
ಬೆಂಗಳೂರು: 10 ಕೋಟಿ ರೂ. ಮೌಲ್ಯದ ಮಾದಕವಸ್ತು ಸಾಗಾಟ ಮಾಡುತ್ತಿದ್ದ ವಿದೇಶಿ ಮಹಿಳೆಯನ್ನು ಸಿಸಿಬಿ ಮತ್ತು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯಿಂದ 10 ಕೋಟಿ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ.
ಅಕಿನ್ವುನ್ಮಿ ಪ್ರಿನ್ಸೆಸ್ ಇಫೆಯೊಲುವಾ ಅಲಿಯಾಸ್ ಪ್ರಿನ್ಸೆಸ್ ಳನ್ನು ರಾಜನುಕುಂಟೆ ಮುಖ್ಯ ರಸ್ತೆಯ ತಾರಾಹುನಾಸೆ ಗ್ರಾಮದಲ್ಲಿ ಬಂಧಿಸಲಾಯಿತು. ಕೇಶ ವಿನ್ಯಾಸಕಿ ಮತ್ತು ಉಗುರು ಕಲಾವಿದೆಯಾಗಿರುವ 25 ವರ್ಷದ ಮಹಿಳೆ ಬಳಿ ಅಪಾರ ಪ್ರಮಾಣದ ಮಾದಕವಸ್ತು ಇತ್ತು.
ಆಫ್ರಿಕನ್ ವ್ಯಾಪಾರಿಗಳ ಗುಂಪಿಗೆ ಮಾದಕ ದ್ರವ್ಯಗಳನ್ನು ಹಸ್ತಾಂತರಿಸಲು ಆಕೆ ಬಂದಿದ್ದಳು. ಆ ಪ್ರದೇಶದಲ್ಲಿ ಎರಡು ಸ್ಕೂಟರ್‌ಗಳಲ್ಲಿ ನಾಲ್ಕು ಪುರುಷರು ಬಂದಿದ್ದನ್ನು ನಾವು ಗಮನಿಸಿದೆವು, ಆದರೆ ಅವರು ಪಾರ್ಸೆಲ್ ಸಂಗ್ರಹಿಸಲಿಲ್ಲ. ಪ್ರಿನ್ಸೆಸ್ ಬ್ಯಾಗ್‌ನೊಂದಿಗೆ ನಿಂತಿದ್ದಾಗ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಬ್ಯಾಗ್‌ನಲ್ಲಿ 11 ಹೊಸ ಚೂಡಿದಾರ್‌ಗಳು ಸಹ ಇದ್ದವು. ವಿಚಾರಣೆಯ ಸಮಯದಲ್ಲಿ, ಪ್ರಿನ್ಸೆಸ್ ಬ್ಯಾಗ್‌ನ ವಿಷಯಗಳ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿಕೊಂಡಳು ಮತ್ತು ದೆಹಲಿಯಲ್ಲಿರುವ ಸ್ನೇಹಿತರೊಬ್ಬರು ಅದನ್ನು ಕಪ್ಪು ಟೋಪಿ ಧರಿಸಿದ ವ್ಯಕ್ತಿಗೆ ಹಸ್ತಾಂತರಿಸುವಂತೆ ತಿಳಿಸಿದ್ದರು ಎಂದು ಹೇಳಿದ್ದಾಳೆ. ಸಲೂನ್ ಪ್ರಾರಂಭಿಸಲು ಬೆಂಗಳೂರಿಗೆ ಬಂದಿರುವುದಾಗಿ ಪೊಲೀಸರಿಗೆ ತಿಳಿಸಿದಳು.
ಬಂಧಿತ ಮಹಿಳೆ ಕಳೆದ 3 ವರ್ಷದ ಹಿಂದೆ ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದಳು. ಆರಂಭದಲ್ಲಿ ನವದೆಹಲಿಯಲ್ಲಿ ವಾಸವಾಗಿದ್ದಳು. ನಂತರ ತೆಲಂಗಾಣ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುವುದಾಗಿ ಎಜುಕೇಷನ್ ವೀಸಾ ಪಡೆದಿದ್ದಳು. ನಂತರ ಕಾಲೇಜಿಗೆ ದಾಖಲಾಗದೆ ಡ್ರಗ್ಸ್ ಪೆಡ್ಲಿಂಗ್‍ಗೆ ಇಳಿದಿದ್ದಳು. 2022 ರಲ್ಲಿ ಆಕೆಯ ವೀಸಾ ಅವಧಿ ಮುಗಿದಿದ್ದು ಅಂದಿನಿಂದ ಅವಳು ಅಕ್ರಮವಾಗಿ ವಾಸವಿದ್ದಳು.
ದೆಹಲಿಯಿಂದ ಬೆಂಗಳೂರಿಗೆ ಬಸ್ ಮೂಲಕ ಮಾದಕವಸ್ತು ಸಾಗಾಟ ಮಾಡಿದ್ದಳು. ಚಿಕ್ಕಜಾಲ ಠಾಣಾ ವ್ಯಾಪ್ತಿಯ ರಾಜಾನುಕುಂಟೆ ಬಳಿ ಮಾದಕವಸ್ತು ವ್ಯಾಪಾರ ಮಾಡುವಾಗ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಬಂಧಿತಳಿಂದ 5 ಕೆಜಿ 325ಗ್ರಾಂ ಎಂಡಿಎಂಎ ಹಾಗೂ ಆ್ಯಪಲ್ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.
ದೆಹಲಿಯಲ್ಲಿರುವ ಅವಳ ಗೆಳೆಯನ ಬಗ್ಗೆ ಸುಳಿವು ಸಿಕ್ಕಿದ್ದು, ಸದ್ಯ ಅವನು ತಲೆಮರೆಸಿಕೊಂಡಿದ್ದಾನೆ. ಹೆಚ್ಚಿನ ತನಿಖೆಗಾಗಿ ಅವಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು. ನಗರದಲ್ಲಿ ಅವಳ ವಿರುದ್ಧ ದಾಖಲಾಗಿರುವ ಮೊದಲ ಪ್ರಕರಣ ಇದಾಗಿದ್ದು, ದೇಶದಲ್ಲಿ ಬೇರೆಡೆ ಯಾವುದೇ ಪ್ರಕರಣಗಳಿವೆಯೇ ಎಂದು ನಾವು ಇನ್ನೂ ಪರಿಶೀಲಿಸಬೇಕಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement