
ಬೆಂಗಳೂರು: ಅರಣ್ಯ ಪ್ರದೇಶ ಅತಿಕ್ರಮಣವನ್ನು ಕಡಿಮೆ ಮಾಡಲು, ಕರ್ನಾಟಕ ಅರಣ್ಯ ಇಲಾಖೆಯು ವಿಭಾಗೀಯ ಅರಣ್ಯ ಸಿಬ್ಬಂದಿ ಮೂಲಕ, ಅತಿಕ್ರಮಣ ಪ್ರಕರಣಗಳು ಹೆಚ್ಚಿರುವ ಸ್ಥಳಗಳ ಪಟ್ಟಿಯೊಂದಿಗೆ ಬ್ಯಾಂಕುಗಳನ್ನು ಸಂಪರ್ಕಿಸುತ್ತಿದೆ. ಅರಣ್ಯ ಪ್ರದೇಶಗಳಲ್ಲಿ ಯಾವುದೇ ನಿರ್ಮಾಣ ಮಾಡದಿರಲು ಸಾಲ ನೀಡದಂತೆ ಒತ್ತಾಯಿಸುತ್ತಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಇತ್ತೀಚೆಗೆ ಎರಡು ಕ್ರಮ ಕೈಗೊಂಡಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಒಬ್ಬರ ಭೂಮಿಗೆ ಸಾಲವನ್ನು ನೀಡದಂತೆ ಬ್ಯಾಂಕ್ ಶಾಖಾ ವ್ಯವಸ್ಥಾಪಕರನ್ನು ಕೋರಲಾಗಿದೆ. ಅತಿಕ್ರಮಣದಾರರ ವಿವರಗಳು ಮತ್ತು ರಿಟ್ ಅರ್ಜಿ ಸಂಖ್ಯೆಗಳೊಂದಿಗೆ ಅವರು ಜೂನ್ 6 ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೂರಿಗೆಪಲ್ಲಿ ಶಾಖೆಗೆ ಪತ್ರ ಬರೆದಿದ್ದಾರೆ.
ಹೊಸಹುಡ್ಯ ಗ್ರಾಮದ ಭೂಮಿಯನ್ನು ಸರ್ಕಾರದ ಅಧಿಸೂಚನೆಯ ಪ್ರಕಾರ ಜಾನಿಗಳಕುಂಟೆ ರಾಜ್ಯ ಅರಣ್ಯದ ಭಾಗವೆಂದು ಘೋಷಿಸಲಾಗಿದೆ ಎಂದು ಶ್ರೀನಿವಾಸಪುರ ಅರಣ್ಯ ವಲಯದ ಅರಣ್ಯ ಅಧಿಕಾರಿಗಳು ಪತ್ರದಲ್ಲಿ ತಿಳಿಸಿದ್ದಾರೆ.
ನಾವು ಈ ಹಿಂದೆ ಅತಿಕ್ರಮಣವನ್ನು ನಿಯಂತ್ರಿಸಲು ಮತ್ತು ಅತಿಕ್ರಮಣಗೊಂಡ ಭೂಮಿಯನ್ನು ಮರಳಿ ಪಡೆಯಲು ಹಲವು ಮಾರ್ಗಗಳನ್ನು ಪ್ರಯತ್ನಿಸುತ್ತಿದ್ದೆವು. ಜನರು ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಅಲ್ಲಿ ಮನೆಗಳು, ಶಾಲೆಗಳು ಇತ್ಯಾದಿಗಳನ್ನು ನಿರ್ಮಿಸಿದ್ದೇವೆ ಎಂದು ನ್ಯಾಯಾಲಯಗಳಿಗೆ ಮೊರೆ ಹೋಗುತ್ತಿರುವುದರಿಂದ ಸಾಬೀತುಪಡಿಸಲು ವಿಫಲರಾಗಿದ್ದೇವೆ.
ನಂತರ ಪ್ರಕರಣ ದೀರ್ಘಕಾಲದವರೆಗೆ ಮುಂದುವರಿದರೆ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಈಗ, ನಾವು ಬ್ಯಾಂಕುಗಳನ್ನು ಸಂಪರ್ಕಿಸುವ ಹೊಸ ವಿಧಾನವನ್ನು ಪ್ರಯತ್ನಿಸುತ್ತಿದ್ದೇವೆ ಎಂದು ಹೆಸರು ಹೇಳಲು ಇಚ್ಛಿಸದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ನಿರ್ಮಾಣ ಪ್ರಾರಂಭವಾದ ಮತ್ತು ಬ್ಯಾಂಕ್ ಸಾಲಗಳು ಅನುಮೋದನೆ ಪಡೆದ ಸಂದರ್ಭಗಳಲ್ಲಿ, ಜನರು ಇತರ ಆಯ್ಕೆಗಳನ್ನು ನೋಡುತ್ತಾರೆ. ಅತಿಕ್ರಮಣದಾರರಿಗೆ ಹಣಕಾಸಿನ ಬೆಂಬಲವನ್ನು ನಿರ್ಬಂಧಿಸಲು ನಾವು ಪ್ರಯತ್ನಿಸುತ್ತೇವೆ. ನ್ಯಾಯಾಲಯಗಳು ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ದೇಶಿಸಿದ್ದರೂ ಸಹ ಈ ಅತಿಕ್ರಮಣದಾರರು ನಿರ್ಮಾಣ ಚಟುವಟಿಕೆಯನ್ನು ಪ್ರಾರಂಭಿಸುತ್ತಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.
ರಾಜ್ಯದ ಎಲ್ಲಾ ಅರಣ್ಯ ವಿಭಾಗಗಳು ಈ ವಿಧಾನವನ್ನು ಅಳವಡಿಸಿಕೊಳ್ಳಬಹುದಾದ ಸ್ಥಳಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿವೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿಗೆ ಹೆಚ್ಚಿನ ಬೆಲೆ ಇದೆ, ಇಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಬೇಕಿದೆ ಎನ್ನುತ್ತಾರೆ.
Advertisement