
ಯಾದಗಿರಿ: ಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಟ್ರಕ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯಾದಗಿರಿ ಜಿಲ್ಲೆಯ ತಬಲಾ ಕಲಾವಿದ ಸಾಮ್ರಾಟ್ ಕಕ್ಕೇರಿ(45) ಅವರು ಮೃತಪಟ್ಟಿದ್ದಾರೆ.
ಕ್ಯಾಲಿಫೋರ್ನಿಯಾದ ಮಿಡಲ್ ಟೌನ್ ಸಮೀಪ ಹಾರ್ಬಿನ್ ಸ್ಪ್ರೀಂಗ್ ರಸ್ತೆಯಲ್ಲಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಸಾಮ್ರಾಟ್ ಕಕ್ಕೇರಿ ಅವರು ಸಾವನ್ನಪ್ಪಿದ್ದು, ಅವರೊಂದಿಗಿದ್ದ ಮತ್ತೊಬ್ಬರು ಗಾಯಗೊಂಡಿದ್ದಾರೆ.
ಕಳೆದ 15 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿರುವ ಸಾಮ್ರಾಟ್ ಕಕ್ಕೇರಿ ಅವರು, ಕ್ಯಾಲಿಫೋರ್ನಿಯಾದಲ್ಲಿ ಆಯೋಜಿಸಿದ್ದ ಸಂಗೀಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ವಾಪಸ್ ಬರುತ್ತಿದ್ದಾಗ ಅವರ ಕಾರು ಮತ್ತು ಟ್ರಕ್ ಮಧ್ಯೆ ಡಿಕ್ಕಿ ಸಂಭವಿಸಿದೆ.
ಎಂಬಿಎ ಪದವೀಧರರಾಗಿದ್ದ ಸಾಮ್ರಾಟ್ ಕಕ್ಕೇರಿ ಅವರು ಮೊದಲು ಹೈದರಾಬಾದ್ ನಲ್ಲಿ ನೆಲೆಸಿದ್ದರು. ನಂತರ ಅಮೆರಿಕಕ್ಕೆ ತೆರಳಿ, ಅಲ್ಲಿಯ ಮಹಿಳೆಯನ್ನೇ ಮದುವೆಯಾಗಿದ್ದರು. ದಂಪತಿಗೆ ಒಂದು ಹೆಣ್ಣು ಮಗುವಿದೆ.
Advertisement