Hampi Utsav 2025: 3 ದಿನಗಳ ಅದ್ಧೂರಿ ಉತ್ಸವಕ್ಕೆ ಚಾಲನೆ; ಮೊದಲನೇ ದಿನ 1.5 ಲಕ್ಷ ಮಂದಿ ಭಾಗಿ

ಉತ್ಸವದಲ್ಲಿ ಹೂವು ಮತ್ತು ಮೀನು ಪ್ರದರ್ಶನಗಳು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಿದವು. ಹಂಪಿ ಬೈ ಸ್ಕೈ ಹೆಲಿಕಾಪ್ಟರ್ ಸೇವೆಯು ಜನರ ಕಣ್ಮನ ಸೆಳೆಯಿತು.
ಹಂಪಿ ಉತ್ಸವದಲ್ಲಿ ಸ್ಯಾಂಡಲ್'ವುಡ್ ತಾರೆಯರು.
ಹಂಪಿ ಉತ್ಸವದಲ್ಲಿ ಸ್ಯಾಂಡಲ್'ವುಡ್ ತಾರೆಯರು.
Updated on

ಹಂಪಿ: ವಿಜಯನಗರದ ಗತವೈಭವ ಸಾರವ 3 ದಿನಗಳ ಹಂಪಿ ಉತ್ಸವಕ್ಕೆ ಕನ್ನಡ ಮತ್ತು ಸಾಂಸ್ಕೃತಿಕ ಸಚಿವ ಶಿವರಾಜ್ ತಂಗಡಗಿ ಅವರ ಸಮ್ಮುಖದಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಶುಕ್ರವಾರ ವಿಧ್ಯುಕ್ತ ಚಾಲನೆ ನೀಡಿದರು.

ಹಂಪಿ ಉತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಬೇಕಿತ್ತು,ಆದರೆ ಮಂಡಿನೋವಿಂದ ಬಳಲುತ್ತಿರುವ ಅವರು ಬಾರದ ಕಾರಣ ಜಮೀರ್ ಅವರೇ ಉತ್ಸವಕ್ಕೆ ಚಾಲನೆ ನೀಡಿದರು. ಉತ್ಸವದ ಉದ್ಘಾಟನಾ ದಿನದಂದು ಸುಮಾರು 1.5 ಲಕ್ಷ ಮಂದಿ ಭಾಗಿಯಾಗಿದ್ದರು.

ಉತ್ಸವದಲ್ಲಿ ಹೂವು ಮತ್ತು ಮೀನು ಪ್ರದರ್ಶನಗಳು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಿದವು. ಹಂಪಿ ಬೈ ಸ್ಕೈ ಹೆಲಿಕಾಪ್ಟರ್ ಸೇವೆಯು ಜನರ ಕಣ್ಮನ ಸೆಳೆಯಿತು. ಅಧಿಕಾರಿಗಳು ರೂ 3,999 ದರದೊಂದಿಗೆ ಹಂಪಿ ಸ್ಮಾರಕಗಳನ್ನು ಹೆಲಿಕಾಪ್ಟರ್ ಗಳ ಮೂಲಕ ನೋಡಲು ಅವಕಾಶ ಮಾಡಿಕೊಟ್ಟರು.

ಇದಲ್ಲದೆ, ಎತ್ತುಗಳು ಹಾಗಾ ಶ್ವಾನಗಳ ಪ್ರದರ್ಶನ ಕೂಡ ಪ್ರವಾಸಿಗರ ಗಮನ ಸೆಳೆಯಿತು. ಉತ್ಸವಕ್ಕೆ ಜಿಲ್ಲಾಡಳಿತ ಮಂಡಳಿ ಉತ್ತಮ ವ್ಯವಸ್ಥೆಗಳನ್ನು ಮಾಡಿದ್ದು, ಇದರಿಂದ ತಾಪಮಾನ 38 ಡಿಗ್ರಿ ಇದ್ದರೂ ಉತ್ಸವದಲ್ಲಿ ಪಾಲ್ಗೊಳ್ಳುವ ಜನರ ಸಂಖ್ಯೆ ಮಾತ್ರ ಕಡಿಮೆಯಾಗಿರಲಿಲ್ಲ.

ಜಿಲ್ಲಾಡಳಿತ ಮಂಡಳಿಯು 50 ಕ್ಕೂ ಹೆಚ್ಚು ಸ್ಥಳಗಳಲ್ಲಿ ಉಚಿತ ಕುಡಿಯುವ ನೀರು, 10 ಸ್ಥಳಗಳಲ್ಲಿ ವೈದ್ಯಕೀಯ ಶಿಬಿರಗಳು ಹಾಗೂ ಬಿಸಿಲ ಝಳ ಕಡಿಮೆ ಮಾಡಲು ನೀರು ಸಿಂಪಡಿಸುವ ಯಂತ್ರಗಳನ್ನು ಅಳವಡಿಸಿದ್ದರು.

ಇನ್ನು ಆಹಾರ ಮತ್ತು ಪುಸ್ತಕ ಮಳಿಗೆಗಳು ಮತ್ತು ಜಲಕ್ರೀಡೆ ಚಟುವಟಿಕೆಗಳೂ ಜನರ ಕಣ್ಮನ ಸೆಳೆಯಿತು. ಜನರ ಅನುಕೂಲಕ್ಕಾಗಿ ಕಂಪ್ಲಿ ಮತ್ತು ಹೊಸಪೇಟೆಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.

ಹಂಪಿ ಉತ್ಸವದಲ್ಲಿ ಸ್ಯಾಂಡಲ್'ವುಡ್ ತಾರೆಯರು.
ಹಂಪಿ ಉತ್ಸವ: ಪೌರಕಾರ್ಮಿಕರಿಗೆ VIP ಪಾಸ್‌ ನೀಡಿ ಅಚ್ಚರಿ ಮೂಡಿಸಿದ ಜಿಲ್ಲಾಧಿಕಾರಿ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com