿಯನ್ನು ಮುಖ್ಯಸ್ಥರನ್ನಾಗಿ ಮಾಡಲಾಯಿತು. ಕಳೆದ ಕೆಲವು ವರ್ಷಗಳಿಂದ, ಪೀಠದ ಬಗ್ಗೆ ಶ್ರೀಗಳ ಧೋರಣೆ ಬದಲಾಗಿದ್ದು, ರಾಜಕೀಯ ಪಕ್ಷದ ಸದಸ್ಯರಂತೆ ವರ್ತಿಸುತ್ತಿದ್ದಾರೆ. ಸಮುದಾಯದ ಕೆಲವು ನಾಯಕರನ್ನು ತೃಪ್ತಿಪಡಿಸಲು ಏಕಪಕ್ಷೀಯ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಸ್ವಾಮೀಜಿ ಒಂದು ಪಕ್ಷದ ಬ್ಯಾನರ್ ಅಡಿ ಹೋಗಿ ಕೂರುತ್ತಿದ್ದಾರೆ. ಓರ್ವ ವ್ಯಕ್ತಿಯ ಪರವಾಗಿ ಮಾತ್ರ ಸ್ವಾಮೀಜಿ ಮಾತನಾಡುತ್ತಿದ್ದಾರೆ. ಜಯ ಮೃತ್ಯುಂಜಯ ಸ್ವಾಮೀಜಿ ನಡವಳಿಕೆ ಬದಲಾವಣೆ ಆಗಿದ್ದು ಸತ್ಯ. ನಮ್ಮ ಸಮಾಜದವರ ಮೇಲೆ ಅನೇಕ ಕಡೆ ದೌರ್ಜನ್ಯ ನಡೆದಿದೆ. ಅಲ್ಲಿ ಹೋಗಿ ಸ್ವಾಮೀಜಿ ಯಾರಿಗೂ ಸಾಂತ್ವನ ಹೇಳಿಲ್ಲ. ಬಸವ ಜಯ ಸ್ವಾಮೀಜಿ ಪ್ರಚಾರ ಪ್ರಿಯ ಆಗಿದ್ದಾರೆಂದು ಆರೋಪಿಸಿದ್ದಾರೆ.

ಪೀಠಾಧಿಪತಿಯಾದವರು ಮಠದಲ್ಲಿದ್ದುಕೊಂಡು ಧರ್ಮ ಪ್ರಚಾರ, ಬಸವ ತತ್ವದ ಅನುಷ್ಠಾನಕ್ಕೆ ಒತ್ತು ನೀಡಬೇಕು. ಆದರೆ ಮೃತ್ಯುಂಜಯ ಶ್ರೀಗಳು ಲೋಕ ಸಂಚಾರಿಯಾಗಿ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿಯಲ್ಲಿ ಒಂದೊಂದು ಮನೆ ಮಾಡಿಕೊಂಡು ಧರ್ಮದ ಕಾರ್ಯ ಮರೆತಿದ್ದಾರೆ. ಶ್ರೀಗಳು ಬಿಜೆಪಿಯ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸುತ್ತಾರೆ. ಅವರು ಅಧಿಕೃತವಾಗಿ ಬಿಜೆಪಿ ಸೇರಿದಂತಾಗಿದೆ. ಸ್ವಾಮೀಜಿ ನಡವಳಿಕೆ ಬದಲಾವಣೆ ಆಗಿರುವುದು ಸತ್ಯ. ನಮ್ಮ ಸಮಾಜದವರ ಮೇಲೆ ಅನೇಕ ಕಡೆ ದೌರ್ಜನ್ಯ ನಡೆದಿದೆ. ಅಲ್ಲಿ ಹೋಗಿ ಸ್ವಾಮೀಜಿ ಯಾರಿಗೂ ಸಾಂತ್ವನ ಹೇಳಿಲ್ಲ. ಪ್ರಚಾರ ಪ್ರಿಯರಾಗಿದ್ದಾರೆ. ಯಾವಾಗಲೂ ಫೇಸ್​ಬುಕ್, ವಾಟ್ಸ್​ಆ್ಯಪ್, ಮಾಧ್ಯಮ ಅಂತೆಲ್ಲ ಇರುತ್ತಾರೆ. ಅವರಿಗೆ ಸಮಾಜದ ಬಗ್ಗೆ ಕಳಕಳಿಯಿಲ್ಲ. ಇತ್ತೀಚಿಗೆ ಸ್ವಾಮೀಜಿಗಳು ಮಠಕ್ಕೆ ಬರುವುದು ಅಪರೂಪವಾಗಿದೆ. ಹೀಗಾಗಿ ಅಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಾಗಿವೆ.

Basavajaya Mrutyunjaya seer
ಸಿದ್ದರಾಮಯ್ಯ ಸಿಎಂ ಆಗಿರುವವರೆಗೂ 2ಎ ಮೀಸಲಾತಿಗೆ ಬೇಡಿಕೆ ಇಡುವುದಿಲ್ಲ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಶೀಘ್ರದಲ್ಲಿ ಪರ್ಯಾಯ ವ್ಯವಸ್ಥೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಪರ್ಯಾಯ ವ್ಯವಸ್ಥೆಯಲ್ಲಿ ಓರ್ವ ಗುರುಗಳನ್ನು ನಿರ್ಮಿಸುವುದು ಸತ್ಯ. ಜಯ ಮೃತುಂಜಯ ಸ್ವಾಮೀಜಿಯನ್ನು ಹೊರಹಕಾಲು ಚಿಂತನೆ ನಡೆಯುತ್ತಿದೆ. ಮಠಕ್ಕೆ ಮಾಲೀಕರು ಸ್ವಾಮೀಜಿ ಅಲ್ಲ. ನಮ್ಮ ಟ್ರಸ್ಟ್ ಮಠವನ್ನು ನೋಡಿಕೊಳ್ಳುವಂತೆ ಸ್ವಾಮೀಜಿಗಳಿಗೆ ಜವಾಬ್ದಾರಿ ನೀಡಿದೆ.

