
ಬೆಂಗಳೂರು: ಮಂಗಳವಾರ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದ ಮೃಗಾಲಯ ದಿನದ ಅಂಗವಾಗಿ ಆರು ಮಂದಿಗೆ ಸನ್ಮಾನ ಮಾಡಲಾಯಿತು.
ರಕ್ಷಿಸಲ್ಪಟ್ಟ ಹಿಮಾಲಯನ್ ಕಪ್ಪು ಕರಡಿಯು ನಿರಾತಂಕವಾಗಿ ಒತ್ತಡರಹಿತ ಜೀವನ ನಡೆಸಲು ಸಹಾಯ ಮಾಡುವಲ್ಲಿ ನೀಡಿದ ಕೊಡುಗೆ ಮತ್ತು ಶ್ರಮಕ್ಕಾಗಿ ಸೋಮಶೇಖರ್ ಬಿ.ಎಸ್ (45) ಅವರನ್ನು ಸನ್ಮಾನಿಸಲಾಯಿತು. ಕರಡಿ ಪಾಲಕರ ಪ್ರಯತ್ನಗಳನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರ, ಅರಣ್ಯ ಇಲಾಖೆ ಮತ್ತು ಬಿಬಿಪಿ ಅಧಿಕಾರಿಗಳು ಗುರುತಿಸಿ ಗೌರವಿಸಿದರು.
ಹಿಮಾಲಯನ್ ಕರಡಿ ಯಾವಾಗಲೂ ಒತ್ತಡದಲ್ಲಿತ್ತು ಹಾಗೂ ಎಂದಿಗೂ ತನ್ನ ಆವರಣದಿಂದ ಹೊರಬಂದು ಇತರರೊಂದಿಗೆ ಬೆರೆಯುತ್ತಿರಲಿಲ್ಲ ಆವರಣದಿಂದ ಹೊರಗೆ ಬಂದು ನಿರಾಳವಾಗಿ ಓಡಾಡುವಂತೆ ಮಾಡಲು ಸೋಮಶೇಖರ್ ವೈಯಕ್ತಿಕ ಸಾಕಷ್ಟು ಅಪಾಯ ಹಾಗೂ ಆಸಕ್ತಿ ವಹಿಸಿದ್ದರು. ಆಕ್ರಮಣಕಾರಿ ಕರಡಿಯನ್ನು ತರಬೇತಿ ನೀಡಿ ಪಳಗಿಸಿದರು , ಬನ್ನೇರುಘಟ್ಟ ಜೈವಿಕ ಉದ್ಯಾನವನ ಮುಚ್ಚಿದ ದಿನಗಳಲ್ಲಿ (ಮಂಗಳವಾರ) ಅವರು ಕೆಲಸ ಮಾಡಬೇಕಾಗಿತ್ತು ಎಂದು ಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ಹೇಳಿದರು.
ಸೋಮಶೇಖರ್ ಕರಡಿಗೆ ಸಕಾರಾತ್ಮಕ ಬಲವರ್ಧನೆ ಮತ್ತು ಉಪಚಾರಗಳೊಂದಿಗೆ ತರಬೇತಿ ನೀಡಿದರು, ಅದು ಸೆರೆಯಲ್ಲಿರುವ ಪರಿಸರ ಮತ್ತು ಸಂಗಾತಿಗೆ ಒಗ್ಗಿಕೊಳ್ಳಲು ಸಹಾಯ ಮಾಡಿತು. ಇತ್ತೀಚೆಗೆ ಆ ಕರಡಿ ಒಂದು ಮರಿಗೆ ಜನ್ಮ ನೀಡಿದೆ.
ಅದೇ ರೀತಿ, 25 ವರ್ಷದ ಜೈನ ಕುರುಬ ಮತ್ತು ಆನೆ ಕಾವಾಡಿಗ ನವೀನ್ ಕುಮಾರ್ ಎಸ್ ಅವರ ಶ್ರಮವನ್ನು ಸಹ ಗುರುತಿಸಲಾಯಿತು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ರಕ್ಷಿಸಲ್ಪಟ್ಟ ದಂತವಿಲ್ಲದ ಗಂಡು ಆನೆ ಗೆ ತರಬೇತಿ ನೀಡಲು ಅವರು ತೆಗೆದುಕೊಂಡ ವಿಶೇಷ ಆಸಕ್ತಿ ಮತ್ತು ಸಮಯಕ್ಕಾಗಿ ಸನ್ಮಾನಿಸಲಾಯಿಕು. ಆನೆಗೆ ತರಬೇತಿ ನೀಡಲು ಹಗಲು ರಾತ್ರಿ ಶ್ರಮವಹಿಸಿದರು. ಈ ಆನೆ ತನ್ನ ಸುತ್ತಮುತ್ತಲಿನ ಪ್ರದೇಶಗಳಿಗೆ ಹೊಂದಿಕೊಳ್ಳಲು ಮತ್ತು ಕ್ರಾಲ್‌ನಿಂದ ಹೊರಬರಲು ಅವರು ಸಹಾಯ ಮಾಡಿದರು ಎಂದು ಸೇನ್ ವಿವರಿಸಿದರು.
ಇನ್ನೂ ಇತರ ನಾಲ್ವರನ್ನು ಅವರ ಕೊಡುಗೆಗಾಗಿ ಗೌರವಿಸಲಾಯಿತು, ಕರಡಿ ಸಹಾಯಕ ಪ್ರಾಣಿ ಪಾಲಕ ಶಿವಣ್ಣ, ಶಿವನಂಜಪ್ಪ ಪ್ರಾಣಿ ಪಾಲಕ ಆರ್ ವಿಜಯ್ ಕುಮಾರ್ ಮತ್ತು ಬಟರ್‌ಫ್ಲೈ ಪಾರ್ಕ್ ಪ್ರಯೋಗಾಲಯ ಸಹಾಯಕ ಮಾದೇಶ್ ಕೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅವರ ಕೊಡುಗೆಗಳು ಮತ್ತು ಹೆಚ್ಚುವರಿ ಪ್ರಯತ್ನಗಳ ಆಧಾರದ ಮೇಲೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸೂರ್ಯ ಸೇನ್ ಹೇಳಿದರು. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮಂಗಳವಾರ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ, ಹೀಗಾಗಿ ಈ ದಿನವನ್ನು ಆರಿಸಿಕೊಂಡು ಸಿಬ್ಬಂದಿಯನ್ನು ಗೌರವಿಸಲು ಮತ್ತು ಅವರ ಮನೋಸ್ಥೈರ್ಯವನ್ನು ಹೆಚ್ಚಿಸಲು ಆಂತರಿಕ ಕಾರ್ಯಕ್ರಮವನ್ನು ನಡೆಸಲಾಯಿತು.
10 ಮತ್ತು 12 ನೇ ತರಗತಿ ಪರೀಕ್ಷೆಗಳಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಸಿಬ್ಬಂದಿಯ ಮಕ್ಕಳಿಗೆ ವಿದ್ಯಾರ್ಥಿವೇತನಗಳನ್ನು ನೀಡಲಾಯಿತು. ಗುತ್ತಿಗೆದಾರರು, ದಾನಿಗಳು ಮತ್ತು ದತ್ತು ಪಡೆದವರನ್ನು ಸಹ ಅವರ ಕೊಡುಗೆಗಳಿಗಾಗಿ ಗೌರವಿಸಲಾಯಿತು.
Advertisement