
ಮೈಸೂರು: ಐಪಿಎಲ್ ಪಂದ್ಯಾವಳಿಯ ಫೈನಲ್‌ನಲ್ಲಿ ಪಂಜಾಬ್ ತಂಡವನ್ನು ಬಗ್ಗು ಬಡಿದು ಆರ್ ಸಿಬಿ ಜಯ ಗಳಿಸಿದ ಹಿನ್ನೆಲೆ ಅಭಿಮಾನಿಗಳು ಇಂದಿರಾ ಕ್ಯಾಂಟೀನ್ ನಲ್ಲಿ ಹೋಳಿಗೆ ಊಟ ವಿತರಿಸಿದರು.
ಆರ್‌ಸಿಬಿ ತಂಡವು ಸತತ ಕೋಟ್ಯಂತರ ಕನ್ನಡಿಗರ ಕನಸನ್ನು ನನಸು ಮಾಡಿದ ಹಿನ್ನೆಲೆ ಕ್ರಿಕೆಟ್ ಹಬ್ಬ ಎಂದು ಕೆ.ಆರ್.ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ ಅವರ ನೇತೃತ್ವದಲ್ಲಿ ಮೈಸೂರು ನಗರದ ಇಂದಿರಾ ಕ್ಯಾಂಟೀನ್ ನಲ್ಲಿ ಸಾರ್ವಜನಿಕರಿಗೆ ಉಚಿತ ಹೋಳಿಗೆ ಊಟವನ್ನು ನೀಡುವ ಮೂಲಕ ಕ್ರಿಕೆಟ್ ಹಬ್ಬದಂತೆ ಸಡಗರದಿಂದ ಆಚರಿಸಿದರು.
ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಸಾರ್ವಜನಿಕರಿಗೆ ಉಚಿತ ಹೋಳಿಗೆ ಊಟ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಹಮದಾಬಾದ್ ನಲ್ಲಿ ನಡೆದ ಐಪಿಎಲ್ 2025ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಈ ಸಲ ಕಪ್ ನಮ್ದೇ ಎಂದು ಗೆದ್ದು ಬೀಗಿದೆ.
ಈ ಮೂಲಕ ಮೊದಲ ಬಾರಿಗೆ ಬೆಂಗಳೂರು ತಂಡ ಐಪಿಎಲ್ ಕಪ್'ನ್ನು ಗೆದ್ದುಕೊಂಡಿದೆ. ಆರ್'ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. ಪಂಜಾಬ್ ತಂಡ 184 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.
ಕಳೆದ 18 ವರ್ಷಗಳಿಂದ ಪ್ರಶಸ್ತಿ ಬರ ಎದುರಿಸುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡ 18 ಆವೃತ್ತಿಯ ಐಪಿಎಲ್ ನಲ್ಲಿ 6 ರನ್ ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿತು. ಇದರೊಂದಿಗೆ ಕೋಟಿ ಕೋಟಿ ಕನ್ನಡಿಗರ ಕನಸನ್ನು ನನಸಾಗಿಸಿದೆ.
Advertisement