
ಮೈಸೂರು: ಮೈಕ್ರೋಫೈನಾನ್ಸ್ ವಸೂಲಾತಿ ಏಜೆಂಟರು 1,280 ರೂಪಾಯಿಗಳ ಬಾಕಿ ಸಾಲದ ಕಂತಿನ ಬಗ್ಗೆ ವಿಚಾರಣೆ ನಡೆಸಲು ಏಳು ವರ್ಷದ ಬಾಲಕಿಯನ್ನು ಕರೆದುಕೊಂಡು ಹೋಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಪುರಿಗಾಲಿ ಗ್ರಾಮದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ ಜಾಲಹಳ್ಳಿ ಗ್ರಾಮದ ಮೂಲದ ಬಾಲಕಿಯ ಪೋಷಕರಾದ ನವೀನ್ ಮತ್ತು ಪ್ರಮೀಳಾ ಅವರು ಮೈಕ್ರೋಫೈನಾನ್ಸ್ ಸಂಸ್ಥೆಯಿಂದ 30,000 ರೂಪಾಯಿ ಸಾಲ ಪಡೆದಿದ್ದರು. 13 ತಿಂಗಳಲ್ಲಿ ಸಾಲವನ್ನು ಮರುಪಾವತಿ ಮಾಡುವುದಾಗಿ ಮಾತು ಕೊಟ್ಟು ಪಾವತಿಸಿಕೊಂಡು ಬರುತ್ತಿದ್ದರು. ಆದರೆ ಇತ್ತೀಚಿನ ಕಂತು ವಿಳಂಬ ಮಾಡಿದರು.
ಇದರಿಂದಾಗಿ ವಸೂಲಾತಿ ಏಜೆಂಟರು ಮನೆಗೆ ಬಂದು ಮನೆಯಲ್ಲಿ ಯಾರೂ ಇಲ್ಲದ್ದನ್ನು ಕಂಡು ಸಂಬಂಧಿಕರ ಮನೆಯಿಂದ ಮಗುವನ್ನು ಬಲವಂತವಾಗಿ ಕರೆದುಕೊಂಡು ಹೋದರು.
ನನ್ನ ಪತ್ನಿ ಮತ್ತು ಸಂಬಂಧಿಕರು ಕೆಲಸದ ಮೇಲೆ ಹೊರಗೆ ಹೋಗಿದ್ದರು. ಹಣ ಸ್ಥಳದಲ್ಲೇ ಪಾವತಿಸದಿದ್ದಾಗ, ಏಜೆಂಟರು ನಮ್ಮ ಮಗಳ ಬಳಿಗೆ ಹೋಗಿ ಪತ್ನಿ ಇರುವಲ್ಲಿಗೆ ಕರೆದೊಯ್ಯುವಂತೆ ಒತ್ತಾಯಿಸಿದರು ಎಂದು ಆರೋಪಿಸಲಾಗಿದೆ. ಇಂದು ಸಂಜೆ ಹಣ ಪಾವತಿಸಲಾಗುವುದು ಎಂದು ಏಜೆಂಟರಿಗೆ ಹೇಳಲಾಗಿದ್ದರೂ, ತಕ್ಷಣವೇ ಪಾವತಿಸಬೇಕೆಂದು ಒತ್ತಾಯಿಸಿದರು ಎಂದು ನವೀನ್ ಹೇಳಿದರು.
Advertisement