ಮಠ ನೀಡಿದ್ದು ಧರ್ಮ ಪ್ರಚಾರ ಮತ್ತು ಸಂಘಟನೆಗೆ ಮಾತ್ರ. ಅದು ಬಿಟ್ಟು ಮನೆ ಮಾಡಿಕೊಂಡು ಓಡಾಡುವುದು ಸರಿಯಲ್ಲ. ಸ್ವತಃ ಸ್ವಾಮೀಜಿ ಮಲಪ್ರಭಾ ನದಿಯ ಮೇಲೆ ಮಠ ಕಟ್ಟುವುದಾಗಿ ಹೇಳಿದ್ದಾರೆ. ಕೆಲ ಅಗ್ರಗಣ್ಯ ನಾಯಕರು ಕೂಡ ಸೇರಿದ್ದಾರೆ. ಅಲ್ಲಿ ಸಮಾಜದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಹೇಳಿದ್ದಾರೆ. ಇದನ್ನು ಟ್ರಸ್ಟ್ ಸ್ವಾಗತಿಸುತ್ತದೆ. ಅವರು ಪರ್ಯಾಯ ಮಠ ಆರಂಭಿಸುದಾದರೇ ಆರಂಭಿಸಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದರು.

ಇದೇ ವೇಳೆ ಮಠದ ದ್ವಾರಕ್ಕೆ ಬೀಗ ಜಡಿದ ವಿವಾದ ಸಂಬಂಧ ಪ್ರತಿಕ್ರಿಯಿಸಿದ ಅವರು, ಪೀಠದ ಪ್ರವೇಶದ್ವಾರವನ್ನು ವರ್ಷಗಳ ಕಾಲ ಎಂದಿಗೂ ಬೀಗ ಹಾಕಿರಲಿಲ್ಲ. ಆದರೆ ಮಠಾಧೀಶರು ದಿನಗಳು ಮತ್ತು ತಿಂಗಳುಗಳ ಕಾಲ ಪೀಠದಿಂದ ದೂರ ಉಳಿದಿದ್ದರಿಂದ ಮಠದ ರಕ್ಷಣೆಗಾಗಿ ಬೀಗ ಜಡಿಯಲಾಗಿತ್ತು. ಈ ವರ್ಷ ಶ್ರೀಗಳು ಪೀಠಕ್ಕೆ ಕೇವಲ ಎರಡು ಬಾರಿ ಮಾತ್ರ ಭೇಟಿ ನೀಡಿದ್ದಾರೆ. ಇದಲ್ಲದೆ, ಕಳೆದ ಎರಡು ವರ್ಷಗಳಿಂದ ಶ್ರೀಗಳು ಸಂಪರ್ಕಕ್ಕೆ ಬಂದಿರಲಿಲ್ಲ, ಕಳೆದ ವಾರ, ಇದ್ದಕ್ಕಿದ್ದಂತೆ ಕೆಲವು ದುಷ್ಕರ್ಮಿಗಳು ಮಠದ ಬೀಗ ಒಡೆದು ಒಳ ಪ್ರವೇಶಿಸಿದ್ದಾರೆ. ಸ್ವಾಮೀಜಿ ಸ್ವತಃ ಬಂದು ಬೀಗ ಕೇಳಿದರೇ ಅಲ್ಲಿದ್ದವರೇ ಕೊಡುತ್ತಿದ್ದರು. ಆದರೆ, ಅವರ ಸೂಚನೆ ಮೇರೆಗೆ ಏಳು ಜನರು ಬಂದು ಏಕಾಏಕಿ ಬೀಗ ಮುರಿದಿದ್ದಾರೆ. ಅಷ್ಟೇ ಅಲ್ಲದೇ ಮರುದಿನ ಶ್ರೀಗಳು ಬಸವ ಮಂಟಪಕ್ಕೆ ಬಂದು ಸುಖಾಸುಮ್ಮನೆ ಮಠಕ್ಕೆ ಬಾರದಂತೆ ನನಗೆ ತಡೆದಿದ್ದಾರೆ ಎಂದು ಆಪಾದನೆ ಮಾಡಿದ್ದಾರೆ.ಕೇವಲ ಪ್ರಚಾರಕ್ಕಾಗಿ ಸ್ವಾಮೀಜಿ ಹಾಗೆ ಮಾಡುತ್ತಿದ್ದಾರೆಂದು ಆರೋಪಿಸಿದರು.

ಪಂಚಮಸಾಲಿ ಮೀಸಲಾತಿ ಹೋರಾಟ ಕುರಿತು ಮಾತನಾಡಿ, ಸ್ವಾಮೀಜಿಗಳು ಸಮಾಜದ ಅಗ್ರಗಣ್ಯ ನಾಯಕರೆಂದು ಹೇಳುವವರು ಸಮಾಜಕ್ಕೆ 2ಎ ಅಥವಾ 2ಡಿ ಮೀಸಲಾತಿ ಬೇಕಾ ಎಂಬ ಬಗ್ಗೆ ಸ್ಪಷ್ಟಪಡಿಸಲಿ, ಒಂದು ವೇಳೆ 2ಡಿ ಮೀಸಲಾತಿ ಬೇಕಾದರೇ ಸರ್ಕಾರದಿಂದ ನಮ್ಮ ಮಕ್ಕಳಿಗೆ 2ಡಿ ಪ್ರಮಾಣಪತ್ರ ಕೊಡಿಸಲಿ ಎಂದು ಸವಾಲು ಹಾಕಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com