High tea ceremony: ಪ್ರಧಾನಿ ಮೋದಿ ಭೇಟಿಯಾದ ನಟ ಅನಂತ್‌ ನಾಗ್‌

ಕಾರ್ಯಕ್ರಮದಲ್ಲಿ ಅನಂತ್ ನಾಗ್ ಹಾಗೂ ಮೋದಿ ಪರಸ್ಪರ ಮಾತುಕತೆ ನಡೆಸಿದ್ದು, ಈ ಸಂದರ್ಭದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PM Narendra Modi seen speaking with veteran actor Anant Nag
ಪ್ರಧಾನಿ ಮೋದಿಯೊಂದಿಗೆ ನಟ ಅನಂತ್ ನಾಗ್.
Updated on

ನವದೆಹಲಿ: ಪದ್ಮಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ನೀಡಿದ ಹೈ ಟೀ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕನ್ನಡ ಚಿತ್ರರಂಗದ ಹಿರಿಯ ನಟ ಅನಂತನಾಗ್ ಅವರನ್ನು ಮಾತನಾಡಿಸಿದ್ದು, ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮೇ 27 ರಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕನ್ನಡದ ಹಿರಿಯ ನಟ ಅನಂತ್‌ ನಾಗ್‌‌, ರಿಕಿ ಕೇಜ್‌, ಪ್ರಶಾಂತ್‌ ಪ್ರಕಾಶ್‌, ವೆಂಕಪ್ಪ ಅಂಬಾಜಿ ಸುಗಟೇಕರ್‌ ಸೇರಿದಂತೆ ದೇಶಾದ್ಯಂತ 68 ಸಾಧಕರಿಗೆ ಪದ್ಮ ಪುರಸ್ಕಾರ ಪ್ರದಾನ ಮಾಡಿದ್ದರು.

ಈ ಸಮಾರಂಭದ ಬಳಿಕ ರಾಷ್ಟ್ರಪತಿಯವರು ಹೈ ಟೀ ಸಮಾರಂಭ ಆಯೋಜನೆ ಮಾಡಿದ್ದರು. ಅತಿಥಿಗಳಿಗೆ ಟೀ ಪಾರ್ಟಿ ಆಯೋಜನೆ ಮಾಡುವುದಕ್ಕೆ ಹೀಗೆ ಹೇಳಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಉಪಸ್ಥಿತರಿದ್ದರು.

ಈ ವೇಳೆ ಕಾರ್ಯಕ್ರಮದಲ್ಲಿ ಅನಂತ್ ನಾಗ್ ಹಾಗೂ ಮೋದಿ ಪರಸ್ಪರ ಮಾತುಕತೆ ನಡೆಸಿದರು. ಆ ಸಂದರ್ಭದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೋದಿಯವರು ಅನಂತ್ ನಾಗ್ ಅವರ ಕೈ ಹಿಡಿದುಕೊಂಡು ಅಭಿನಂದನೆ ತಿಳಿಸುತ್ತಿರುವುದು ಕಂಡು ಬಂದಿದೆ.

PM Narendra Modi seen speaking with veteran actor Anant Nag
ನಟ ಅನಂತ್ ನಾಗ್ ಗೆ ಪದ್ಮ ಪ್ರಶಸ್ತಿ ಪ್ರದಾನ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com