ಅರಣ್ಯಾಧಿಕಾರಿಗಳ ಮಿಸ್ ಫೈರ್ ಗುಂಡು ಅರ್ಜುನನ ಕಾಲಿಗೆ ತಗುಲಿತ್ತು: ಮಾವುತ ಆರೋಪ

ದಸರಾ ಅಂಬಾರಿ ಖ್ಯಾತಿಯ ಆನೆ ಅರ್ಜುನನ (64) ಸಾವು ಹಲವು ಊಹಾಪೋಹ ಮತ್ತು ಆರೋಪಗಳಿಗೆ ಕಾರಣವಾಗಿದ್ದು, ಇದೀಗ ಮಾವುತನ ಹೇಳಿಕೆ ಭಾರಿ ವೈರಲ್ ಆಗುತ್ತಿದೆ.
ಅರ್ಜುನ ಆನೆ
ಅರ್ಜುನ ಆನೆ

ಹಾಸನ: ದಸರಾ ಅಂಬಾರಿ ಖ್ಯಾತಿಯ ಆನೆ ಅರ್ಜುನನ (64) ಸಾವು ಹಲವು ಊಹಾಪೋಹ ಮತ್ತು ಆರೋಪಗಳಿಗೆ ಕಾರಣವಾಗಿದ್ದು, ಇದೀಗ ಮಾವುತನ ಹೇಳಿಕೆ ಭಾರಿ ವೈರಲ್ ಆಗುತ್ತಿದೆ.

ಕಾಡಾನೆ ಸೆರೆ ಕಾರ್ಯಾಚರಣೆಗೆ ಅನುಸರಿಸಿದ ವಿಧಾನ ಮತ್ತು ಕಾಡಾನೆಗೆ ಗುಂಡು ಹಾರಿಸಿಲ್ಲ ಏಕೆ ಎಂದು ಅರಣ್ಯಾಧಿಕಾರಿಗಳನ್ನು ತಜ್ಞರು ಪ್ರಶ್ನಿಸಿದ್ದಾರೆ. ಅರಣ್ಯಾಧಿಕಾರಿಗಳು ಮತ್ತು ಪಶುವೈದ್ಯರು ಕಾಡು ಆನೆಯ ಬದಲು ಅರ್ಜುನನನ್ನು ಹೊಡೆದಿದ್ದಾರೆ ಎಂದು ಅರ್ಜುನ ಮಾವುತ ಆರೋಪಿಸಿದ್ದಾರೆ. ಹಾಸನದ ಯಳಸೂರು ವ್ಯಾಪ್ತಿಯಲ್ಲಿ ಅಂತಿಮ ವಿಧಿವಿಧಾನದ ವೇಳೆ ಕುಸಿದುಬಿದ್ದ ಅರ್ಜುನನ ಮಾವುತ ವಿನು, ಅರ್ಜುನನ ಬಲಗಾಲಿಗೆ ಗಾಯವಾಗಿ ಸಾವನ್ನಪ್ಪಿರಬಹುದು ಎಂದು ಹೇಳಿದ್ದಾರೆ. ಅರ್ಜುನನು ಕಾಡು ಆನೆಯೊಂದಿಗೆ ಕಾದಾಟ ನಡೆಸುತ್ತಿದ್ದಾಗ ಅವನ ಮೇಲೆ ಗುಂಡು ಹಾರಿಸಲಾಯಿತು ಎಂದು ಅವರು ಆರೋಪಿಸಿದ್ದಾರೆ. ಆ ಗುಂಡೇನಿಂದಲೇ ಆನೆಗೆ ಗಾಯವಾಗಿ ಅದು ಆತ ಕುಸಿದು ಬೀಳುವಂತೆ ಮಾಡಿದ್ದು, ಅದೇ ಆತನ ಮೇಲೆ ಕಾಡಾನೆ ದಾಳಿ ಮಾಡಿ ಕೊಲ್ಲಲು ಕಾರಣವಾಯಿತು ಎಂದು ಹೇಳಲಾಗಿದೆ.

