

ಬೆಂಗಳೂರು: ಈಗಾಗಲೇ ತಮ್ಮ ಇ-ಖಾತಾವನ್ನು ಪಡೆದಿರುವ 6.2 ಲಕ್ಷ ಆಸ್ತಿ ಮಾಲೀಕರಲ್ಲಿ 26,000 ಮಾಲೀಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನೋಟಿಸ್ ಕಳುಹಿಸಿದೆ.
ಸ್ವಯಂ-ಮೌಲ್ಯಮಾಪನ ಯೋಜನೆ (SAS) ಅಡಿಯಲ್ಲಿ ಸಲ್ಲಿಸಲಾದ ತೆರಿಗೆ ಮತ್ತು ಇ-ಖಾತಾ ಘೋಷಣೆಯ ನಡುವೆ ಮಾಲೀಕರು ಡೇಟಾ ಹೊಂದಾಣಿಕೆಯಾಗದಿರುವುದು ಕಂಡುಬಂದ ನಂತರ ಸಹಾಯಕ ಕಂದಾಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಯಂ-ಮೌಲ್ಯಮಾಪನ ಘೋಷಣೆ ಮತ್ತು ಇ-ಖಾತಾ ಹೊಂದಾಣಿಕೆಯಾಗದಿರುವುದು ಪತ್ತೆಯಾದ ನಂತರ, ಪ್ರತಿ ಆಸ್ತಿಗೆ ಸರಾಸರಿ 23,000 ರೂ. ಬಾಕಿ ಇದೆ ಎಂದು ಬಿಬಿಎಂಪಿ ಗಮನಕ್ಕೆ ಬಂದಿದೆ, ಹೀಗಾಗಿ ನೊಟೀಸ್ ನೀಡಿದೆ. ಮಾಲೀಕರು ನೋಟಿಸ್‌ಗಳ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು ಮತ್ತು ತಮ್ಮ ಆನ್‌ಲೈನ್‌ನಲ್ಲಿ ಸಮರ್ಥನೆ ನೀಡಬಹುದು. ಅವರು bbmpenyaya.karnataka.gov.in ಗೆ ಲಾಗಿನ್ ಮಾಡಬಹುದು. ಬಿಬಿಎಂಪಿ ಅಧಿಕಾರಿಗಳಿಂದ ನೋಟಿಸ್ ಮೂಲಕ ಕಿರುಕುಳದ ಭಯದಿಂದಾಗಿ ಕೆಲವು ನಿವಾಸಿಗಳು ಇ-ಖಾತಾ ಪಡೆಯುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಕಂದಾಯ ಅಧಿಕಾರಿಗಳು, ಫೋಟೋ, ಮಾರಾಟ ಪತ್ರಗಳು, ಜಿಪಿಎಸ್ ಸ್ಥಳ ಮತ್ತು ಇ-ಖಾತಾ ಮತ್ತು ಎಸ್‌ಎಎಸ್‌ಗಾಗಿ ಹಿಂದಿನ ಘೋಷಣೆಯನ್ನು ಪರಿಶೀಲಿಸಿದ ನಂತರ ನೋಟಿಸ್‌ಗಳನ್ನು ಕಳುಹಿಸಲಾಗುತ್ತಿದೆ, ಇದು ಎಲ್ಲಾ ರೀತಿಯ ಆಸ್ತಿಗಳಿಗೂ ಅನ್ವಯಿಸಲಾಗುತ್ತಿದೆ ಎಂದು ಹೇಳಿದರು.
ಕೆಲವು ಮಾಲೀಕರು ಅನುಮತಿ ಪಡೆದು ಎರಡು ಮಹಡಿಗಳನ್ನು ನಿರ್ಮಿಸಿ, ತೆರಿಗೆ ಪಾವತಿಸುತ್ತಿದ್ದರು. ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಿರುವ ಬಗ್ಗೆ ಬಿಬಿಎಂಪಿಗೆ ಮಾಹಿತಿ ನೀಡದೇ ಇರಬಹುದು. ಪ್ರಸ್ತುತ ವ್ಯವಸ್ಥೆಯಲ್ಲಿ, ಮೌಲ್ಯಮಾಪನ ಮಾಡದ ಮಹಡಿ ನಿರ್ಮಾಣವನ್ನು ಪರಿಗಣಿಸಿ, ನೋಟಿಸ್‌ಗಳನ್ನು ಕಳುಹಿಸಲಾಗುತ್ತಿದೆ. ಬಿಬಿಎಂಪಿಯಿಂದ ಚದರ ಅಡಿ ಬದಲಿಗೆ ಚದರ ಮೀಟರ್‌ಗಳನ್ನು ಸೇರಿಸುವಂತಹ ಯಾವುದೇ ತಪ್ಪು ಸಂಭವಿಸಿದಲ್ಲಿ, ಅದನ್ನು ಸರಿಪಡಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದರು.
ಕಟ್ಟಡದ ಬೈಲಾಗಳನ್ನು ಉಲ್ಲಂಘಿಸುವ ಮತ್ತು ಹೆಚ್ಚುವರಿ ಮಹಡಿಗಳು ಮತ್ತು ವಸತಿಗಳನ್ನು ಬಹಿರಂಗವಾಗಿ ಸೇರಿಸುವ ದೊಡ್ಡ ಬಿಲ್ಡರ್‌ಗಳು ಮತ್ತು ಅಪಾರ್ಟ್‌ಮೆಂಟ್ ಬ್ಲಾಕ್ ಮಾಲೀಕರಿಗೆ ನೋಟಿಸ್ ಕಳುಹಿಸಲು ಬಿಬಿಎಂಪಿ ಧೈರ್ಯ ತೋರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೋಕಾಸ್ ನೋಟಿಸ್ ಪಡೆದ ಮನೆಮಾಲೀಕರು ಸ್ಥಳೀಯ ಕಂದಾಯ ಕಚೇರಿಯನ್ನು ಸಂಪರ್ಕಿಸಬೇಕಾಗುತ್ತದೆ. ಪಾಲಿಕೆ ಅಧಿಕಾರಿಗಳು ಮರುಮೌಲ್ಯಮಾಪನವನ್ನು ಕೈಗೊಳ್ಳಲಿದ್ದಾರೆ ಮತ್ತು ಹೊಂದಾಣಿಕೆ ದೃಢಪಟ್ಟ ನಂತರ, ವ್ಯತ್ಯಾಸದ ಮೊತ್ತ ಅಥವಾ ಬಾಕಿಗಳನ್ನು ತೆರವುಗೊಳಿಸಬೇಕಾಗುತ್ತದೆ ಎಂದು ಬಿಬಿಎಂಪಿ ಪೂರ್ವ ವಲಯದ ಹಿರಿಯ ಸಹಾಯಕ ಕಂದಾಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಬಿಎಂಪಿ ಪ್ರಕಾರ, ಕಂದಾಯ ಇಲಾಖೆಯು ಮಾರ್ಚ್ 2026 ರ ಅಂತ್ಯದ ವೇಳೆಗೆ ಆಸ್ತಿ ತೆರಿಗೆ ಸಂಗ್ರಹದ 6,256 ಕೋಟಿ ರೂ.ಗಳ ಗುರಿಯನ್ನು ತಲುಪಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.
Advertisement