ಲೋಕ ಅದಾಲತ್‌: ವಿಚ್ಛೇದನ ಅರ್ಜಿ ಹಿಂಪಡೆದು 5 ವರ್ಷಗಳ ಬಳಿಕ ಒಂದಾದ ದಂಪತಿ

ಭಾಗೀರಥಿ ಪರವಾಗಿ ವಕೀಲ ನಂಜಯ್ಯ ಹಾಗೂ ಅನಿಲ್ ರಾಜ್ ಪರ ವಕೀಲ ಸಿದ್ದರಾಜು ವಾದ ಮಂಡಿಸಿದ್ದರು. ಎರಡು ಕಡೆಯ ವಕೀಲರ ಸಮ್ಮುಖದಲ್ಲಿ ರಾಜಿ ಸಂಧಾನದ ಮೂಲಕ ದಂಪತಿ ಒಂದಾದರು.
Representional image
ಸಾಂದರ್ಭಿಕ ಚಿತ್ರ
Updated on

ಮೈಸೂರು: ಐದು ವರ್ಷಗಳ ಹಿಂದೆ ಚಾಮರಾಜನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಕೌಟುಂಬಿಕ ಕಾರಣಗಳಿಂದ ಬೇರ್ಪಟ್ಟ ದಂಪತಿಗಳು ವಿಚ್ಛೇದನದ ಯೋಜನೆಯನ್ನು ಕೈಬಿಟ್ಟಿದ್ದಾರೆ.

ಗುಂಡ್ಲುಪೇಟೆಯ ಅನಿಲ್ ರಾಜ್ ಹಾಗೂ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದ ಭಾಗೀರಥಿ ದಂಪತಿ ಜೀವನಾಂಶ, ವಿವಾಹ ವಿಚ್ಛೇದನಕ್ಕಾಗಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಕಳೆದ 5 ವರ್ಷಗಳಿಂದಲೂ ಪ್ರಕರಣ ನಡೆಯುತ್ತಿತ್ತು. ಲೋಕ ಅದಾಲತ್‍ನಲ್ಲಿ ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸಿಕೊಂಡಿದ್ದು ಮತ್ತೆ ಒಂದಾದರು.

ಭಾಗೀರಥಿ ಪರವಾಗಿ ವಕೀಲ ನಂಜಯ್ಯ ಹಾಗೂ ಅನಿಲ್ ರಾಜ್ ಪರ ವಕೀಲ ಸಿದ್ದರಾಜು ವಾದ ಮಂಡಿಸಿದ್ದರು. ಎರಡು ಕಡೆಯ ವಕೀಲರ ಸಮ್ಮುಖದಲ್ಲಿ ರಾಜಿ ಸಂಧಾನದ ಮೂಲಕ ದಂಪತಿ ಒಂದಾದರು.

ಪ್ರಧಾನ ಜಿಲ್ಲಾ ನ್ಯಾಯಾಧೀಶ ಬಿ.ಎಸ್. ಭಾರತಿ ಮತ್ತು ಇತರರ ಅಧ್ಯಕ್ಷತೆಯಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಇಬ್ಬರು ರಾಜಿ ಮಾಡಿಕೊಂಡರು. ಇನ್ನು ಮುಂದೆ ಅವರು ಹಳೇಯದ್ದನ್ನೆಲ್ಲಾ ಮರೆತು ಶಾಂತಿಯುತ ಜೀವನ ನಡೆಸಲು ನಿರ್ಧರಿಸಿದರು.

ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆ ನ್ಯಾಯಾಲಯಗಳಲ್ಲಿ ಬಾಕಿ ಇರುವ ಅನೇಕ ಪ್ರಕರಣಗಳು ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡವು, ಇದರಲ್ಲಿ ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಅಪಘಾತ ಪರಿಹಾರ, ಭೂ ಸ್ವಾಧೀನ ಮತ್ತು ಕಾರ್ಮಿಕ ಸಮಸ್ಯೆಗಳು ಸೇರಿದಂತೆ ಅನೇಕ ಪ್ರಕರಣಗಳು ಬಗೆಹರಿದಿವೆ.

Representional image
ಲೋಕ ಅದಾಲತ್‌: ಸಂಧಾನ ಮೂಲಕ 38 ಲಕ್ಷ ಪ್ರಕರಣ ಇತ್ಯರ್ಥ; 2,248 ಕೋಟಿ ರೂ ಪರಿಹಾರ ಪಾವತಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com