ರಿಕ್ಲೈನರ್ ನಂತರ ಶಾಸಕರಿಗೆ ಕ್ಲಬ್, ಸದನದಲ್ಲಿ ಟೀ-ಕಾಫಿ ವ್ಯವಸ್ಥೆ: ಸ್ಪೀಕರ್ ಯುಟಿ ಖಾದರ್

ಇಂದು ವಿಧಾನಸಭೆ ಕಲಾಪ ಅರಂಭವಾಗುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸ್ಪೀಕರ್ ಯುಟಿ ಖಾದರ್ ಅವರು, ಸದನದಲ್ಲಿ ಶಾಸಕರಿಗೆ ಟೀ, ಕಾಫಿ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.
Recliners for MLAs
ಶಾಸಕರಿಗಾಗಿ ಬಂದಿರುವ ರಿಕ್ಲೇನರ್ ಗಳು
Updated on

ಬೆಂಗಳೂರು: ವಿಧಾನಸಭೆಯಲ್ಲಿ ಶಾಸಕರಿಗೆ ವಿಶ್ರಾಂತಿ ಪಡೆಯಲು ರಿಕ್ಲೈನರ್ ಹಾಗೂ ಮಸಾಜ್ ಚೇರ್ ವ್ಯವಸ್ಥೆ ಮಾಡಿದ್ದ ಸ್ಪೀಕರ್ ಯುಟಿ ಖಾದರ್ ಅವರು ಈಗ ಶಾಸಕರಿಗೆ ಟೀ, ಕಾಫಿ ಮತ್ತು ಹರಟೆ ಹೊಡೆಯಲು ಕ್ಲಬ್ ಸ್ಥಾಪಿಸುವ ಬಗ್ಗೆ ಮಾತನಾಡಿದ್ದಾರೆ.

ಇಂದು ವಿಧಾನಸಭೆ ಕಲಾಪ ಅರಂಭವಾಗುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸ್ಪೀಕರ್ ಯುಟಿ ಖಾದರ್ ಅವರು, ಸದನದಲ್ಲಿ ಶಾಸಕರಿಗೆ ಟೀ, ಕಾಫಿ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.

ಸದನ ನಡೆಯುವಾಗ ಶಾಸಕರು ಅನುಭವಿಸುವ ಸಮಸ್ಯೆಗಳ ಬಗ್ಗೆ ನಾವು ಗಮನಹರಿಸಬೇಕು. ಅವರ ಆರೋಗ್ಯವನ್ನು ನಾವು ನೋಡಬೇಕಲ್ವಾ? ಸದನದಲ್ಲಿ ಟೀ, ಕಾಫಿ ಮತ್ತು ಉಟದ ವ್ಯವಸ್ಥೆ ಇಲ್ಲದಿದ್ದರೆ ಅವರು ಹೊರಗೆ ಹೋಗುತ್ತಾರೆ ಮತ್ತು ವಾಪಸ್ ತಡವಾಗಿ ಬರುತ್ತಾರೆ ಎಂದರು.

ಇದೇ ವೇಳೆ ಶಾಸಕರ ಕ್ಲಬ್ ಒಂದನ್ನು ಸ್ಥಾಪಿಸುವ ಅವಶ್ಯಕತೆಯ ಬಗ್ಗೆ ಮಾತನಾಡಿದ ಸ್ಪೀಕರ್, ಐಎಎಸ್ ಅಧಿಕಾರಿಗಳು ತಮ್ಮ ರಿಕ್ರಿಯೇಶನ್​ಗಾಗಿ ಕ್ಲಬ್ ಮಾಡಿಕೊಂಡಿದ್ದಾರೆ. ಸರ್ಕಾರಿ ನೌಕರರು ಸಹ ತಾವು ಕೂತು ಹರಟೆ ಹೊಡೆಯಲು ಜಾಗ ಮಾಡಿಕೊಂಡಿದ್ದಾರೆ. ಹಾಗೆಯೇ ಶಾಸಕರಿಗೂ ಒಂದು ಕ್ಲಬ್ ನ ಅವಶ್ಯಕತೆಯಿದೆ, ಅದಷ್ಟು ಬೇಗ ಅದು ಅಸ್ತಿತ್ವಕ್ಕೆ ಬರಲಿದೆ ಎಂದು ಹೇಳಿದರು.

ವಿಧಾನಸಭೆಯಲ್ಲಿ ಶಾಸಕರು ಕಿರು ನಿದ್ರೆ ಮಾಡಲು ರಿಕ್ಲೈನರ್ ಸೌಲಭ್ಯ ಕುರಿತ ಟೀಕೆಗೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ. ಖಾದರ್, ಶಾಸಕರಿಗೆ ಸೌಕರ್ಯಗಳನ್ನು ಒದಗಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.

Recliners for MLAs
ವಿಧಾನಸೌಧದಲ್ಲಿ ಶಾಸಕರಿಗೆ ನಿದ್ರಾ ಭಾಗ್ಯ: ಭೋಜನದ ಬಳಿಕ ಕಿರು ನಿದ್ರೆ ಮಾಡುವವರಿಗಾಗಿ ರಿಕ್ಲೈನರ್ ಚೇರ್ ವ್ಯವಸ್ಥೆ- ಖಾದರ್

ಬಜೆಟ್ ಅಧಿವೇಶನದಲ್ಲಿ ಶಾಸಕರ ಹಾಜರಾತಿಯನ್ನು ಹೆಚ್ಚಿಸಲು, ಸ್ಪೀಕರ್ ಖಾದರ್ ಶಾಸಕರಿಗೆ ವಿಶ್ರಾಂತಿ ಆಸನ ಸೌಲಭ್ಯಗಳ ವ್ಯವಸ್ಥೆ ಮಾಡಿದ್ದಾರೆ.

ಮಾರ್ಚ್ 3 ರಿಂದ 21 ರವರೆಗೆ ಆರಂಭದಲ್ಲಿ 15 ವಿಶ್ರಾಂತಿ ಆಸನಗಳನ್ನು ಬಾಡಿಗೆಗೆ ಪಡೆಯಲಾಗಿದ್ದು, ಅವುಗಳನ್ನು ವಿಧಾನಸೌಧದ ಲಾಬಿಯಲ್ಲಿ ಅಳವಡಿಸಲಾಗಿದೆ.

ಸದನದ ಒಳಗಡೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಶಾಸಕರಿಗೆ ಕುಡಿಯುವ ನೀರನ್ನು ಈಗಾಗಲೇ ಒದಗಿಸಲಾಗುತ್ತದೆ. ಮುಂದುವರಿದು ಇದೀಗ ಟೀ ಹಾಗೂ ಕಾಫಿಯನ್ನು ನೀಡಲು ಸ್ಪೀಕರ್ ಮುಂದಾಗಿದ್ದಾರೆ.

ಶಾಸಕರು ಚರ್ಚೆಯ ಅವಧಿಯಲ್ಲಿ ವಿಧಾನಸಭೆಯ ಮೊಗಸಾಲೆಗೆ ಬಂದು ಟೀ ಕಾಫಿ ಕುಡಿಯುತ್ತಾರೆ. ಆದರೆ ಇದೀಗ ಶಾಸಕರ ಸಮಯ ವ್ಯರ್ಥವಾಗದಿರಲಿ ಎಂಬ ಉದ್ದೇಶದಿಂದ ಸದನದ ಒಳಗಡೆ ಟೀ ಕಾಫಿಯನ್ನು ನೀಡಲು ನಿರ್ಧರಿಸಲಾಗಿದೆ.

ವಿಧಾನಸಭೆಗೆ ಆಗಮಿಸುವ ಶಾಸಕರಿಗೆ ಈಗಾಗಲೇ ಬೆಳಗ್ಗೆ ಉಚಿತ ಉಪಹಾರದ ವ್ಯವಸ್ಥೆ ಇದೆ. ನಂತರದಲ್ಲಿ ಮಧ್ಯಾಹ್ನ ಉಚಿತವಾಗಿ ಊಟವನ್ನೂ ನೀಡಲಾಗುತ್ತಿದೆ. ಅಷ್ಟು ಸಾಲದು ಎಂಬಂತೆ ಮಧ್ಯಾಹ್ನ ಊಟದ ಬಳಿಕ ವಿಶ್ರಾಂತಿ ಪಡೆದುಕೊಳ್ಳಲು ರಿಕ್ಲೈನರ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಮಸಾಜ್ ಕುರ್ಚಿಯನ್ನು ಇಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com