ಧಾರವಾಡ: KIADB 'ಡಬಲ್ ಪರಿಹಾರ ಹಗರಣ'; ಇಡಿಯಿಂದ 1.8 ಕೋಟಿ ರೂ TDS ಹಣ ಜಪ್ತಿ

ಭೂ ಸ್ವಾಧೀನಕ್ಕಾಗಿ ಪರಿಹಾರದ ವಂಚನೆ ಹಗರಣದಲ್ಲಿ ಧಾರವಾಡದ ನಿವೃತ್ತ ವಿಶೇಷ ಭೂ ಸ್ವಾಧೀನ ಅಧಿಕಾರಿ ವಿ.ಡಿ. ಸಜ್ಜನ್, KIADB ಮತ್ತು ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಇತರ ಆರೋಪಿಗಳೊಂದಿಗೆ ಶಾಮೀಲಾಗಿದ್ದಾರೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಧಾರವಾಡದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB)ಯ 'ಡಬಲ್ ಪರಿಹಾರ ಹಗರಣ'ದಲ್ಲಿ ನಕಲಿ ಪ್ಯಾನ್ ಸಲ್ಲಿಸಿ ಜಮಾ ಮಾಡಲಾದ 1.80 ಕೋಟಿ ರೂ. ಟಿಡಿಎಸ್(TDS) ಹಣವನ್ನು ಜಾರಿ ನಿರ್ದೇಶನಾಯಲ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.

ಭೂ ಸ್ವಾಧೀನಕ್ಕಾಗಿ ಪರಿಹಾರದ ವಂಚನೆ ಹಗರಣದಲ್ಲಿ ಧಾರವಾಡದ ನಿವೃತ್ತ ವಿಶೇಷ ಭೂ ಸ್ವಾಧೀನ ಅಧಿಕಾರಿ ವಿ.ಡಿ. ಸಜ್ಜನ್, KIADB ಮತ್ತು ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಇತರ ಆರೋಪಿಗಳೊಂದಿಗೆ ಶಾಮೀಲಾಗಿದ್ದಾರೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಕ್ಕೆ ಸಲ್ಲಿಸಿದ ಅರ್ಜಿಗಳ ಮೂಲಕ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ನವೀಕರಿಸುವ ಮೂಲಕ ಆರೋಪಿಗಳು ನಕಲಿ ಆಧಾರ್ ಗುರುತುಗಳನ್ನು ರಚಿಸಿದ್ದಾರೆ ಎಂದು ವರದಿ ತಿಳಿಸಿದೆ.

ನಕಲಿ ಪ್ಯಾನ್‌ಗಳನ್ನು ಪಡೆಯಲು ಈ ನಕಲಿ ವಿವರಗಳನ್ನು ಬಳಸಲಾಗುತ್ತಿತ್ತು. ಪ್ಯಾನ್‌ಗಳನ್ನು ಬಳಸಿಕೊಂಡು, ಆರೋಪಿಗಳು ಬ್ಯಾಂಕ್ ಖಾತೆಗಳನ್ನು ತೆರೆದು KIADB ಮುಂದೆ ಎರಡನೇ ಬಾರಿಗೆ ಪರಿಹಾರ ಹಕ್ಕುಗಳನ್ನು ಸಲ್ಲಿಸಿದರು, ಈಗಾಗಲೇ ಪರಿಹಾರ ಪಡೆದ ಅಥವಾ ಮರಣ ಹೊಂದಿದ ಭೂಮಾಲೀಕರನ್ನು ಗುರಿಯಾಗಿರಿಸಿದ್ದರು ಎಂದು ಅದು ಹೇಳಿದೆ.

ನಂತರ ಪರಿಹಾರದ ಮೊತ್ತವನ್ನು ನಕಲಿ ಖಾತೆಗಳಿಗೆ ಜಮಾ ಮಾಡಲಾಯಿತು. ಸುಮಾರು 46 ಕೋಟಿ ರೂ.ಗಳೆಂದು ಅಂದಾಜಿಸಲಾದ ಹಣವನ್ನು ನಗದು ರೂಪದಲ್ಲಿ ಹಿಂಪಡೆಯಲಾಯಿತು. ಹಣ ಹಿಂಪಡೆಯುವಿಕೆಯ ಸಮಯದಲ್ಲಿ, 1961 ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 194N ಅಡಿಯಲ್ಲಿ ಟಿಡಿಎಸ್ ಕಡಿತಗೊಳಿಸಿ ನಕಲಿ ಪ್ಯಾನ್‌ ಕಾರ್ಡ್ ಗಳಿಗೆ ಜಮಾ ಮಾಡಲಾಯಿತು.

ಇಡಿ ಈಗ ಈ ಟಿಡಿಎಸ್ ಮೊತ್ತವನ್ನು "ಅಪರಾಧದ ಆದಾಯ" ಎಂದು ವರ್ಗೀಕರಿಸಿದೆ. ಹಣವನ್ನು ಹಿಂತೆಗೆದುಕೊಂಡ ನಂತರ ಆಧಾರ್ ಡೇಟಾಬೇಸ್‌ನಲ್ಲಿರುವ ಜನಸಂಖ್ಯಾ ವಿವರಗಳನ್ನು ಮೂಲ ಗುರುತಿಗೆ ಬದಲಾಯಿಸಲಾಯಿತು.

Representational image
KIADB ಪರಿಹಾರದಲ್ಲಿ ವಂಚನೆ ಪ್ರಕರಣ: ಜಾರಿ ನಿರ್ದೇಶನಾಲಯದಿಂದ ಇಬ್ಬರ ಬಂಧನ

ಏನಿದು ಘಟನೆ?

ಕೆಐಎಡಿಬಿ(KIADB)ಯಲ್ಲಿ ನಕಲಿ ರೈತರ ಖಾತೆಗಳನ್ನು ಸೃಷ್ಟಿಸಿ, ಇಲಾಖೆಯ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿದ್ದ ವ್ಹಿ. ಡಿ. ಸಜ್ಜನ್ ತಮ್ಮ ನಿವೃತ್ತಿಯ ಕೊನೆಯ ದಿನವೇ 30 ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಿರುವುದು ಬೆಳಕಿಗೆ ‌ಬಂದಿತ್ತು.

ಸರ್ಕಾರ ಹಾಗೂ ರೈತರ ನಡುವೆ ಕೆಲಸ ಮಾಡುವ ಇಲಾಖೆ ಇದಾಗಿದ್ದು, ರೈತರಿಂದ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಕೈಗಾರಿಕೆಗಳಿಗೆ ನೀಡಲಾಗುತ್ತದೆ. ಆದರೆ, ಇದನ್ನೇ ದಂಧೆ ಮಾಡಿಕೊಂಡ ಅಧಿಕಾರಿಗಳು ಹಾಗೂ ಏಜೆಂಟರು ನಿರಂತರವಾಗಿ ಹಣವನ್ನು ಲೂಟಿ ಮಾಡುತ್ತಲೇ ಬಂದಿದ್ದಾರೆ. ಇದೀಗ ಜಾರಿ ನಿರ್ದೇಶನಾಲಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com