ಕಾರ್ಯಾಚರಣೆಗೆ ಅರ್ಜುನನ್ನು ಕಳುಹಿಸಲು ಮಾವುತರು ಒಪ್ಪಿರಲಿಲ್ಲ
ಇನ್ನು ಅರ್ಜುನ ವಾಸವಾಗಿದ್ದ ಬಲ್ಲೆ ಆನೆ ಶಿಬಿರದಲ್ಲಿರುವ ಮಾವುತರು ಅರ್ಜುನ ಆನೆಯನ್ನು ರಕ್ಷಣಾ ಕಾರ್ಯಾಚರಣೆಗೆ ಕಳುಹಿಸಲು ಉತ್ಸುಕವಾಗಿರಲಿಲ್ಲ ಎಂದು ಹೇಳಲಾಗಿದೆ. ಅರ್ಜುನ ಆನೆ ಸಾವಿಗೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆತನನ್ನು ಕರೆದುಕೊಂಡು ಹೋಗದಂತೆ ಅರಣ್ಯ ಸಿಬ್ಬಂದಿಗೆ ಹೇಳಿದ್ದೆವು. ಇದು ಸರಿಯಲ್ಲ ಎಂದು ನಮಗೆ ಏನೋ ಅನ್ನಿಸುತ್ತಿತ್ತು. ಆದರೆ ಯಾರೂ ನಮ್ಮ ಮಾತು ಕೇಳಲಿಲ್ಲ. ಅರಣ್ಯಾಧಿಕಾರಿಗಳು ಆತನ ಅವಶ್ಯಕತೆ ಇದೆ ಎಂದು ಹೇಳಿ ನವೆಂಬರ್ 23 ರಂದು ಕರೆದೊಯ್ದರು ಎಂದು ಹೇಳಿದರು.

ಕಾಡಾನೆ ಬದಲಿಗೆ ಪ್ರಶಾಂತ್ ಆನೆಗೆ ಬಿದ್ದ ಅರವಳಿಕೆ
ಇನ್ನು ಕಾರ್ಯಾಚರಣೆ ವೇಳೆ ಕಾಡಾನೆಗೆ ನೀಡಲು ಬಳಸಲಾಗಿದ್ದ ಅರವಳಿಕೆ ಗುರಿ ತಪ್ಪಿ ಕಾರ್ಯಾಚರಣೆಯಲ್ಲಿ ನಿರತನಾಗಿದ್ದ ಮತ್ತೊಂದು ಆನೆ ಪ್ರಶಾಂತ್ ಗೆ ಬಿದ್ದಿತ್ತು. ಇದೇ ಪಶುವೈದ್ಯರು ಮತ್ತು ಅರಣ್ಯ ಅಧಿಕಾರಿಗಳ ಮಹಾ ಎಡವಟ್ಟಾಗಿದ್ದು, ಅರವಳಿಕೆ ಬಿದ್ದ ಕೂಡಲೇ ಪ್ರಶಾಂತ್ ನೆಲಕ್ಕೊರಗಿದ್ದ. ಹೀಗಾಗಿ ಪಶುವೈದ್ಯರು ಮತ್ತು ಅರಣ್ಯ ಅಧಿಕಾರಿಗಳು ಆತನ ಚಿಕಿತ್ಸೆ ನಡೆಸುತ್ತಿದ್ದಾರೆ. ಈ ವೇಳೆ ಅರ್ಜುನ ಒಂಟಿಯಾಗಬೇಕಾಯಿತು. ಇದೇ ಸಂದರ್ಭದಲ್ಲೇ ಕಾಡಾನೆ ಅರ್ಜುನನ ಮೇಲೆ ದಾಳಿ ಮುಂದಾಯಿತು ಎನ್ನಲಾಗಿದೆ.

ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ
ಇನ್ನು ಕಾರ್ಯಾಚರಣೆ ವೇಳೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅರ್ಜುನ ಆನೆ ಸಾವಾಗಿದೆ ಎಂದು ಆರೋಪಿಸಿ ಸ್ಥಳೀಯರು ಹಾಗೂ ಗ್ರಾಮಸ್ಥರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಎಂಟು ವರ್ಷಗಳ ಕಾಲ ಚಿನ್ನದ ಅಂಬಾರಿಟನ್ನು ಹೊತ್ತು ಜಂಬೂ ಸವಾರಿಯ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅರ್ಜುನನ ಅಂತಿಮ ಸಂಸ್ಕಾರವನ್ನು ಮೈಸೂರಿನಲ್ಲೇ ಮಾಡಬೇಕೆಂದು ಒತ್ತಾಯಿಸಿದ್ದರು. ಆದರೆ ಅರಣ್ಯಾಧಿಕಾರಿಗಳು ಅವರ ಬೇಡಿಕೆಗೆ ಕಿವಿಗೊಡದೆ ಆನೆ ಮೃತಪಟ್ಟ ಜಾಗದಲ್ಲೇ ಅಂತಿಮ ಸಂಸ್ಕಾರ ನೆರವೇರಿಸಿದರು. ಸರ್ಕಾರಿ ಗೌರವಗಳೊಂದಿಗೆ ಅರ್ಜುನನ ಸಮಾಧಿ ಮಾಡಲಾಯಿತು, ಮತ್ತು ಗೌರವಾರ್ಥವಾಗಿ ಪೊಲೀಸರು ಮೂರು ಸುತ್ತು ಗುಂಡು ಹಾರಿಸಿದರು. 

