'ನೀವೂ ಕೂಡ ಬೇರೆ ಧರ್ಮದ ಹುಡುಗಿಯರ ಪ್ರೀತಿಸಿ ಮದುವೆಯಾಗಿ': Chakravarthy Sulibele

'ಹಿಂದೂಗಳ ಪ್ರಮಾಣ ಶೇ 65ಕ್ಕೆ ತಲುಪಿದೆ. ಹಿಂದೂ ಯುವಕ, ಯುವತಿಯರು 25ರಿಂದ 30 ವರ್ಷ ವಯಸ್ಸಿನೊಳಗೆ ಮದುವೆಯಾಗಿ ಕನಿಷ್ಠ ಎರಡು ಮಕ್ಕಳು ಪಡೆಯುವಂತೆ ಜಾಗೃತಿ ಮೂಡಿಸಬೇಕು'..
Chakravarthy Sulibele
ಚಕ್ರವರ್ತಿ ಸೂಲಿಬೆಲೆ
Updated on

ದಕ್ಷಿಣ ಕನ್ನಡ: 'ಮದುವೆಯಾಗಲು ಹುಡುಗಿ ಸಿಗದ ಹಿಂದೂ ಹುಡುಗರು ಅನ್ಯಧರ್ಮೀಯ ಯುವತಿಯರನ್ನು ಪ್ರೀತಿಸಿ ವಿವಾಹವಾಗಿ’ ಎಂದು ಚಕ್ರವರ್ತಿ ಸೂಲಿಬೆಲೆ ಸಲಹೆ ನೀಡಿದ್ದಾರೆ.

ವಿಶ್ವ ಹಿಂದೂ ಪರಿಷತ್ ವತಿಯಿಂದ ಭಾನುವಾರ ಮಂಗಳೂರಿನ ಕದ್ರಿ ಮಂಜುನಾಥ ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರಕ್ಕೆ ನಡೆದ ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಪಾದಯಾತ್ರೆಯ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, 'ಮತಾಂತರ, ಲವ್ ಜಿಹಾದ್ ವಿಚಾರಗಳನ್ನು ಬಿಟ್ಟು ಬಿಡಿ. ಹಿಂದೂಧರ್ಮದಿಂದ ಮತಾಂತರವಾದವರನ್ನ ಮತ್ತೆ ‘ಘರ್ ವಾಪಸಿ’ ಮಾಡುವುದು ಹೇಗೆಂದು ನಮ್ಮ ಯುವಕರನ್ನ ತರಬೇತುಗೊಳಿಸಿ.

ಈಗ ಟೆಸ್ಟ್ ಮ್ಯಾಚ್‌ಗಳು ನಿಂತು ಹೋಗಿವೆ. ಇರುವ ಇಪ್ಪತ್ತು ಓವರ್‌ಗಳಲ್ಲೇ ಬಡಿಯಬೇಕು. ಈ ಸವಾಲುಗಳನ್ನ ಎದುರಿಸಲು ಸಜ್ಜಾಗಬೇಕು. ಮದುವೆಯಾಗಲು ಹುಡುಗಿ ಸಿಗದ ಹಿಂದೂ ಹುಡುಗರು ಅನ್ಯಧರ್ಮೀಯ ಯುವತಿಯರನ್ನು ಪ್ರೀತಿಸಿ ವಿವಾಹವಾಗಿ' ಎಂದರು.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಕುರಿತು ಟೀಕಿಸಿದ ಅವರು, 'ಹಿಂದುತ್ವವನ್ನು ಗೌರವಿಸುವ ಜನಪ್ರತಿನಿಧಿಗಳು ನಾಡನ್ನು ಆಳಿದಾಗ ಹಿಂದೂ ಧರ್ಮ ಉಳಿಯಲು ಸಾಧ್ಯ. ವಕ್ಫ್ ವಿರುದ್ಧ ದೇಶದೆಲ್ಲೆಡೆ ಹೋರಾಟ ನಡೆಯುತ್ತಿರುವಾಗ ರಾಜ್ಯ ಸರ್ಕಾರ, ವಕ್ಫ್ ‌ ಆಸ್ತಿಯ ನವೀಕರಣಕ್ಕೆ 150 ಕೊಟಿ ನೀಡಲು ಹೊರಟಿದೆ. ಪ್ರಚೋದನೆ ನೀಡಿ ಪ್ರತ್ಯೇಕತೆಯನ್ನು ಹುಟ್ಟುಹಾಕುವ ಪ್ರಯತ್ನಕ್ಕೆ ಮುಂದಾಗಿದೆ’ ಎಂದರು.

Chakravarthy Sulibele
ಕೊಪ್ಪಳ ಅತ್ಯಾಚಾರ ಕೇಸ್ ಎಫೆಕ್ಟ್: ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಕುಸಿತ; ಹೋಂಸ್ಟೇಗಳ ಬುಕಿಂಗ್ ರದ್ದು!

ಅಂತೆಯೇ 20 ನಿಮಿಷದ ವಿಡಿಯೋಯಿಂದ ನಮ್ಮ ನಂಬಿಕೆ, ಶ್ರದ್ಧೆಗೆ ಧಕ್ಕೆ ತರಲು ಸಾಧ್ಯವಿಲ್ಲ. ಧರ್ಮ ಶ್ರದ್ಧೆ ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಹಿಂದೂ ವಿರೋಧಿ ಪಕ್ಷದಲ್ಲಿದ್ದೇನೆ ಎಂಬ ಕಾರಣಕ್ಕೇ ಹಿಂದೂ ಆಚರಣೆಗಳನ್ನು ವಿರೋಧಿಸುವವರು ಒಮ್ಮೆ ಕಾಂಗ್ರೆಸ್ ನಾಯಕ ಕೆಹೆಚ್ ಮುನಿಯಪ್ಪ ಅವರನ್ನು ನೋಡಿ ಕಲಿಯಿರಿ. ಅಂತೆಯೇ ಮತಾಂತರ ಆದವರನ್ನು ಕೊರಗಜ್ಜನ ಬಳಿ ಕರೆದುಕೊಂಡು ಬನ್ನಿ ಕ್ಷಮೆ ಕೇಳಿಸಿ ಘರ್ ವಾಪಸಿ ಮಾಡಿ ’ ಎಂದರು.

ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ಮಾತನಾಡಿ, 'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂಗಳ ಪ್ರಮಾಣ ಶೇ 65ಕ್ಕೆ ತಲುಪಿದೆ. ಹಿಂದೂ ಯುವಕ, ಯುವತಿಯರು 25ರಿಂದ 30 ವರ್ಷ ವಯಸ್ಸಿನೊಳಗೆ ಮದುವೆಯಾಗಿ ಕನಿಷ್ಠ ಎರಡು ಮಕ್ಕಳು ಪಡೆಯುವಂತೆ ಜಾಗೃತಿ ಮೂಡಿಸಬೇಕು’ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com