
ಬೆಂಗಳೂರು: ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಆಕ್ರೋಶ ಹೊರ ಹಾಕಿದ್ದು. ಕಟುವಾದ ಶಬ್ದಗಳನ್ನು ಬಳಸಿ ಬೈದಿದ್ದಾರೆ. ಇದೀಗ ಪ್ರಕಾಶ್ ರಾಜ್ ಅವರು ಚಕ್ರವರ್ತಿ ಸೂಲಿಬೆಲೆಗೆ ಕಾಮುಕ ಢೋಂಗಿ ಎಂದಿದ್ದಾರೆ.
ನಟ ಪ್ರಕಾಶ್ ರಾಜ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮದುವೆಯಾಗಲು ಹುಡುಗಿ ಸಿಗದೆ ಇರುವ ಹಿಂದೂ ಯುವಕರು ಅನ್ಯಧರ್ಮೀಯ ಹುಡುಗಿಯರನ್ನು ಪ್ರೀತಿಸಿ ಮದುವೆಯಾಗಿ ಅಂತ ಚಕ್ರವರ್ತಿ ಸೂಲಿಬೆಲೆ ಅವರು ಹೇಳಿದ್ದಾರೆ.
ಚಕ್ರವರ್ತಿ ವಿಡಿಯೋವನ್ನು ಹಂಚಿಕೊಂಡಿರುವ ಪ್ರಕಾಶ್ ರಾಜ್ ಅವರು, ಈ ತನಾತನಿಯ ಆಯುಧವೆಲ್ಲ ಸೊಂಟದ ಕೆಳಗೇ.... ಛಿ.. ಛೀ .. ಇಂಥಾ ವಿಕೃತ .. ಕಾಮುಕ ಢೋಂಗಿಗಳು ಯಾವ ಧರ್ಮಕ್ಕೂ ಸೇರಿದವರಲ್ಲ ... ಎಚ್ಚರದಿಂದಿರಿ 🙏🙏🙏 #justasking ಎಂದಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ಮಾಡಿರುವ ಭಾಷಣದ ವಿಡಿಯೋ ವೈರಲ್ ಆಗಿದೆ. ಅನ್ಯ ಧರ್ಮೀಯ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಎಂದಿರುವ ಸೂಲಿಬೆಲೆ ಅವರು, ಎಷ್ಟು ದಿನ ನಮ್ಮ ಹುಡುಗಿಯರನ್ನೇ ನೋಡ್ತೀಯಪ್ಪ. ಬೇರೆ ಧರ್ಮದ ಹುಡುಗಿಯರನ್ನೂ ನೋಡಿ ಅಂತ ಹೇಳಬೇಕು ಎಂದಿದ್ದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಪ್ರಕಾಶ್ ರಾಜ್ ರಿಯಾಕ್ಟ್ ಮಾಡಿದ್ದಾರೆ.
Advertisement