ಚಿತ್ರದುರ್ಗ: ಕಲ್ಯಾಣ ಮಂಟಪಕ್ಕೆ ನುಗ್ಗಿ, 2ನೇ ಮದುವೆಯಾಗ್ತಿದ್ದ ಗಂಡನಿಗೆ ಚಪ್ಪಲಿಯಿಂದ ಹೊಡೆದ ಪತ್ನಿ; ಮುಂದೆ ಆಗಿದ್ದೇನು?

ಅರಸೀಕೆರೆಯ ತಿಪ್ಪಘಟ್ಟ ನಿವಾಸಿ ಕಾರ್ತಿಕ್ ನಾಯಕ್ ಎಂಬಾತ ಈಗಾಗಲೇ ಮದುವೆಯಾಗಿದ್ದರೂ ಬೇರೊಬ್ಬ ಮಹಿಳೆಯೊಂದಿಗೆ ವಿವಾಹವಾಗಲು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ.
slaps husband for attempting second marriage
2ನೇ ಮದುವೆಯಾಗ್ತಿದ್ದ ಪತಿಗೆ ಹೊಡೆದ ಪತ್ನಿ
Updated on

ಚಿತ್ರದುರ್ಗ: ಮದುವೆ ಮಂಟಪಕ್ಕೆ ನುಗ್ಗಿದ ಮಹಿಳೆಯೊಬ್ಬರು, ಗುಟ್ಟಾಗಿ ಎರಡನೇ ಮದುವೆಯಾಗುತ್ತಿದ್ದ ಪತಿಯ ಕೆನ್ನೆಗೆ ಬಾರಿಸಿ ಮದುವೆ ನಿಲ್ಲಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಅರಸೀಕೆರೆಯ ತಿಪ್ಪಘಟ್ಟ ನಿವಾಸಿ ಕಾರ್ತಿಕ್ ನಾಯಕ್ ಎಂಬಾತ ಈಗಾಗಲೇ ಮದುವೆಯಾಗಿದ್ದರೂ ಬೇರೊಬ್ಬ ಮಹಿಳೆಯೊಂದಿಗೆ ವಿವಾಹವಾಗಲು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ.

ದಾವಣಗೆರೆ ಜಿಲ್ಲೆಯ ಮುಶೆನಾಳದ ಅವರ ಪತ್ನಿ ತನುಜಾ ಅವರು ತಮ್ಮ ಕುಟುಂಬದೊಂದಿಗೆ ಮದುವೆ ಮಂಟಪಕ್ಕೆ ನುಗ್ಗಿ ನುಗ್ಗಿದ್ದು, ಎಲ್ಲರ ಎದುರು ತನ್ನ ಪತಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ವರದಕ್ಷಿಣೆಗಾಗಿ ಮರುಮದುವೆಯಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ, ಚಪ್ಪಲಿಯಿಂದ ಹೊಡೆದಿದ್ದಾಳೆ.

ಇದರಿಂದ ಕಾರ್ತಿಕ್ ಅವರ ಮೊದಲ ಮದುವೆಯ ಬಗ್ಗೆ ತಿಳಿದಿಲ್ಲದ ಎರಡನೇ ವಧುವಿನ ಕುಟುಂಬ ಆಘಾತಕ್ಕೊಳಗಾಗಿ, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಚಿತ್ರದುರ್ಗ ನಗರ ಪೊಲೀಸರು ವಿಷಯದ ಬಗ್ಗೆ ತನಿಖೆ ಆರಂಭಿಸಿದ್ದಾರೆ.

slaps husband for attempting second marriage
ಹಾಸನ: ಮುಹೂರ್ತಕ್ಕೂ ಮುನ್ನ ಪ್ರಿಯಕರನಿಂದ ಕರೆ; ಮಾಂಗಲ್ಯಧಾರಣೆ ವೇಳೆ ಮದುವೆಗೆ ಒಪ್ಪದ ವಧು; ಗರಬಡಿದಂತೆ ನಿಂತ ವರ!

ಕಳೆದ ತಿಂಗಳು ಹಾಸನದಲ್ಲಿ ಕೊನೆ ಕ್ಷಣದಲ್ಲಿ ವಧು ನಿರಾಕರಿಸಿದ್ದರಿಂದ ಮದುವೆ ಮುರಿದುಬಿದ್ದಿತ್ತು. ನಾನು ಬೇರೆ ಯುವಕನನ್ನು ಪ್ರೀತಿಸುತ್ತದ್ದೇನೆ. ಈ ಮದುವೆ ಬೇಡ ಎಂದು ಹೇಳಿ ಯುವತಿ ಮದುವೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಳು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com