
ಬೆಂಗಳೂರು: ರಾಜ್ಯ ಸರ್ಕಾರ ಅತಿಕ್ರಮಣಗೊಂಡ ಅರಣ್ಯ ಭೂಮಿಯನ್ನು ಮರಳಿ ಪಡೆಯಲು ಕ್ರಮ ಕೈಗೊಳ್ಳುತ್ತಿದ್ದಂತೆ, ರಾಜಕೀಯ ಕೆಸರೆರಚಾಟ ತೀವ್ರಗೊಂಡಿದೆ. ಅಧಿಕಾರಿಗಳು ಸುಮಾರು ರೂ. 7,000 ಕೋಟಿ ಮೌಲ್ಯದ ಭೂಮಿಯನ್ನು ದಲಿತ ಕುಟುಂಬಗಳಿಗೆ ಸೇರಿದ್ದು ಎಂದು ಹೇಳಿಕೊಳ್ಳುವ ಭೂಮಿಯನ್ನು- ಬಲವಂತವಾಗಿ ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ನಾರಾಯಣಸ್ವಾಮಿ, ಅರಣ್ಯ ಭೂಮಿ ಸುಧಾರಣೆಯ ನೆಪದಲ್ಲಿ ಸರ್ಕಾರ ದಲಿತರ ಮನೆ ಮತ್ತು ಜೀವನೋಪಾಯವನ್ನು ಗುರಿಯಾಗಿಸಿಕೊಂಡು ದಲಿತರಿಗೆ ದ್ರೋಹ ಬಗೆದಿದೆ ಎಂದು ಆರೋಪಿಸಿದರು.
ಮಹಾದೇವಪುರ ಕ್ಷೇತ್ರದ ಬಿದರಹಳ್ಳಿ ಹೋಬಳಿಯ ಕಾಡುಗೋಡಿ 200 ಗ್ರಾಮದಲ್ಲಿ ಸುಮಾರು 711 ಎಕರೆ ಭೂಮಿಯನ್ನು 1950 ರ ದಶಕದಲ್ಲಿ ಸ್ಥಳೀಯ ರೈತರಿಗೆ "ಮಂಜೂರು" ಮಾಡಲಾಯಿತು. ನಂತರ ಸಹಕಾರಿ ಸಂಘಗಳ ಮೂಲಕ ದಲಿತರು ಮತ್ತು ಅಂಚಿನಲ್ಲಿರುವ ರೈತರಿಗೆ ವಿತರಿಸಲಾಯಿತು ಎಂದು ವರದಿಯಾಗಿದೆ. ಇದನ್ನು ಮೂಲತಃ ಅರಣ್ಯ ಭೂಮಿ ಎಂದು ವರ್ಗೀಕರಿಸಲಾಗಿದ್ದರೂ, ನಂತರ ಅದನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಲಾಗಿದೆ ಎಂದು ನಾರಾಯಣಸ್ವಾಮಿ ತಿಳಿಸಿದರು.
