
ಬೆಂಗಳೂರು: ಇಡೀ ಜಗತ್ತು ಗೌರವಿಸುವ ಹಾಗೂ ಎಲ್ಲಾ ಜನಾಂಗದವರು ಒಪ್ಪಿಕೊಳ್ಳುವ 12ನೇ ಶತಮಾನದ ಸಾಮಾಜಿಕ ಹರಿಕಾರ ಜಗಜ್ಜ್ಯೋತಿ ಬಸವಣ್ಣನವರ ಬೋಧನೆಗಳು ಇಂದಿಗೂ ಪ್ರಸ್ತುತ.
ಹೀಗಾಗಿ ಅವರ ಚಿಂತನೆಗಳನ್ನು ತಾಂತ್ರಿಕ ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯಗಳು ಮತ್ತು AICTE-ಅನುಮೋದಿತ ಸಂಸ್ಥೆಗಳ ಉಪಕುಲಪತಿಗಳು, ಬಸವಣ್ಣನವರ ಆಡಳಿತ ಮಾದರಿಗಳು ಮತ್ತು ಸಾಮಾಜಿಕ ಸುಧಾರಣಾ ಕಾರ್ಯಸೂಚಿಯನ್ನು ಸಕ್ರಿಯವಾಗಿ ಪ್ರಚಾರ ಮಾಡುವಂತೆ ಮತ್ತು ಸಂಶೋಧಿಸುವಂತೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಒತ್ತಾಯಿಸಿದೆ.
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯ ಉನ್ನತ ಶಿಕ್ಷಣ ಇಲಾಖೆಯ ಸಂವಹನದಲ್ಲಿ, ಆಧುನಿಕ ಭಾರತಕ್ಕಾಗಿ ಬಸವೇಶ್ವರರ ಬೋಧನೆಗಳನ್ನು ಜಗತ್ತಿಗೆ ತಿಳಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ AICTE ಒತ್ತಾಯಿಸಿದೆ. ಭಾರತವು ಸಮಗ್ರ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ವಿಕೇಂದ್ರೀಕೃತ ಆಡಳಿತದ ಹೊಸ ಮಾದರಿಗಳನ್ನು ಹುಡುಕುತ್ತಿರುವ ಸಮಯದಲ್ಲಿ, ಕವಿ-ಸಂತ ಬಸವೇಶ್ವರರ ಆಮೂಲಾಗ್ರ ವಿಚಾರಗಳನ್ನು ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಪುನರುಜ್ಜೀವನಗೊಳಿಸುತ್ತಿವೆ ಮತ್ತು ಸಂಶೋಧಿಸುತ್ತಿವೆ.
ಬಸವೇಶ್ವರರ ತತ್ವಶಾಸ್ತ್ರದ ಕುರಿತು ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ಮತ್ತು ಸಂಶೋಧನಾ ಯೋಜನೆಗಳು, 'ಲೋಕ ಸಂಸದ್' ಸ್ಥಳೀಯ ಆಡಳಿತದ ಪರಿಕಲ್ಪನೆಯ ಪರಿಶೋಧನೆ, ಸಾಮಾಜಿಕ ಸಮಾನತೆ, ಲಿಂಗ ಸಮಾನತೆ ಮತ್ತು ಜಾತಿ ತಾರತಮ್ಯ ಮತ್ತು ಮೂಢನಂಬಿಕೆಗಳ ನಿರ್ಮೂಲನೆಗಾಗಿ ಅವರ ಹೋರಾಟದ ಕುರಿತಾದ 'ವಚನಗಳ ಬಗ್ಗೆ ಅಧ್ಯಯನ ನಡೆಸಲು AICTE ಕರೆ ನೀಡಿದೆ.
ಅನ್ಯಾಯ, ಪಿತೃಪ್ರಭುತ್ವ, ಕುರುಡು ಆಚರಣೆಗಳು ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಿದರು. ಅರ್ಹತೆ, ಶ್ರಮದ ಘನತೆ, ವೈಚಾರಿಕತೆ ಮತ್ತು ಸಮಾನತೆಯ ಸಮಾಜಕ್ಕಾಗಿ ಅವರು ಟೊಂಕಕಟ್ಟಿ ನಿಂತರು.
ಆಡಳಿತ ಮತ್ತು ಸಾಮಾಜಿಕ ಪರಿವರ್ತನೆಯ ಕುರಿತು ಅತ್ಯಾಧುನಿಕ ಸಂಶೋಧನೆಯನ್ನು ರೂಪಿಸಲು ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಂಶೋಧನಾ ವಿದ್ವಾಂಸರು ಈ ಸುಧಾರಕರಿಂದ ಸ್ಫೂರ್ತಿ ಪಡೆಯಬೇಕೆಂದು ಭಾರತ ಸರ್ಕಾರ ಈಗ ಬಯಸುತ್ತದೆ.
ಆಡಳಿತದಲ್ಲಿ ಬೆಳೆಯುತ್ತಿರುವ ಸಾಮಾಜಿಕ ವಿಭಜನೆಗಳು ಮತ್ತು ಸವಾಲುಗಳನ್ನು ಭಾರತ ಎದುರಿಸುತ್ತಿರುವಾಗ, ಅದು ಪರಿಹಾರಗಳಿಗಾಗಿ ತನ್ನ ಬೇರುಗಳಿಗೆ ವಾಪಾಸಗುತ್ತಿದೆ ಎಂಬ ಸ್ಪಷ್ಟ ಸಂದೇಶ ರವಾಸಿನಿಸಿದೆ. ಬಸವೇಶ್ವರ ಕೇವಲ ಇತಿಹಾಸವಲ್ಲ, ಆದರೆ ಭವಿಷ್ಯದಲ್ಲಿ ಉತ್ತಮ ಸ್ಥಾನವಿದೆ.
Advertisement