ಲಾಠಿ ಪ್ರಹಾರ
ಅರ್ಜುನನ ಅಂತ್ಯ ಸಂಸ್ಕಾರದ ವೇಳೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರಿಂದ ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

ಮರಣೋತ್ತರ ಪರೀಕ್ಷೆ
ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅರ್ಜುನನ ಮೇಲೆ ಯಾವುದೇ ಗುಂಡು ಅಥವಾ ಡಾರ್ಟ್ ಗಾಯ ಕಂಡುಬಂದಿಲ್ಲ ಎಂದು ಹಾಸನದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ TNIE ಗೆ ತಿಳಿಸಿದ್ದಾರೆ. ಆದರೆ ಕಾದಾಟದ ವೇಳೆ ಅರ್ಜುನ ಆನೆ ಮರದ ಬುಡಕ್ಕೆ ಹೊಡೆದಾಗ ಆತನಿಗೆ ಗಾಯವಾಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅರ್ಜುನ ಆನೆ ಮೇಲಾಗಿರುವ ಗಂಭೀರ ಗಾಯಗಳು ಕಾಡಾನೆ ದಾಳಿಯಿಂದಾಗಿರಬಹುದು ಎಂದು ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

ಆನೆ ಸಾವಿನ ದುಃಖದಲ್ಲಿ ಮಾವುತನ ಆರೋಪ: ಅರಣ್ಯಾಧಿಕಾರಿಗಳು
ಇನ್ನು ಅರ್ಜುನ ಆನೆ ಮಾವುತ ವಿನು ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಹಾಸನದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ವಿನು ಆನೆ ಸಾವಿನಿಂದ ಅಸಮಾಧಾನಗೊಂಡು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. “ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಅರ್ಜುನ ಸಾವನ್ನಪ್ಪಿದ್ದಾನೆ, ಆದರೆ ಕಾಡು ಆನೆಗಳು ಸುತ್ತುವರಿದಿದ್ದರಿಂದ ನಮಗೆ ಅವನ ದೇಹದ ಹತ್ತಿರ ಹೋಗಲು ಸಾಧ್ಯವಾಗಲಿಲ್ಲ. ಮಂಗಳವಾರ ಬೆಳಗಿನ ಜಾವದ ನಂತರವೇ ನಾವು ಅರ್ಜುನನ ಶವವನ್ನು ತಲುಪಿದೆವು. ಈ ವೇಳೆಗಾಗಲೇ ಅವನ ದೇಹವು ದುರ್ವಾಸನೆಯನ್ನು ಹೊರಹಾಕಲು ಪ್ರಾರಂಭಿಸಿತ್ತು.

ನಾವು ಮೈಸೂರು ರಾಜಮನೆತನದ ಅರ್ಚಕ ಪ್ರಹ್ಲಾದ್ ಅವರನ್ನು ಸಂಪರ್ಕಿಸಿದ್ದೆವು, ಅವರು ಅಂತಿಮ ವಿಧಿವಿಧಾನಗಳಿಗೆ ಶುಭ ಮುಹೂರ್ತ ಮಧ್ಯಾಹ್ನ 12.30 ರ ನಡುವೆ ಇದ್ದು, ಅಲ್ಲಿಯವರೆಗೆ ದೇಹವನ್ನು ಮುಟ್ಟಬಾರದು ಎಂದು ಹೇಳಿದ್ದರು. ಹೀಗಾಗಿ ನಾವು ಶವವನ್ನು ಅದೇ ಸ್ಥಳದಲ್ಲಿ ಹೂಳಲು ನಿರ್ಧರಿಸಿದೆವು. ಆದಾಗ್ಯೂ, ಅವನ ದಂತಗಳನ್ನು ಇಲಾಖೆಯ ಡಿಪೋಗೆ ಕಳುಹಿಸಲಾಗಿದೆ ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com