ಬನ್ನೇರುಘಟ್ಟ ಉದ್ಯಾನವನದಲ್ಲಿ ಆನೆ ಸ್ನಾನ ಮಾಡಿಸುವಾಗ ಕೆರೆಯಲ್ಲಿ ಮುಳುಗಿ ಕಾವಾಡಿಗ ಸಾವು

ಆನೆಯ ಮೈತೊಳೆಯುವಾಗ ಆಕಸ್ಮಿಕವಾಗಿ ಆನೆಯು ಗಾಬರಿಗೊಂಡು ಕೆರೆಯ ಆಳಕ್ಕೆ ಇಳಿದ ಪರಿಣಾಮ ಕೆರೆಯ ಆಳದಲ್ಲಿ ಮುಳುಗಿ ಕಾವಾಡಿಗ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿಯೇ ಇದ್ದ ಇತರೆ ಸಿಬ್ಬಂದಿ ಅವರನ್ನು ರಕ್ಷಿಸಿಸಲು ಪ್ರಯತ್ನಿಸಿದರೂ, ಸಫಲವಾಗಿಲ್ಲ.
Kavadi  gopal
ಕಾವಾಡಿ ಗೋಪಾಲ್
Updated on

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆ ಸ್ನಾನ ಮಾಡುತ್ತಿದ್ದ ವೇಳೆ ಕಾವಾಡಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಕಾವಾಡಿ ಗೋಪಾಲ್ ಎಂಬವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆನೆ ಪಾಲನಾ ಕೇಂದ್ರ ಪ್ರದೇಶದ ಸೀಗೆಕಟ್ಟೆ ಕೆರೆಯಲ್ಲಿ 10 ವರ್ಷದ ಸಂಪತ್ ಎಂಬ ಆನೆಯನ್ನು ಸ್ವಚ್ಛಗೊಳಿಸುವ ವೇಳೆ ಘಟನೆ ನಡೆದಿದೆ.

ಆನೆಯ ಮೈತೊಳೆಯುವಾಗ ಆಕಸ್ಮಿಕವಾಗಿ ಆನೆಯು ಗಾಬರಿಗೊಂಡು ಕೆರೆಯ ಆಳಕ್ಕೆ ಇಳಿದ ಪರಿಣಾಮ ಕೆರೆಯ ಆಳದಲ್ಲಿ ಮುಳುಗಿ ಕಾವಾಡಿಗ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿಯೇ ಇದ್ದ ಇತರೆ ಸಿಬ್ಬಂದಿ ಅವರನ್ನು ರಕ್ಷಿಸಿಸಲು ಪ್ರಯತ್ನಿಸಿದರೂ, ಸಫಲವಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆ ಉದ್ಯಾನದ ಸಿಬ್ಬಂದಿ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬನ್ನೇರುಘಟ್ಟ ಪೊಲೀಸರು, ಈಜು ತಜ್ಞರು, ಅಗ್ನಿ ಶಾಮಕ ದಳದ ಸಿಬ್ಬಂದಿ ಮೂರು ತಾಸು ಕಾರ್ಯಾಚರಣೆ ನಡೆಸಿ ಗೋಪಾಲ್‌ ಮೃತದೇಹ ಹೊರತೆಗೆದರು. ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ಮಾತನಾಡಿ, ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ. ಆನೆಗಳು ಆಡುವ ಮತ್ತು ಸ್ನಾನ ಮಾಡುವ ಸರೋವರವು ಆಳವಾಗಿದೆ ಮತ್ತು ಯಾವಾಗಲೂ ತುಂಬಿರುತ್ತದೆ. ಆದರೆ, ಇಂದು ಕೆರೆ ಕೆಸರುಮಯವಾಗಿತ್ತು. ಇದು ಗೋಪಾಲ್ ಅವರ ಮೊದಲ ಕೆಲಸವೂ ಆಗಿತ್ತು. ಜೈನು ಕುರುಬ ಕುಟುಂಬಕ್ಕೆ ಸೇರಿದ ಅವರ ಸಹೋದರ ಸಹ ಬಿಬಿಪಿಯಲ್ಲಿ ಕಾವಾಡಿ ಮತ್ತು ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

Kavadi  gopal
ಅರಣ್ಯಾಧಿಕಾರಿಗಳ ಮಿಸ್ ಫೈರ್ ಗುಂಡು ಅರ್ಜುನನ ಕಾಲಿಗೆ ತಗುಲಿತ್ತು: ಮಾವುತ ಆರೋಪ

ಗೋಪಾಲ್ ಕಳೆದ ಎರಡು ವರ್ಷಗಳಿಂದ BBP ಯೊಂದಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಉತ್ತಮ ದಾಖಲೆಯನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. ಇಂತಹ ಘಟನೆ ಸಂಭವಿಸುವುದು ಅಸಾಮಾನ್ಯವಾಗಿದೆ. ಸಂಪತ್ ತುಂಬಾ ಶಾಂತವಾದ ಆನೆಯಾಗಿದ್ದು, ಮಾವುತ ಅಥವಾ ಕಾವಡಿ ಇಲ್ಲದಿದ್ದರೂ ಜನರು ಅವನ ಹತ್ತಿರ ಹೋಗಬಹುದು. ಅವನು ತನ್ನ ಶಾಂತತೆಯನ್ನು ಹೇಗೆ ಕಳೆದುಕೊಂಡನು ಎಂಬುದು ಆಶ್ಚರ್ಯಕರವಾಗಿದೆ. ಆನೆ ಆಹಾರ ಸಾಗಿಸುತ್ತಿದ್ದ ಟ್ರಕ್ ಶಿಬಿರದ ಸ್ಥಳಕ್ಕೆ ಬಂದಾಗ ಈ ಘಟನೆ ನಡೆದಿದೆ. ಆನೆಯನ್ನು ಸಾಮಾನ್ಯವಾಗಿ ಕನಿಷ್ಠ 2-3 ಜನರು ಸ್ನಾನ ಮಾಡಿಸುತ್ತಾರೆ ಎಂದು ಪಶುಪಾಲಕರು ಮತ್ತು ಪಶುವೈದ್ಯರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com