KGF ಬಾಬುಗೆ ಆರ್‌ಟಿಓ ಶಾಕ್‌: ಬಿಗ್‌ ಬಿ, ಆಮೀರ್‌ ಖಾನ್‌ರಿಂದ ಖರೀದಿಸಿದ್ದ ಐಷಾರಾಮಿ ಕಾರು ಜಪ್ತಿ!

ಕೆಜಿಎಫ್ ಬಾಬುಗೆ ಸೆಲೆಬ್ರಿಟಿಗಳು ಬಳಕೆ ಮಾಡಿದ ಕಾರುಗಳನ್ನು ಖರೀದಿ ಮಾಡುವ ಕ್ರೇಜ್ ಇದೆ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳ ಕಾರು ಎಂದರೆ ಅವರು ಖರೀದಿಸಿ ತರುತ್ತಾರೆ.
KGF  babu's luxury cars
ಕೆಜಿಎಫ್ ಬಾಬು ಒಡೆತನದ ಐಷಾರಾಮಿ ಕಾರುಗಳು
Updated on

ಬೆಂಗಳೂರು: ಕೆಜಿಎಫ್ ಬಾಬು ನಿವಾಸದ ಮೇಲೆ ಆರ್ ಟಿಒ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. kgf ಬಾಬು ಅವರ ಬಳಿಯಿದ್ದ ಐಷಾರಾಮಿ ಕಾರುಗಳನ್ನು ಸೀಜ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರಿನ ವಸಂತ ನಗರದಲ್ಲಿರುವ ಕೆಜಿ ಎಫ್ ಬಾಬು ಅವರ ರುಕ್ಸಾನಾ ಪ್ಯಾಲೇಸ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಐಷಾರಾಮಿ ಕಾರುಗಳಿಗೆ ತೆರಿಗೆ ಕಟ್ಟದ ಹಿನ್ನೆಲೆಯಲ್ಲಿ ಆರ್ ಟಿಓ ಅಧಿಕಾರಿಗಳು ಕೆಜಿಎಫ್ ಬಾಬು ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಕೆಜಿಎಫ್ ಬಾಬುಗೆ ಸೆಲೆಬ್ರಿಟಿಗಳು ಬಳಕೆ ಮಾಡಿದ ಕಾರುಗಳನ್ನು ಖರೀದಿ ಮಾಡುವ ಕ್ರೇಜ್ ಇದೆ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳ ಕಾರು ಎಂದರೆ ಅವರು ಖರೀದಿಸಿ ತರುತ್ತಾರೆ. ಕೆಜಿಎಫ್ ಬಾಬು ಬಳಿ ಎರಡು ರೋಲ್ಸ್ ರಾಯ್ಸ್ ಕಾರಿದೆ. ಅಮಿತಾಭ್ ಬಚ್ಚನ್ ಬಳಸುತ್ತಿದ್ದ MH 11 AX 1 ಹಾಗೂ ಆಮಿರ್ ಖಾನ್ ಒಂದು ವರ್ಷ ಮಾತ್ರ ಬಳಸಿದ್ದ MH 02 BB 2 ಸಂಖ್ಯೆಯ ಕಾರನ್ನು ಕೆಜಿಎಫ್ ಬಾಬು ಖರೀದಿಸಿ ತಂದಿದ್ದರು.

ಈಗ ಬಾಬು ತೆರಿಗೆ ಕಟ್ಟದ ಕಾರಣ ಆರ್​ಟಿಒ ಜಂಟಿ ಆಯುಕ್ತೆ ಶೋಭಾ ನೇತೃತ್ವದ ತಂಡ ಬಾಬು ಮನೆಯ ಮೇಲೆ ದಾಳಿ ನಡೆಸಿತು. ಈ ವೇಳೆ ಗೇಟ್​ ತೆಗೆಯದೆ ಕೆಜಿಎಫ್ ಬಾಬು ಮೊಂಡಾಟ ಪ್ರದರ್ಶಿಸಿದರು.

ನಾನು ಟ್ಯಾಕ್ಸ್ ಕಟ್ಟಲು ಸಿದ್ಧನಿದ್ದೇನೆ. ನನ್ನ ಎರಡು ಕಾರುಗಳಿಗೆ ಮಹಾರಾಷ್ಟ್ರದಲ್ಲಿ ನೋಂದಣಿ ಆಗಿದೆ. 2 ಕಾರುಗಳಿಗೆ ಮಹಾರಾಷ್ಟ್ರದಲ್ಲಿ ಲೈಫ್​ಟೈಮ್ ಟ್ಯಾಕ್ಸ್ ಕಟ್ಟಿದ್ದೇನೆ. ಈಗ RTO ಅಧಿಕಾರಿಗಳು ಕರ್ನಾಟಕ ತೆರಿಗೆ ಕಟ್ಟಿ ಎನ್ನುತ್ತಿದ್ದಾರೆ. ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಟ್ಯಾಕ್ಸ್ ಕಟ್ಟದೇ ಇರಲ್ಲ. ಆರ್​ಟಿಒ ಈಗ ಅವಕಾಶ ಕೊಟ್ಟರೆ ಈಗಲೇ ತೆರಿಗೆ ಕಟ್ಟುತ್ತೇನೆ’ ಎಂದು ಅವರು ಹೇಳಿದ್ದಾರೆ.

KGF  babu's luxury cars
ಬೇಕಿದ್ದರೆ ಚಿಕ್ಕಪೇಟೆ ಜನರಿಗೆ 1600 ಕೋಟಿಯಲ್ಲಿ ಅರ್ಧ ಪಾಲು ಕೊಡ್ತೀನಿ ಹೊರತು ಮಗನಿಗೆ ಕೊಡಲ್ಲ: KGF ಬಾಬು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com