ಶರಾವತಿ ಯೋಜನೆ: ಇಂದು ಪರಿಸರ ಸಮಿತಿ ಸಭೆಯಲ್ಲಿ ವಿಚಾರಣೆ: ಇಂಧನ ಸಚಿವ ಜಾರ್ಜ್

ಇಂದು ಪರಿಸರ ಸಮಿತಿಯ ಸಭೆ ನಡೆಯಲಿದ್ದು, ಸಭೆಯಲ್ಲಿ ಶಿವಮೊಗ್ಗದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಅನುಷ್ಠಾನ ಕುರಿತು ಚರ್ಚೆಗಳು ನಡೆಯಲಿವೆ.
K J George
ಇಂಧನ ಸಚಿವ ಕೆ.ಜೆ. ಜಾರ್ಜ್
Updated on

ಬೆಂಗಳೂರು: ಶಿವಮೊಗ್ಗದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಅನುಷ್ಠಾನ ಕುರಿತು ಪರಿಸರ ಸಮಿತಿ ಮಂಗಳವಾರ ಪರಿಶೀಲನೆ ನಡೆಸಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಸೋಮವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಪರಿಸರ ಸಮಿತಿಯ ಸಭೆ ನಡೆಯಲಿದ್ದು, ಸಭೆಯಲ್ಲಿ ಶಿವಮೊಗ್ಗದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಅನುಷ್ಠಾನ ಕುರಿತು ಚರ್ಚೆಗಳು ನಡೆಯಲಿವೆ. ಯೋಜನೆಯನ್ನು ಕಾರ್ಯಗತಗೊಳಿಸಲು ಸರ್ಕಾರ ಬದ್ಧವಾಗಿದ್ದು, ವನ್ಯಜೀವಿಗಳಿಗೆ ಸಂಬಂಧಿಸಿದಂತೆ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

ಯೋಜನೆಗಾಗಿ ಇಂಧನ ಇಲಾಖೆಯು 54 ಹೆಕ್ಟೇರ್ ಭೂಮಿಯನ್ನು ಕೋರಿದ್ದು, ಅರಣ್ಯ ಇಲಾಖೆಗೆ ಪರ್ಯಾಯ ಭೂಮಿಯನ್ನು ನೀಡಲಾಗಿದೆ. ಕೆಲವೇ ಪರಿಸರವಾದಿಗಳು ಮಾತ್ರ ಯೋಜನೆಗೆ ಆಕ್ಷೇಪಣೆಗಳನ್ನು ಎತ್ತುತ್ತಿದ್ದಾರೆ. ಯೋಜನೆಗಾಗಿ ಅಧ್ಯಯನ ನಡೆಸಲು ಅನುಮತಿ ಪಡೆದಿದ್ದೆವು. ಅದರಂತೆ ಅಧ್ಯಯನ ನಡೆಸಲಾಗಿದೆ. ಈ ಯೋಜನೆಯು ಕಾರ್ಯರೂಪಕ್ಕೆ ಬಂದರೆ, ಸರಿಯಾದ ಸಂಗ್ರಹಣಾ ಸೌಲಭ್ಯದೊಂದಿಗೆ 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಬಹುದು. ಎಲ್ಲಾ ಪೈಪ್‌ಗಳು ಮತ್ತು ಕೇಬಲ್‌ಗಳನ್ನು ಭೂಗತದಲ್ಲಿ ಹಾಕಲಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MoEFCC) ತಂಡವು ಸಿದ್ಧಪಡಿಸಿದ ವರದಿಯ ವಿವರಗಳ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸಚಿವರು ತಿಳಿಸಿದರು.

K J George
ಭೂಕುಸಿತ ಅಪಾಯ, ಪಶ್ಚಿಮ ಘಟ್ಟಗಳಿಗೆ ಹಾನಿ: ಶರಾವತಿ ಜಲವಿದ್ಯುತ್ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ನಿರಾಕರಣೆ

ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಸರ್ಕಾರಿ ಸಂಸ್ಥೆಯಾದ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್) ವಾರಾಹಿ, ಇತರ ಸ್ಥಳಗಳಲ್ಲಿನ ಇದೇ ರೀತಿಯ ಯೋಜನೆಗಳಲ್ಲಿಯೂ ಕೆಲಸ ಮಾಡುತ್ತಿದೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ತಂಡ ಭೇಟಿಯ ಸಮಯದಲ್ಲಿ ಕೆಲ ಸದಸ್ಯರು 15 ಕಾರಣಗಳನ್ನು ಪಟ್ಟಿ ಮಾಡಿ, ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರೆ, ಇತರರು ತಾಂತ್ರಿಕ ಅಂಶಗಳ ಬಗ್ಗೆ ಸ್ಪಷ್ಟೀಕರಣ ಕೋರಿದ್ದಾರೆ. ಇದಕ್ಕೆ ಕೆಪಿಸಿಎಲ್ ಉತ್ತರವನ್ನೂ ನೀಡಿದ್ದು, ತಂಡದ ಸದಸ್ಯರಿಗೆ ಮನವರಿಕೆ ಮಾಡಿಕೊಡಲಾಗಿದೆ. ಈ ಕುರಿತ ಸಭೆ ಬುಧವಾರ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು,

ಪರಿಸರ ಸಮಿತಿಯ ವಿಚಾರಣೆಯ ಸಮಯದಲ್ಲಿ, ಪರಿಸರ ಪರಿಣಾಮ ಮತ್ತು ಮಾಲಿನ್ಯ ಸೇರಿದಂತೆ ಯೋಜನೆ ಕುರಿತು ಮತ್ತಷ್ಟು ಸ್ಪಷ್ಟೀಕರಣವನ್ನು ಪಡೆಯಲಾಗುವುದು. ಯೋಜನೆಯ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಕೂಡ ಪಡೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"15,000 ಮರಗಳನ್ನು ಕಡಿಯಲಾಗುವುದರಿಂದ ಯೋಜನೆಯ ಅನುಷ್ಠಾನದ ಬಗ್ಗೆ ಸಾರ್ವಜನಿಕ ಸಮಾಲೋಚನೆ/ಅಭಿಪ್ರಾಯ ಅತ್ಯಗತ್ಯ. ಪಶ್ಚಿಮ ಘಟ್ಟಗಳಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವುದರಿಂದ ಈ ಪ್ರದೇಶದ ಜನರಷ್ಟೇ ಅಲ್ಲ, ಪ್ರತಿಯೊಬ್ಬರ ಅಭಿಪ್ರಾಯವೂ ಅಗತ್ಯವಾಗಿದೆ.

ಪರಿಸರ ಯೋಜನೆಗಳ ಮೇಲ್ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ರಚಿಸಿರುವ ಕೇಂದ್ರೀಯ ಅಧಿಕಾರ ಸಮಿತಿಯು ಪ್ರಸ್ತಾವಿತ ಪ್ರದೇಶದಲ್ಲಿ ಭೂಕುಸಿತ ಸೇರಿದಂತೆ ಇತರೆ ಅಂಶಗಳ ಕುರಿತು ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com