
ಬೆಂಗಳೂರು: ಉಪನಗರ ರೈಲು ಯೋಜನೆಯನ್ನು ಪೂರ್ಣಗೊಳಿಸುವ ಸಲುವಾಗಿ ಸುದೀರ್ಘ ಸಮಯದ ನಂತರ, ಭಾರತೀಯ ರೈಲ್ವೆಯು ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್) ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
ಯೋಜನೆಯನ್ನು ಶೀಘ್ರಗಳಿಸುವ ನಿಟ್ಟಿನಲ್ಲಿ ಈ ಕ್ರಮ ಸ್ವಾಗತಾರ್ಹ ಮತ್ತು ಅಗತ್ಯವಾಗಿದೆ ಎಂದು ಕೆ-ರೈಡ್‌ನ ತಜ್ಞರು ಮತ್ತು ಅಧಿಕಾರಿಗಳು ಹೇಳಿದ್ದಾರೆ. ರೈಲ್ವೆ ಮೂರು ವರ್ಷಗಳ ಅವಧಿಗೆ ಈ ಹುದ್ದೆಯ ವಿವರಗಳನ್ನು ಪಟ್ಟಿ ಮಾಡಿದೆ.
ಕೆ-ರೈಡ್ ಮೂಲಗಳ ಪ್ರಕಾರ, ಇಲಾಖೆಯು 2021 ರಲ್ಲಿ ಪೂರ್ಣ ಸಮಯದ ವ್ಯವಸ್ಥಾಪಕ ನಿರ್ದೇಶಕರನ್ನು ಹೊಂದಿತ್ತು. ಅಮಿತ್ ಗರ್ಗ್ ಈ ಹುದ್ದೆಯನ್ನು ಅಲಂಕರಿಸಿದ್ದರು. ಅದರ ನಂತರ, ಅನೇಕ ಐಎಎಸ್ ಅಧಿಕಾರಿಗಳನ್ನು ಉಸ್ತುವಾರಿ ವಹಿಸಿಕೊಂಡು ನಿಯೋಜಿಸಲಾಗಿದೆ.
ರೈಲ್ವೆ ಇಲಾಖೆ ಅರ್ಜಿಗಳನ್ನು ಆಹ್ವಾನಿಸುತ್ತಿರುವುದರಿಂದ ಹೆಚ್ಚಿನ ಪ್ರಚಾರವನ್ನು ತೋರಿಸುತ್ತಿದೆ. ಆದರೆ ತಡವಾಗಿ ಅರ್ದಿ ಆಹ್ವಾನಿಸಿದೆ. ಜೂನ್ 2022 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಗೆ ಅಡಿಪಾಯ ಹಾಕಿದಾಗ, ಅವರು 40 ತಿಂಗಳಲ್ಲಿ ಪೂರ್ಣಗೊಳ್ಳುವ ಭರವಸೆ ನೀಡಿದ್ದರು,ಈ ಕಾಮಗಾರಿ ಅಕ್ಟೋಬರ್ 2025 ರಲ್ಲಿ ಕೊನೆಗೊಳ್ಳುತ್ತದೆ. ಆದಾಗ್ಯೂ, ಎಂಡಿ ಹುದ್ದೆಗೆ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜುಲೈ 5, 2025 ಆಗಿರುವುದರಿಂದ ಅವರ ಅಧಿಕೃತ ನೇಮಕಾತಿಗೆ ಕನಿಷ್ಠ ಎರಡು ತಿಂಗಳುಗಳು ಬೇಕಾಗುತ್ತದೆ" ಎಂದು ಮೂಲಗಳು ತಿಳಿಸಿವೆ.
ಸರ್ಕಾರವು ಹುದ್ದೆಗೆ ಮಾನದಂಡಗಳ ವಿವರಗಳನ್ನು ಪಟ್ಟಿ ಮಾಡಿದೆ: ಅರ್ಜಿದಾರರು ಮಾರ್ಚ್ 31, 2025 ರಂತೆ 55 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬಾರದು. ಅರ್ಜಿದಾರರು ಕನಿಷ್ಠ 25 ವರ್ಷಗಳ ಅನುಭವ ಹೊಂದಿರಬೇಕು, ಅದರಲ್ಲಿ ಕನಿಷ್ಠ ಐದು ವರ್ಷಗಳು ಹಿರಿಯ ಆಡಳಿತ ದರ್ಜೆಯಲ್ಲಿರಬೇಕು. ಅರ್ಜಿದಾರರು ರೈಲ್ವೆ ಸಂಬಂಧಿತ ಮೂಲಸೌಕರ್ಯ ಯೋಜನೆಗಳ ಯೋಜನೆ/ವಿನ್ಯಾಸ/ಕಾರ್ಯಗತಗೊಳಿಸುವಿಕೆಯಲ್ಲಿ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅನುಭವವನ್ನು ಹೊಂದಿರಬೇಕು.
