
ಬೆಂಗಳೂರು: ರಸ್ತೆ ಸುರಕ್ಷತೆ ಮತ್ತು ಟ್ರಾಫಿಕ್ ಬಗ್ಗೆ ಶಾಲಾ ಪಠ್ಯಪುಸ್ತಕದಲ್ಲಿ ಪಾಠ ಅಳವಡಿಕೆ ಕುರಿತು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.
ರಾಜ್ಯ ಪಠ್ಯ ಕ್ರಮ ಅನುಸರಿಸುತ್ತಿರುವ ಶಾಲೆಗಳಿಗೆ ಅನ್ವಯಿಸುವಂತೆ 2,4 ,6,7,9ನೇ ತರಗತಿಯ ಮಕ್ಕಳಿಗೆ ಸಂಚಾರ ಸುರಕ್ಷತೆ ಕುರಿತು ಪಠ್ಯ ಅಳವಡಿಸಲಾಗುತ್ತಿದೆ.
ಸಂಚಾರ ಸುರಕ್ಷತೆ ಕುರಿತು ಪಠ್ಯ ಪೋಷಕರು ಒಪ್ಪುತ್ತಾರಾ. .?
ಈಗಾಗಲೇ ಇರುವ ವಿಷಯಗಳಿಗೆ ಶಿಕ್ಷಕರ ಕೊರತೆ ಒಂದೆಡೆ ಆದ್ರೆ, ಅತಿಥಿ ಶಿಕ್ಷಕರಿಗೆ ಸರಿಯಾದ ಸಮಯಕ್ಕೆ ಸಂಬಳ ನೀಡಲು ಸಮಸ್ಯೆಯಾಗಿದೆ. ಪಠ್ಯ ಸೇರಿಸುವ ಮೊದಲು ಪೋಷಕರೊಂದಿಗೆ ಹಾಗೂ ಶಿಕ್ಷಣ ಸಂಘಟನೆಗಳೊಂದಿಗೆ ಯಾವುದೇ ಸಮಲೋಚನೆ ನಡೆಸಿಲ್ಲ. ಯಾವುದೇ ಮೀಟಿಂಗ್ ಕರೆದಿಲ್ಲ. ಹೀಗಿರೋವಾಗ ಹೆಚ್ಚುವರಿ ಸಂಚಾರ ಸುರಕ್ಷತೆ ಕುರಿತು ಪಠ್ಯ ಕುರಿತು ಪೋಷಕರು ಒಪ್ಪುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.
ಟ್ರಾಫಿಕ್ ಪೊಲೀಸರಿಂದ ಸಿದ್ಧಪಡಿಸಿರುವ ಪಠ್ಯ ಕ್ರಮ:
2025-26ನೇ ಸಾಲಿನ ಪಠ್ಯ ಕ್ರಮದಲ್ಲಿ ಟ್ರಾಫಿಕ್ ಲೈಟ್, ಸಂಚಾರ, ವೈಯುಕ್ತಿಕ ಸುರಕ್ಷತೆ, ರಸ್ತೆ ಸುರಕ್ಷತೆ, ಸಡಕ್ ಕೀ ರಕ್ಷಾ ಸಬ್ ಕೀ ಸುರಾಕ್ಷ ಪಠ್ಯಗಳನ್ನು ಅಳವಡಿಸಲಾಗಿದೆ.
ಪಠ್ಯಪುಸ್ತಕ ರಚನೆ ಅಥವಾ ಪರಿಕ್ಷರಣೆ ಸಮಯದಲ್ಲಿ ಸಮಿತಿ ಅಧ್ಯಕ್ಷರ ಗಮನಕ್ಕೆ ತಂದು ಮುಂದಿನ ಕ್ರಮ ವಹಿಸಲಾಗುವುದು ಎಂದು ಕರ್ನಾಟಕ ಪಠ್ಯ ಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement