ಕೊಪ್ಪಳ: ಲಂಚ ಪಡೆಯದೆ ಮನೆ ದಾಖಲೆಗಳ ಹಸ್ತಾಂತರ; ಗ್ರಾಮ ಪಂಚಾಯಿತಿ ಸದಸ್ಯೆಯಿಂದ PDO ಮೇಲೆ ಚಪ್ಪಲಿಯಿಂದ ಹಲ್ಲೆ

ತನ್ನ ಮಗನೊಂದಿಗೆ ಸಭೆಗೆ ಬಂದ ಗ್ರಾಮ ಪಂಚಾಯಿತಿ ಸದಸ್ಯೆ ಶಾಂತಮ್ಮ ಬಂಡಿವಡ್ಡರ, ಪಿಡಿಒ ರತ್ನಮ್ಮ ಗುಂಡಣ್ಣನವರ್ ಅವರನ್ನು ನಿಂದಿಸಿ ಹಲ್ಲೆ ನಡೆಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
GP member beats up woman PDO with footwear
ಪಿಡಿಓ ಮೇಲೆ ಹಲ್ಲೆ
Updated on

ಕೊಪ್ಪಳ: ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಭೆಯ ವೇಳೆ ಕೊಪ್ಪಳ ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗೆ ಪಾದರಕ್ಷೆಯಿಂದ ಹೊಡೆದ ಘಟನೆ ನಡೆದಿದೆ.

ಲಂಚ ಪಡೆಯದೆ ಗ್ರಾಮದ ವ್ಯಕ್ತಿಯೊಬ್ಬರಿಗೆ ಮನೆ ಮಾಲೀಕತ್ವದ ದಾಖಲೆಗಳನ್ನು ಪಿಡಿಓ ನೀಡಿದ್ದು ಇದಕ್ಕೆ ಕಾರಣವಾಗಿತ್ತು. ತನ್ನ ಮಗನೊಂದಿಗೆ ಸಭೆಗೆ ಬಂದ ಗ್ರಾಮ ಪಂಚಾಯಿತಿ ಸದಸ್ಯೆ ಶಾಂತಮ್ಮ ಬಂಡಿವಡ್ಡರ, ಪಿಡಿಒ ರತ್ನಮ್ಮ ಗುಂಡಣ್ಣನವರ್ ಅವರನ್ನು ನಿಂದಿಸಿ ಹಲ್ಲೆ ನಡೆಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಗಳು ಈಗ ವೈರಲ್ ಆಗಿವೆ. ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ವಸತಿ ಯೋಜನೆಗೆ ಅರ್ಹ ಗ್ರಾಮಸ್ಥರ ಪಟ್ಟಿ ಕುರಿತು ಚರ್ಚಿಸಲು ಪಿಡಿಒ ರತ್ನಮ್ಮ ಅವರು ಪಂಚಾಯತ್ ಕಚೇರಿಯಲ್ಲಿ ಸಭೆ ಕರೆದಿದ್ದರು. ಚರ್ಚೆ ನಡೆಯುತ್ತಿರುವಾಗ, ಶಾಂತಮ್ಮ ಮತ್ತು ಅವರ ಮಗ ಇದ್ದಕ್ಕಿದ್ದಂತೆ ಒಳಗೆ ಬಂದು ಪಿಡಿಒ ಅವರನ್ನು ನಿಂದಿಸಲು ಪ್ರಾರಂಭಿಸಿದರು. ನಂತರ ಅವರು ತಮ್ಮ ಪಾದರಕ್ಷೆಗಳನ್ನು ಹೊರತೆಗೆದು ರತ್ನಮ್ಮ ಅವರನ್ನು ಹೊಡೆದಿದ್ದಾರೆ.

ಹಿರೇಮ್ಯಾಗೇರಿ ನಿವಾಸಿಗೆ ಮನೆ ದಾಖಲೆಗಳನ್ನು ಲಂಚ ಪಡೆಯದೆ ನೀಡಿದ್ದಕ್ಕಾಗಿ ಗ್ರಾಮ ಪಂಚಾಯಿತಿ ಸದಸ್ಯೆ ಮತ್ತು ಅವರ ಮಗ ಅಧಿಕಾರಿಯ ಮೇಲೆ ಆಕ್ರೋಶಗೊಂಡಿದ್ದರು. ಶಾಂತಮ್ಮ ಮತ್ತು ರತ್ನಮ್ಮ ಈ ಹಿಂದೆ ಈ ಬಗ್ಗೆ ಜಗಳವಾಡಿದ್ದರು, ಮತ್ತು ಕಳೆದ ವರ್ಷ, ಇತರ ಗ್ರಾಮ ಪಂಚಾಯತಿ ಸದಸ್ಯರು ಸಹ ಪಿಡಿಒಗೆ ದಾಖಲೆಗಳನ್ನು ನೀಡದಂತೆ ಎಚ್ಚರಿಕೆ ನೀಡಿದ್ದರು.

GP member beats up woman PDO with footwear
ಗ್ರಾಮ ಪಂಚಾಯಿತಿ ಪ್ರತಿನಿಧಿಗಳನ್ನು ಗೌರವದಿಂದ ನಡೆಸಿಕೊಳ್ಳಿ: ಅಧಿಕಾರಿಗಳಿಗೆ ಪಂಚಾಯತ್ ರಾಜ್ ಇಲಾಖೆ ಎಚ್ಚರಿಕೆ

ನಿವಾಸಿಗಳು ಪದೇ ಪದೇ ತಮ್ಮ ದಾಖಲೆಗಳನ್ನು ಕೇಳುತ್ತಿದ್ದ ಕಾರಣ ಪಿಡಿಒ ರತ್ನಮ್ಮ ಕಾನೂನು ವಿಧಾನದ ಪ್ರಕಾರ ದಾಖಲೆಗಳನ್ನು ಹಸ್ತಾಂತರಿಸಿದರು. ಇದರಿಂದ ಕೋಪಗೊಂಡ ಶಾಂತಮ್ಮ, ದಾಖಲೆಗಳನ್ನು ನೀಡುವ ಮೊದಲು ತನ್ನೊಂದಿಗೆ ಏಕೆ ಪರಿಶೀಲಿಸಲಿಲ್ಲ ಎಂದು ಪಿಡಿಒ ಅವರನ್ನು ಪ್ರಶ್ನಿಸಿದ್ದಾರೆ. ಈ ಸಂಬಂಧ ರತ್ನಮ್ಮ ಯಲ್ಬುರ್ಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗ್ರಾಪಂ ಸದಸ್ಯೆ ಶಾಂತಮ್ಮ ಬಸಪ್ಪ ಬಂಡಿವಡ್ಡರ ಮತ್ತು ಅವರ ಮಗ ಭೀಮೇಶ್ ಬಸಪ್ಪ ಬಂಡಿವಡ್ಡರ ಕರ್ತವ್ಯದಲ್ಲಿದ್ದ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ ನಡೆಸಿದ್ದಾರೆ. ಜೊತೆಗೆ ಅವರು ನನ್ನ ಚಪ್ಪಲಿಯಿಂದ ಹೊಡೆದು ನನ್ನ ಕುತ್ತಿಗೆ ಒತ್ತಿ ಕೊಲ್ಲಲು ಪ್ರಯತ್ನಿಸಿದರು. ಅವರು ಮತ್ತೊಬ್ಬ ಸಿಬ್ಬಂದಿ ಅಂದಪ್ಪ ಅವರ ಮೇಲೆ ದಾಳಿ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com