ಯೋಜನಾ ವರದಿ ತಯಾರಿಕೆ, ಮಂಜೂರಾತಿ, ಸಂಪನ್ಮೂಲ ಕ್ರೋಢೀಕರಣ ಮತ್ತು ಸಚಿವರು ಹಾಗೂ ಇತರ ಪಾಲುದಾರರೊಂದಿಗೆ ಸಮನ್ವಯ ಸಾಧಿಸುವ ಅನುಭವವನ್ನು ಹೊಂದಿರುವುದು ಅಗತ್ಯವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಯೋಜನೆಯನ್ನು ಕಾರ್ಯಗತಗೊಳಿಸುವ ಅಗತ್ಯವನ್ನು ಗಂಭೀರವಾಗಿ ಪರಿಗಣಿಸಿಲ್ಲ . ಸುದೀರ್ಘ ವಿಳಂಬವು ಬೆಂಗಳೂರಿನ ಸಂಚಾರ ನಿರ್ವಹಣೆಯನ್ನು ಇನ್ನಷ್ಟು ಹದಗೆಡಿಸಿದೆ ಎಂದು ತಜ್ಞರು ಗಮನಸೆಳೆದಿದ್ದಾರೆ.
ನೇಮಕಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಮಾಡಬೇಕು ಹಾಗೂ ಉಪನಗರ ರೈಲು ಯೋಜನೆಯ ನಾಲ್ಕು ಕಾರಿಡಾರ್‌ಗಳು ಮತ್ತು ಕೆ-ರೈಡ್‌ನಿಂದ ಕೈಗೊಳ್ಳಲಾಗುತ್ತಿರುವ ಎರಡು ಹಳಿ ದ್ವಿಗುಣಗೊಳಿಸುವ ಯೋಜನೆಗಳ ಕೆಲಸವನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳಬೇಕು ಏಕೆಂದರೆ ಕೆಲಸವು ಕೇವಲ 10 ಪ್ರತಿಶತ ಮಾತ್ರ ಪೂರ್ಣಗೊಂಡಿದೆ ಎಂದು ಸಿಟಿಜನ್ಸ್ ಫಾರ್ ಸಿಟಿಜನ್ಸ್, ನಿವಾಸಿ ಕಲ್ಯಾಣ ಗುಂಪಿನ ರಾಜ್ ದುಗ್ಗರ್ ಹೇಳಿದ್ದಾರೆ.
ಸಬರ್ಬನ್ ರೈಲು ಬೆಂಗಳೂರಿನ ಮೂರನೇ ಸಾರ್ವಜನಿಕ ಸಾರಿಗೆ ವಿಧಾನವಾಗಲು ವಿನ್ಯಾಸಗೊಳಿಸಲಾಗಿದೆ, ಇದು ಆರ್ಥಿಕ, ವೇಗ, ಆರಾಮದಾಯಕ, ಪರಿಸರ ಸ್ನೇಹಿ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಆಯ್ಕೆಯಾಗಿದೆ" ಎಂದು ಅವರು ತಿಳಿಸಿದ್ದಾರೆ.
ತುಮಕೂರು, ಕುಣಿಗಲ್, ಮಾಗಡಿ, ರಾಮನಗರ, ಆನೇಕಲ್, ಬಂಗಾರಪೇಟೆ, ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಪಟ್ಟಣಗಳಿಗೆ ಕಾರಿಡಾರ್‌ಗಳ ವಿಸ್ತರಣೆಗೆ ನೈಋತ್ಯ ರೈಲ್ವೆ ಶೀಘ್ರ ಅನುಮತಿ ನೀಡಬೇಕೆಂದು ತಜ್ಞರು ಒತ್ತಾಯಿಸಿದ್ದಾರೆ. ಇದು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುತ್ತದೆ ಮತ್ತು ಈ ಪಟ್ಟಣಗಳ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
Advertisement