
ಬೆಂಗಳೂರು: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಪಯಣ ಮುಂದೂಡಲ್ಪಟ್ಟಿದ್ದ ಆಕ್ಸಿಯಮ್ -4 ಮಿಷನ್(Axiom-4 mission) ಭಾರತೀಯ ಕಾಲಮಾನ ಪ್ರಕಾರ ಇಂದು ಬುಧವಾರ ಮಧ್ಯಾಹ್ನ 12.05 ನಿಮಿಷಕ್ಕೆ ಬಾಹ್ಯಾಕಾಶಕ್ಕೆ ಜಿಗಿಯಲಿದ್ದು, ಕೌಂಟೌನ್ ಶುರುವಾಗಿದೆ. ಈ ಬಗ್ಗೆ ಘೋಷಣೆ ಮಾಡಿರುವ ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತ (NASA) ನಾಳೆ ಗುರುವಾರ ನಸುಕಿನ ಜಾವ 2.09 ( ಬೆಳಗಿನ ಜಾವ 11.39 ಭಾರತೀಯ ಕಾಲಮಾನ) ಕ್ಕೆ ಬ್ಯಾಕಪ್ ಅವಕಾಶ ಲಭ್ಯವಿರುತ್ತದೆ ಎಂದು ತಿಳಿಸಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಗೆ ಉಪಗ್ರಹದ ಗುರಿ ಡಾಕಿಂಗ್ ಭಾರತೀಯ ಕಾಲಮಾನ ಪ್ರಕಾರ ನಾಳೆ ಸಾಯಂಕಾಲ 4.30 ಕ್ಕೆ ನಿಗದಿಯಾಗಿದೆ ಎಂದು ನಾಸಾ ತಿಳಿಸಿದೆ.
ಭಾರತದ ಕ್ಯಾಪ್ಟನ್ ಶುಭಾಂಶು ಶುಕ್ಲಾ ಇತಿಹಾಸ ಬರೆಯಲು ಸಜ್ಜಾಗಿದ್ದು, ಇಂದು ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39A ನಿಂದ ಆಕ್ಸಿಯಮ್ -4 ಮಿಷನ್ ಉಡಾವಣೆಗೊಳ್ಳಲಿದೆ. ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಆಕ್ಸಿಯಮ್ -4 ಮಿಷನ್‌ನ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುತ್ತಿದ್ದಾರೆ.
14 ದಿನಗಳ ಮಾನವಸಹಿತ ಕಾರ್ಯಾಚರಣೆಯಲ್ಲಿ ನಾಸಾ, ಇಸ್ರೋ, ಆಕ್ಸಿಯಮ್ ಸ್ಪೇಸ್ ಮತ್ತು ಸ್ಪೇಸ್‌ಎಕ್ಸ್ ಭಾಗಿಯಾಗಿವೆ. ಈ ಕಾರ್ಯಾಚರಣೆಯಲ್ಲಿ ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಕೂಡ ಇರುತ್ತಾರೆ, ಅವರು ಮಿಷನ್ ಪೈಲಟ್ ಕೂಡ ಆಗಿದ್ದಾರೆ. ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಬ್ಯಾಕಪ್ ಸಿಬ್ಬಂದಿ ಸದಸ್ಯರಾಗಿದ್ದಾರೆ.
ಈ ಜೋಡಿಯು 2027ರಲ್ಲಿ ನಡೆಯಲಿರುವ ಭಾರತದ ಗಗನಯಾನ ಕಾರ್ಯಾಚರಣೆಗೆ ಆಯ್ಕೆಯಾದ ನಾಲ್ಕು ಸದಸ್ಯರ ತಂಡದ ಭಾಗವಾಗಿದೆ. ಶುಭಾಂಶು ಶುಕ್ಲಾ ಬಾಹ್ಯಾಕಾಶ ನೌಕೆಯನ್ನು ಚಲಾಯಿಸಿದ ಮೊದಲ ಭಾರತೀಯ ಗಗನಯಾತ್ರಿಯಾಗಲಿದ್ದಾರೆ. 1984ರಲ್ಲಿ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ಹಾರಿದ ಮೊದಲ ಭಾರತೀಯರಾಗಿದ್ದಾರೆ. ಆದರೆ ಅವರು ಯಾವುದೇ ಬಾಹ್ಯಾಕಾಶ ನೌಕೆಯನ್ನು ಚಲಾಯಿಸಿರಲಿಲ್ಲ.
ನಾಲ್ವರು ಗಗನಯಾತ್ರಿಗಳು 60 ಪ್ರಯೋಗಗಳನ್ನು ನಡೆಸಲಿದ್ದಾರೆ, ಅವುಗಳಲ್ಲಿ ಏಳು ಶುಭಾಂಶು ಶುಕ್ಲಾ ಅವರದ್ದಾಗಿರುತ್ತವೆ. ಗಗನಯಾತ್ರಿಗಳು ಸೌದಿ ಅರೇಬಿಯಾ, ಬ್ರೆಜಿಲ್, ನೈಜೀರಿಯಾ, ಯುಎಇ, ಹಂಗೇರಿ, ಯುಎಸ್ ಮತ್ತು ಪೋಲೆಂಡ್ ಸೇರಿದಂತೆ 31 ದೇಶಗಳಿಂದ ಪ್ರಯೋಗಗಳನ್ನು ಕೈಗೊಳ್ಳಲಿದ್ದಾರೆ.
ಈ ಕಾರ್ಯಾಚರಣೆಯು ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39ಎ ನಿಂದ ಉಡಾವಣೆಯಾಗಲಿದೆ. ಫಾಲ್ಕನ್ -9 ರಾಕೆಟ್‌ನಲ್ಲಿ ಉಡಾವಣೆ ಮಾಡಿದ ನಂತರ ಸಿಬ್ಬಂದಿ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಕಕ್ಷೆಯಲ್ಲಿರುವ ಪ್ರಯೋಗಾಲಯಕ್ಕೆ ಪ್ರಯಾಣಿಸಲಿದ್ದಾರೆ.
Advertisement