
ಬೆಂಗಳೂರು: ಜಾತಿ ಗಣತಿಯಲ್ಲಿ ಮರುಸಮೀಕ್ಷೆಯಿಂದ ಗೊಂದಲಗಳು ನಿವಾರಣೆಯಾಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿಯವರು ಗುರುವಾರ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಇರುವ ಜಾತಿ ಗಣತಿ ವರದಿಯಲ್ಲಿ ಸಾಕಷ್ಟು ಗೊಂದಲಗಳಿವೆ. ಮರು ಸಮೀಕ್ಷೆಯಿಂದ ಈ ಗೊಂದಲಗಳು ನಿವಾರಣೆಯಾಗುವ ನಿರೀಕ್ಷೆಗಳಿವೆ ಎಂದು ಹೇಳಿದರು.
ವರದಿ ಅವೈಜ್ಞಾನಿಕ, ಹಳೆಯ ವರದಿ ಎಂದ ದೂರುಗಳು ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್, ರಣದೀಪ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಲವು ಉನ್ನತ ನಾಯಕರು ಮರು ಸಮೀಕ್ಷೆಗೆ ನಿರ್ಧರಿಸಿದ್ದಾರೆ.
ನಾವು ನಮ್ಮ ನಾವು ಅಭಿಪ್ರಾಯ ಕೊಟ್ಟಿದ್ದೇವೆ. ಯಾರಿಗೂ ತೊಂದರೆಯಾಗಬಾರದು. ಈಗಿನ ವರದಿ ಕರೆಕ್ಟ್ ಆಗಿದೆ. ಗೊಂದಲ ಇದ್ದರೆ ಪರಿಶೀಲನೆ ಮಾಡಬಹುದು. ಮರು ಸರ್ವೇ ಇಲ್ಲ, ಕರೆಕ್ಷನ್ ಅಷ್ಟೇ. ಯಾವುದನ್ನೇ ಮಾಡಲಿ, ತೊಂದರೆ ಏನಿದೆ. ಎಲ್ಲದಕ್ಕೂ ವಿರೋಧ, ಪರ ಇದ್ದೇ ಇರುತ್ತದೆ ಎಂದು ತಿಳಿಸಿದರು.
Advertisement