
ಮಂಗಳೂರು: ಟೆಲ್ ಅವೀವ್ ಮತ್ತು ಟೆಹ್ರಾನ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಈ ನಡುವೆ ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿರುವ ನೂರಾರು ಕನ್ನಡಿಗರು ಆತಂಕದಲ್ಲಿ ಬದುಕುವಂತಾಗಿದೆ.
ಕೆಲವು ತಿಂಗಳ ಹಿಂದೆ ಇಸ್ರೇಲ್-ಹಮಾಸ್ ನಡುವೆ ನಡೆದಿದ್ದ ಸಂಘರ್ಷಕ್ಕಿಂತಲೂ ಈಗಿನ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ ಎಂದು ಇಸ್ರೇಲ್ ನಲ್ಲಿ ನೆಲೆಸಿರುವ ಕನ್ನಡಿಗರು ಹೇಳಿದ್ದಾರೆ.
ನಾವು ನಿಜವಾಗಿಯೂ ಅಸುರಕ್ಷಿತರಾಗಿದ್ದೇವೆ. ಇಸ್ರೇಲ್-ಹಮಾಸ್ ಸಂಘರ್ಷದ ಸಮಯದಲ್ಲಿ ನಮಗೆ ಇಷ್ಟು ಭಯವಾಗಿರಲಿಲ್ಲ. ಆದರೆ ಈಗ, ಹಗಲು, ರಾತ್ರಿ ಕ್ಷಿಪಣಿಗಳ ಮಳೆ ಸುರಿಯುತ್ತಿದೆ ಎಂದು ಟೆಲ್ ಅವೀವ್‌ನಲ್ಲಿ ಕೆಲಸ ಮಾಡುತ್ತಿರುವ ಮಂಗಳೂರು ಮೂಲದ ರೋಷನ್ ವೀಗಾಸ್ ಎಂಬವವರು ಹೇಳಿದ್ದಾರೆ.
ಮಕ್ಕಳಿಬ್ಬರನ್ನು ನೋಡಿಕೊಳ್ಳುವ ಸಲುವಾಗಿ ನನ್ನ ಪತ್ನಿ ಕೆಲಸ ಮಾಡುವುದನ್ನು ನಿಲ್ಲಿಸಿದ್ದಾರೆ. ನಮ್ಮ ಫೋನ್ ಗಳಿಗೆ ನಿರಂತರವಾಗಿ ಎಚ್ಚರಿಕೆ, ಮೇಲ್ವಿಚಾರಣೆ ಫೋನ್ ಗಳು ಬರುತ್ತಿವೆ. ಫೋನ್ ಬಂದ ಕೂಡಲೇ ಹತ್ತಿರದ ಬಂಕರ್ ಗಳಿಗೆ ತೆರಳುತ್ತಿದ್ದೇವೆಂದು ತಿಳಿಸಿದ್ದಾರೆ.
ಭಾನುವಾರ ಕ್ಷಿಪಣಿಯೊಂದು ನಾವಿರುವ ಸ್ಥಳದಿಂದ ಕೇವಲ 2 ಕಿಮೀ ದೂರದಲ್ಲಿ ಬಿದ್ದಿದೆ. ಈ ಮೊದಲು ರಾತ್ರಿ ವೇಳೆ ದಾಳಿ ನಡೆಯುತ್ತಿದ್ದವು. ಈಗ ಹಗಲೂ ಕೂಡ ಸುರಕ್ಷಿತವಲ್ಲ ಎಂಬ ಭಾವನೆ ಮೂಡತೊಡಗಿದೆ. ಈ ಪರಿಸ್ಥಿತಿಯಲ್ಲೂ ನಮಗೆ ಭಾರತಕ್ಕೆ ಮರಳು ಸಾಧ್ಯವಿಲ್ಲ. ಏಕೆಂದರೆ, ಇಲ್ಲಿಗೆ ಬರಲು ರೂ.30 ಲಕ್ಷ ಸಾಲಿ ಮಾಡಿದ್ದೇವೆ. ಭಾರತಕ್ಕೆ ಹಿಂತಿರುಗಿದರೆ ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಂಗಳೂರಿನ ಕಂಕನಾಡಿಯವರಾದ ಜಾನೆಟ್ ಲೋಬೊ ಅವರೂ ಕೂಡ ಇದೇ ರೀತಿಯ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.
