ಭೋವಿ ನಿಗಮ ಹಗರಣ: ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ; ಸಿಐಡಿ Dysp ಕನಕಲಕ್ಷ್ಮೀ ಬಂಧನ!

ಕರ್ನಾಟಕ ಭೋವಿ ನಿಗಮ ಹಗರಣದ ತನಿಖೆ ಎದುರಿಸಿದಾಗ ಪೊಲೀಸ್ ಅಧಿಕಾರಿ ವಿವಸ್ತ್ರಗೊಳಿಸಿ ವಿಚಾರಣೆ ನಡೆಸಿ, 25 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಜೀವಾ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ವಕೀಲೆ ಜೀವಾ-ಕನಕಲಕ್ಷ್ಮೀ
ವಕೀಲೆ ಜೀವಾ-ಕನಕಲಕ್ಷ್ಮೀ
Updated on

ಬೆಂಗಳೂರು: ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ Dysp ಕನಕಲಕ್ಷ್ಮೀ ಅವರನ್ನು SIT ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ಕರ್ನಾಟಕ ಭೋವಿ ನಿಗಮ ಹಗರಣದ ತನಿಖೆ ಎದುರಿಸಿದಾಗ ಪೊಲೀಸ್ ಅಧಿಕಾರಿ ವಿವಸ್ತ್ರಗೊಳಿಸಿ ವಿಚಾರಣೆ ನಡೆಸಿ, 25 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಜೀವಾ 13 ಪುಟಗಳ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಜೀವಾ ಸಹೋದರಿ ಸಿಐಡಿ ಡಿವೈಎಸ್‌ಪಿ ಕನಕಲಕ್ಷ್ಮಿ ವಿರುದ್ಧ ದೂರು ನೀಡಿದ್ದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೋವಿ ನಿಗಮದ ಅಕ್ರಮದ ಕುರಿತು ಕಾಂಗ್ರೆಸ್​ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಇದನ್ನು ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀ ಅವರು ತನಿಖೆ ಕೈಗೊಂಡಿದ್ದು, ಬೋವಿ ನಿಗಮದ ಫಲಾನುಭವಿಗಳಿಗೆ ಮೆಟಿರಿಯಲ್ ಪೂರೈಸಿದ ಆರೋಪದ ಮೇಲೆ 34 ವರ್ಷದ ವಕೀಲೆ ಜೀವಾ ಎನ್ನುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ ವಿಚಾರಣೆ ಬಳಿಕ ವಕೀಲೆ ಜೀವಾ ಬೆಂಗಳೂರಿನ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ಏನಿದು ಹಗರಣ:

ಭೋವಿ ಅಭಿವೃದ್ಧಿ ನಿಗಮದಲ್ಲಿ ಸಾಲ ಕೊಡಿಸುವುದಾಗಿ ಮಹಿಳೆಯರು ಸೇರಿದಂತೆ ಹಲವರಿಂದ ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಿ ಕೆ.ಎನ್. ಸೂರ್ಯ ಕಲಾವತಿ ಎಂಬುವರು ಮಾರ್ಚ್ 18, 2023 ರಲ್ಲಿ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2021ರ ಅಕ್ಟೋಬರ್ ನಲ್ಲಿ ತನ್ನನ್ನು ಸಂಪರ್ಕಿಸಿದ ಸರಸ್ವತಿ ಮತ್ತು ಲಕ್ಷ್ಮಿ ಎಂಬುವರು ಭೋವಿ ಅಭಿವೃದ್ಧಿ ನಿಗಮದಿಂದ ಸಾಲ ಪಡೆಯಬಹುದಾಗಿದೆ. ಸಾಲ ತೀರಿದಾಗ ಲಂಚವಾಗಿ ರೂ. 25,000 ನೀಡುವಂತೆ ಹೇಳಿದ್ದರು. ಅದರಂತೆ ಸೂರ್ಯಕಲಾವತಿ ಅಗತ್ಯ ದಾಖಲೆಗಳು ಮತ್ತು ಎರಡು ಖಾಲಿ ಚೆಕ್‌ಗಳನ್ನು ಸಲ್ಲಿಸಿದರು ಮತ್ತು ಖಾಲಿ ಕಾಗದಗಳಿಗೆ ಸಹಿ ಹಾಕಿದ್ದರು.

ಸರಸ್ವತಿ ಮತ್ತು ಲಕ್ಷ್ಮಿಯವರು ಸಂಪರ್ಕಿಸಿದ 40 ಮಹಿಳೆಯರಲ್ಲಿ ಸೂರ್ಯಕಲಾವತಿ ಒಬ್ಬರು. ಒಂದು ತಿಂಗಳ ನಂತರ 50,000 ರೂ.ಗಳನ್ನು ಮಂಜೂರು ಮಾಡಲಾಗಿದ್ದು, ಒಪ್ಪಂದದಂತೆ 25,000 ರೂ.ಗಳನ್ನು ಅವರ ಖಾತೆಯಿಂದ ಹಿಂಪಡೆಯಲಾಗಿದೆ ಎಂದು ಆರೋಪಿತ ಮಹಿಳೆಯರು ಸೂರ್ಯಕಲಾವತಿ ಅವರಿಗೆ ಹೇಳಿದ್ದಾರೆ.

ವಕೀಲೆ ಜೀವಾ-ಕನಕಲಕ್ಷ್ಮೀ
ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ ತನಿಖೆಗೆ ಹೈಕೋರ್ಟ್‌ ಎಸ್‌ಐಟಿ ರಚನೆ; ವರದಿ ಸಲ್ಲಿಕೆಗೆ 3 ತಿಂಗಳ ಗಡುವು!

ಡಿಸೆಂಬರ್ 2022 ರಲ್ಲಿ, ಭೋವಿ ಅಭಿವೃದ್ಧಿ ನಿಗಮದ ಅಧಿಕಾರಿಗಳು ಅವರನ್ನು ಸಂಪರ್ಕಿಸಿದ್ದು, ಅವರು ತೆಗೆದುಕೊಂಡಿರುವ 5 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿಸಬೇಕೆಂದು ಹೇಳಿದ್ದಾರೆ. ಇದನ್ನು ತಿಳಿದು ಬೆಚ್ಚಿಬಿದ್ದ ಆಕೆ ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ ಭೋವಿ ಅಭಿವೃದ್ಧಿ ನಿಗಮದಿಂದ ರೂ.5 ಲಕ್ಷ ಮಂಜೂರು ಆಗಿರುವುದು ತಿಳಿದುಬಂದಿದೆ.

ರೂ.5 ಲಕ್ಷದ ಹಣದಲ್ಲಿ 4,75,000 ರೂ.ಗಳನ್ನು ನ್ಯೂ ಡ್ರೀಮ್ಸ್ ಎಂಟರ್‌ಪ್ರೈಸಸ್‌ಗೆ ವರ್ಗಾಯಿಸಲಾಗಿದೆ. ಆಕೆಯ ದೂರಿನ ಆಧಾರದ ಮೇಲೆ ಸಿಐಡಿ ತನಿಖೆ ಆರಂಭಿಸಿತ್ತು. ತನಿಖೆಯ ಸಂದರ್ಭದಲ್ಲಿ, ಹಲವಾರು ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಅವರಲ್ಲಿ ವಕೀಲೆ ಜೀವಾ ಕೂಡಾ ಒಬ್ಬರಾಗಿದ್ದರು. ಆಕೆಯನ್ನು ವಿಚಾರಣೆಗಾಗಿ ಕರೆಸಲಾಗಿತ್ತು ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com