
ಹಾಸನ: ರಾಜ್ಯದಲ್ಲಿ ಇತ್ತೀಚೆಗೆ ಮದುವೆ ಮಂಟಪದಲ್ಲಿ ಕೊನೆಯ ಕ್ಷಣಗಳಲ್ಲಿ ಮದುವೆಗಳು ಮುರಿದು ಬೀಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಅದಕ್ಕೆ ಸೇರ್ಪಡೆಯೆಂಬಂತೆ ಹಾಸನದಲ್ಲಿ ಪ್ರಕರಣವೊಂದು ನಡೆದಿದೆ. ಶುಭ ಮುಹೂರ್ತದಲ್ಲಿ ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವಧು ನನಗೆ ಈ ಮದುವೆ ಇಷ್ಟ ಇಲ್ಲ ಅಂತ ಹೇಳಿದ್ದು ಮದುವೆ ಮುರಿದುಬಿದ್ದಿದೆ.
ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಮದುವೆ ಮುಹೂರ್ತಕ್ಕೂ ಮುನ್ನ ಯುವತಿಗೆ ಆಕೆಯ ಪ್ರಿಯಕರ ಕರೆ ಮಾಡಿದ್ದನು. ಆದಾದ ತಕ್ಷಣವೇ ನನಗೆ ಈ ಮದುವೆ ಬೇಡ ಎಂದು ವಧು ತೀವ್ರ ವಿರೋಧ ವ್ಯಕ್ತಪಡಿಸಿದ್ದಾಳೆ. ಈ ಘಟನೆ ವರನಿಗೆ ಆಘಾತ ತಂದಿದ್ದು ಮಾಂಗಲ್ಯಸರವನ್ನು ಕೈಯಲ್ಲೇ ಹಿಡಿದು ಗರಬಡಿದವನಂತೆ ನಿಂತಿದ್ದನು. ಇನ್ನು ತಮ್ಮ ಮಗಳ ಮನವೊಲಿಸಲು ಪೋಷಕರು, ಸಂಬಂಧಿಕರು ಎಷ್ಟೇ ಪ್ರಯತ್ನಿಸಿದರು. ಇದಕ್ಕೆ ವಧುವಿನ ಮನಸ್ಸು ಕರಗಲಿಲ್ಲ.
ಇದನ್ನು ನೋಡಿದ ವರ ಕೂಡ ಕೊನೆಗೆ ನನಗೆ ಈ ಮದುವೆ ಬೇಡ ಎಂದು ಕಣ್ಣೀರು ಹಾಕಿದ್ದಾನೆ. ಗದ್ದಲ ಗಲಾಟೆ ನಡುವೆ ಮದುವೆಯೇ ನಿಂತು ಹೋಗಿದ್ದು ಪೊಲೀಸರ ಮಧ್ಯಸ್ಥಿತಿಕೆಯಲ್ಲಿ ರಾಜಿ ಸಂಧಾನ ನಡೆಯಿತು. ಮೂರು ತಿಂಗಳ ಮುಂಚೆಯೇ ಮದುವೆ ನಿಶ್ಚಯವಾಗಿತ್ತು. ಆದರೂ ವಧು ಕೊನೆಯ ಕ್ಷಣದಲ್ಲಿ ತನಗೆ ಮದುವೆ ಬೇಡ ಎಂದು ಹೇಳಿದ್ದರ ವಿರುದ್ಧ ವರನ ಕಡೆಯವರು ಅಸಮಾಧಾನ ಹೊರಹಾಕಿದ್ದಾರೆ.
Advertisement