ಎರಡು ದಶಕಗಳಿಗೂ ಹೆಚ್ಚು ಕಾಲ ಇಸ್ರೇಲ್‌ನಲ್ಲಿದ್ದು, ಈಗಷ್ಟೇ ಟೆಲ್ ಅವೀವ್‌ನಲ್ಲಿ ಸುಮಾರು 50 ಲಕ್ಷ ರೂ.ಗಳ ಸಾಲದೊಂದಿಗೆ ಜನರಲ್ ಸ್ಟೋರ್ ಪ್ರಾರಂಭಿಸಿದ್ದೆ. ಮಂಗಳೂರಿನಲ್ಲಿ ನನ್ನ ಕುಟುಂಬವಿದ್ದು, ಅವರು ವಾಪಸ್ ಬರುವಂತೆ ಹೇಳುತ್ತಿದ್ದಾರೆ. ಆದರೆ, ನನಗದು ಸಾಧ್ಯವಿಲ್ಲ. ಈ ಅಂಗಡಿಯೇ ನನಗೆ ಎಲ್ಲವೂ ಆಗಿದೆ. ಸಂಘರ್ಷದಿಂದಾಗಿ ಬೇಗನೆ ಅಂಗಡಿ ಬಂದ್ ಮಾಡಿ ಸುರಕ್ಷಿತ ಪ್ರದೇಶಕ್ಕೆ ತೆರಳುತ್ತಿದ್ದೇನೆಂದು ಅವರು ಹೇಳಿದ್ದಾರೆ.
ಔಪಚಾರಿಕ ವಲಯದಲ್ಲಿ ಕೆಲಸ ಮಾಡುವವರು ಸಂಘರ್ಷದ ಹೊರತಾಗಿಯೂ ವೇತನ ಪಡೆಯುತ್ತಿದ್ದರೆ, ಅನೌಪಚಾರಿಕ ವಲಯದಲ್ಲಿರುವವರು ಸಂಕಷ್ಟದಲ್ಲಿದ್ದಾರೆ. ನಮ್ಮ ನೌಕರಿಗಳ ಉಳಿಸಿಕೊಳ್ಳಲು ಪ್ರಾಣವನ್ನು ಪಣಕ್ಕಿಚ್ಚು ಪ್ರತಿದಿನ 30 ಕಿ.ಮೀ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೇವೆಂದು ರೋಷನ್ ಅವರು ಹೇಳಿದ್ದಾರೆ.
ನಮ್ಮ ನಿಜವಾ ತಿಂಗಳಾಂತ್ಯದಲ್ಲಿ ಬಿಲ್‌ಗಳು ಬಾಕಿ ಕಟ್ಟುವಾಗ ಪ್ರಾರಂಭವಾಗುತ್ತದೆ. ಸಮುದಾಯದ ಬೆಂಬಲದಿಂದಾಗಿ ಆಹಾರ ಲಭ್ಯವಾಗುತ್ತಿದೆ. ಆದರೆ, ಬಾಡಿಗೆ, ಸಾಲಗಳು ಮತ್ತು ಇತರ ಅಗತ್ಯ ವಸ್ತುಗಳಿಗೇನು ಮಾಡುವುದು? ಎಂದು ಕಾವಲುಗಾರನಾಗಿ ಕೆಲಸ ಮಾಡುತ್ತಿರುವ ಮತ್ತೊಬ್ಬ ಮಂಗಳೂರು ಮೂಲದ ವ್ಯಕ್ತಿ ಕಣ್ಣೀರಿಟ್ಟಿದ್ದಾರೆ.
Advertisement