
ಬೆಂಗಳೂರು: ಬೆಂಗಳೂರಿನಲ್ಲಿ ನಡೆದ RCB ಸಂಭ್ರಮಾಚರಣೆಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಸ್ಪಷ್ಟನೆ ನೀಡಿದ್ದು, 'ಆಟಗಾರರಿಗೆ ಬೇರೆ ಕೆಲಸಗಳಿತ್ತು.. ವಿದೇಶಿ ಆಟಗಾರರು ರಾತ್ರಿಯೇ ದೇಶ ತೊರೆಯಬೇಕಿತ್ತು. ಹೀಗಾಗಿ ಇಂದೇ ಕಾರ್ಯಕ್ರಮ ಆಯೋಜನೆ ಮಾಡಲಾಯಿತು ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, 'RCB ಗೆಲುವಿನ ಸಂಭ್ರಮಾಚರಣೆಗಾಗಿ ನೆರೆದಿದ್ದ ಜನಸಮೂಹದ ಗಾತ್ರ ಅನಿರೀಕ್ಷಿತವಾಗಿತ್ತು. ಕೇವಲ 30 ಸಾವಿರ ಸಾಮರ್ಥ್ಯದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಲಕ್ಷಾಂತರ ಜನ ಆಗಮಿಸಿದ್ದರು. ಇದನ್ನೂ ಯಾರೂ ಊಹಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಕಾರ್ಯಕ್ರಮ ಆಯೋಜನೆ ವಿಚಾರವಾಗಿ ಸಮಯವೂ ತುಂಬಾ ಕಡಿಮೆಯಾಗಿತ್ತು, ಅದನ್ನು ಘೋಷಿಸಲಾಗಿಲ್ಲ. ಪಂದ್ಯ ನಿನ್ನೆ ಮುಕ್ತಾಯವಾದರೆ ಇಂದೇ ಸಂಭ್ರಮಾಚರಣೆ ಆಯೋಜನೆ ಮಾಡಲಾಯಿತು. ಕಾರಣ ಆಟಗಾರರಿಗೆ ಬೇರೆ ಕೆಲಸಗಳಿತ್ತು..
ವಿದೇಶಿ ಆಟಗಾರರು ರಾತ್ರಿಯೇ ದೇಶ ತೊರೆಯಬೇಕಿತ್ತು. ಹೀಗಾಗಿ ಇಂದೇ ಕಾರ್ಯಕ್ರಮ ಆಯೋಜನೆಯಾಯಿತು. ಆದಾಗ್ಯೂ ಬಹಳ ಕಡಿಮೆ ಸಮಯದಲ್ಲಿ, ಸಾಧ್ಯವಾದಷ್ಟು ಉತ್ತಮ ವ್ಯವಸ್ಥೆಗಳನ್ನು ಮಾಡಲಾಯಿತು" ಎಂದು ಹೇಳಿದರು.
ಆಟಗಾರರಿಗೆ ಬೇರೆ ಕೆಲಸಗಳಿತ್ತು.. ವಿದೇಶಿ ಆಟಗಾರರು ರಾತ್ರಿಯೇ ದೇಶ ತೊರೆಯಬೇಕಿತ್ತು
ಇದೇ ವೇಳೆ ಇಂದೇ ಏಕೆ ಸಂಭ್ರಮಾಚರಣೆ ಮಾಡಲಾಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ನಸೀರ್ ಅಹ್ಮದ್, 'ಪರಿಸ್ಥಿತಿ ಹೇಗಿತ್ತು ಎಂದರೆ.. ಆರ್ ಸಿಬಿಯ ಹಲವು ಆಟಗಾರರು ಹಾಗೂ ಸಿಬ್ಬಂದಿಗಳಿಗೆ ಬೇರೆ ಕೆಲಸಗಳಿತ್ತು. ಪ್ರಮುಖವಾಗಿ ವಿದೇಶಿ ಆಟಗಾರರು ತಮ್ಮ ಮುಂದಿನ ಕ್ರಿಕೆಟ್ ಸರಣಿಗಳಲ್ಲಿ ಪಾಲ್ಗೊಳ್ಳಲು ಇಂದೇ ದೇಶ ತೊರೆಯಬೇಕಿತ್ತು. ಹೀಗಾಗಿ ತಂಡದ ಫ್ರಾಂಚೈಸಿ ಇಂದೇ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಿತು. ವಿದೇಶಿ ಆಟಗಾರರೂ ಕೂಡ ಇಂದು ಬೆಂಗಳೂರು ಕಾರ್ಯಕ್ರಮ ಮುಗಿಸಿ ಇಲ್ಲಿಂದಲೇ ತಮ್ಮ ತವರು ದೇಶಗಳಿಗೆ ಹೊರಡುವವರಿದ್ದಾರೆ ಎಂದು ಹೇಳಿದ್ದಾರೆ.
ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ಗೆಲುವು ಸಾಧಿಸಿತು. ಆ ಮೂಲಕ 18 ವರ್ಷಗಳ ಬಳಿಕ ಆರ್ ಸಿಬಿ ಮತ್ತು ವಿರಾಟ್ ಕೊಹ್ಲಿ ತಮ್ಮ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿಹಿಡಿದಿದ್ದರು. ಇದೇ ಕಾರಣಕ್ಕೆ ಆರ್ ಸಿಬಿ ಆಟಗಾರರನ್ನು ಕರ್ನಾಟಕ ಸರ್ಕಾರ ಇಂದು ಸಂಜೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನಿಸಿತ್ತು. ಬಳಿಕ ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಜೊತೆ ಸಂಭ್ರಮಾಚರಣೆ ಮಾಡಿತು.
Advertisement