TNIE ಜೊತೆ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, "ಒಂದು ಭೂಮಿಯನ್ನು ಅರಣ್ಯ ಭೂಮಿ ಎಂದು ಘೋಷಿಸಿದ ನಂತರ, ಅದು ಶಾಶ್ವತವಾಗಿ ಅರಣ್ಯವಾಗಿಯೇ ಉಳಿಯುತ್ತದೆ. ಭಾರತ ಸರ್ಕಾರ ಅಥವಾ ಸುಪ್ರೀಂ ಕೋರ್ಟ್‌ನ ಅನುಮೋದನೆಯಿಲ್ಲದೆ ಅದನ್ನು ಅರಣ್ಯೇತರ ಚಟುವಟಿಕೆಗಳಿಗೆ ನೀಡಲು, ಮಾರಾಟ ಮಾಡಲು ಅಥವಾ ಬಳಸಲು ಸಾಧ್ಯವಿಲ್ಲ. ಯಾವುದೇ ಜವಾಬ್ದಾರಿಯುತ ವ್ಯಕ್ತಿ ಈ ಸರಳ ಸಂಗತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಭೂಮಿಯನ್ನು ಅರಣ್ಯ ಆಸ್ತಿಯಾಗಿ ಮರು ವರ್ಗೀಕರಿಸುವುದು ಹಠಾತ್ತನೆ ಮತ್ತು ಅದನ್ನು ಸ್ವಾಧೀನಪಡಿಸಿಕೊಳ್ಳಲು ಅನುಕೂಲವಾಗುವಂತೆ ಕಾರ್ಯತಂತ್ರ ಮಾಡಲಾಗಿದೆ ಎಂದು ನಾರಾಯಣಸ್ವಾಮಿ ಆರೋಪಿಸಿದರು. "ಕೆಎಸ್‌ಎಸ್‌ಐಡಿಸಿ, ಮೆಟ್ರೋ ರೈಲು, ರೈಲ್ವೆಗಳು ಮತ್ತು ದೇವಾಲಯಗಳಿಗೆ ಈಗಾಗಲೇ ನೀಡಲಾದ ಭೂಮಿಯನ್ನು ಈಗ ಇದ್ದಕ್ಕಿದ್ದಂತೆ ಅರಣ್ಯ ಭೂಮಿ ಎಂದು ಹೇಗೆ ಕರೆಯಬಹುದು?" ಎಂದು ಅವರು ಪ್ರಶ್ನಿಸಿದರು. ಯಥಾಸ್ಥಿತಿಯನ್ನು ಎತ್ತಿಹಿಡಿದು ಧ್ವಂಸವನ್ನು ತಡೆಹಿಡಿದ ನ್ಯಾಯಾಲಯದ ಆದೇಶದ ಹೊರತಾಗಿಯೂ, ಮನೆಗಳು ಮತ್ತು ನಿರ್ಮಾಣಗೊಂಡ ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ ಎಂಬ ವರದಿಗಳು ಹೊರಬಿದ್ದಿವೆ.
2,000 ಕ್ಕೂ ಹೆಚ್ಚು ಮನೆಗಳು ಮತ್ತು 5,000 ಕ್ಕೂ ಹೆಚ್ಚು ನಿವಾಸಿಗಳು ಹೆಚ್ಚಾಗಿ ದಲಿತರು - ಬಾಧಿತರಾಗಿದ್ದಾರೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ. ಕಾನೂನು ರಕ್ಷಣೆಯನ್ನು ಧಿಕ್ಕರಿಸಿ ನಿವಾಸಿಗಳನ್ನು ಹೊರಹಾಕಲು ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ಇದು ಗೂಂಡಾಗಿರಿಗಿಂತ ಕಡಿಮೆಯಿಲ್ಲ ಎಂದು ಅವರು ಹೇಳಿದರು.
1950 ರಿಂದೀಚೆಗೆ ನಡೆದ ಎಲ್ಲಾ ಭೂ ಹಂಚಿಕೆ ಮತ್ತು ವಹಿವಾಟುಗಳ ಕುರಿತು ಶ್ವೇತಪತ್ರ ಹೊರಡಿಸಬೇಕೆಂದು ನಾರಾಯಣಸ್ವಾಮಿ ಒತ್ತಾಯಿಸಿದರು. ಸರ್ಕಾರವು "ಬಲವಂತದ ಮತ್ತು ಕಾನೂನುಬಾಹಿರ" ಭೂಕಬಳಿಕೆಯನ್ನು ಮುಂದುವರಿಸಿದರೆ ರಾಜ್ಯಾದ್ಯಂತ ಆಂದೋಲನ ನಡೆಸುವುದಾಗಿ ಎಚ್ಚರಿಸಿದರು. "ಈ ವಿಷಯವನ್ನು ತನಿಖೆ ಮಾಡಿ ಮತ್ತು ಶ್ವೇತಪತ್ರ ಹೊರಡಿಸಿ ಎಂದು ಅವರು ಒತ್ತಾಯಿಸಿದರು.
Advertisement