
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲಕ ಹಾದು ಹೋಗುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಟೋಲ್-ಫ್ರೀ ಮೇಜರ್ ಆರ್ಟೀರಿಯಲ್ ರಸ್ತೆ (MAR) ಶೀಘ್ರವೇ ಪೂರ್ಣಗೊಳ್ಳಲಿದ್ದು, ಈ ಪ್ರದೇಶದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿಯಿಂದ ದೊಡ್ಡ ಪರಿಹಾರ ಸಿಗಲಿದೆ.
ಇದು ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರಿನ ನಡುವಿನ ಪ್ರಯಾಣದ ಸಮಯವನ್ನು 60 ನಿಮಿಷಗಳಿಂದ ಕೇವಲ 10 ನಿಮಿಷಗಳಿಗೆ ಇಳಿಸುತ್ತದೆ. ಈ ಯೋಜನೆಯ ಭಾಗವಾಗಿ ಸುಳಿಕೆರೆ ಕಾಡಿನ ಮೂಲಕ ರಸ್ತೆ ಹಾದುಹೋಗುವುದಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಲು ಒಪ್ಪಿಕೊಂಡಿದೆ.
100 ಮೀಟರ್ ಅಗಲದ ಈ ದಶಪಥ ರಸ್ತೆ ಮೈಸೂರು ರಸ್ತೆಯನ್ನು ಮಾಗಡಿ ರಸ್ತೆಯೊಂದಿಗೆ ಸಂಪರ್ಕಿಸುತ್ತದೆ. ಇದು ಪ್ರತಿ ದಿಕ್ಕಿನಲ್ಲಿ ಮೂರು ಪಥಗಳು ಮತ್ತು ನಾಲ್ಕು ಸರ್ವಿಸ್ ರೋಡ್ ಗಳನ್ನು ಈ ರಸ್ತೆ ಹೊಂದಿರಲಿದ್ದು, ಪ್ರಸ್ತುತ ಸಿಗ್ನಲ್ ಮುಕ್ತವಾಗಿದೆ. ಆದರೆ ಭವಿಷ್ಯದಲ್ಲಿ ಸಿಗ್ನಲ್ ಗಳನ್ನು ಸ್ಥಾಪಿಸಲಾಗುತ್ತದೆ.
ಉದ್ದೇಶಿತ 10.77 ಕಿಮೀ MAR ರಸ್ತೆಯಲ್ಲಿ 10.3 ಕಿಮೀ ರಸ್ತೆಯನ್ನು ಈಗ ನಿರ್ಮಿಸಲಾಗುವುದು ಮತ್ತು ಉಳಿದದ್ದನ್ನು ಬೆಂಗಳೂರು ಮೆಟ್ರೋ ತನ್ನ ಚಲ್ಲಘಟ್ಟ ಡಿಪೋ ಬಳಿ ನಿರ್ಮಿಸಲಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ನಾವು 95% ರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇವೆ. ಆದಾಗ್ಯೂ, ನಡುವೆ ಕೆಲವು ಕಾಮಗಾರಿ ಮತ್ತು 180 ಮೀಟರ್ ರಸ್ತೆಯನ್ನು ನಿರ್ಮಿಸಲು ಅರಣ್ಯ ಇಲಾಖೆಯಿಂದ ನಮಗೆ ಅಗತ್ಯವಿರುವ ಸಣ್ಣ ತುಂಡು ಭೂಮಿಯನ್ನು ತಡೆಹಿಡಿಯಲಾಗಿದೆ. ಇದು ಮೈಸೂರು ರಸ್ತೆಯ ತುದಿಯಿಂದ 4 ಕಿ.ಮೀ ದೂರದಲ್ಲಿದೆ." ಇದು ಹಸ್ತಾಂತರದ ಪ್ರಕ್ರಿಯೆಯಲ್ಲಿದೆ.
ಅರಣ್ಯ ಇಲಾಖೆ ಈ ಹಿಂದೆ ತನ್ನ ಪ್ರದೇಶದ ಮೂಲಕ ರಸ್ತೆ ಹಾದುಹೋಗಲು ಅನುಮತಿ ನೀಡಲು ನಿರಾಕರಿಸಿತ್ತು ಎಂದು ಬಿಡಿಎ ಅಧಿಕಾರಿಯೊಬ್ಬರು ವಿವರಿಸಿದರು. ಇದು ಒಂದು ಬದಿಯಲ್ಲಿ 90 ಪ್ರತಿಶತ ಅರಣ್ಯವನ್ನು ಮತ್ತು ಇನ್ನೊಂದು ಬದಿಯಲ್ಲಿ ಹತ್ತು ಪ್ರತಿಶತ ಅರಣ್ಯವನ್ನು ವಿಭಜಿಸುತ್ತದೆ ಎಂದು ಹೇಳಿದರು.
"ಅರಣ್ಯ ಇಲಾಖೆ ಒಪ್ಪಿಗೆಯಲ್ಲಿನ ವಿಳಂಬ ನಮ್ಮ ರಸ್ತೆಯನ್ನು ಪೂರ್ಣಗೊಳಿಸುವುದನ್ನು ಬಹಳ ಸಮಯದಿಂದ ತಡೆಹಿಡಿಯಿತು. ನಾವು ಈಗ ಪಿಡಬ್ಲ್ಯೂಡಿ ಬಹಳ ಹಿಂದೆಯೇ ನಿರ್ಮಿಸಿದ ಭೂಮಿಯನ್ನು ಗುರುತಿಸಿದ್ದೇವೆ, ಅದು 90% ಭಾಗ ಇರುವ ಭಾಗದಲ್ಲಿದೆ. ನಮ್ಮ ರಸ್ತೆಯನ್ನು ಅಸ್ತಿತ್ವದಲ್ಲಿರುವ ರಸ್ತೆಗೆ ಸಂಪರ್ಕಿಸುವ ರೀತಿಯಲ್ಲಿ ನಿರ್ಮಿಸುತ್ತೇವೆ. ನಾವು ನಮ್ಮ ಯೋಜನೆಯನ್ನು ಅರಣ್ಯ ಇಲಾಖೆಗೆ ವಿವರಿಸಿದ್ದೇವೆ ಮತ್ತು ಅವರು ಯೋಜನೆಗೆ ಒಪ್ಪಿಗೆ ಸೂಚಿಸಿದ್ದಾರೆ, ”ಎಂದು ಅವರು ಹೇಳಿದ್ದಾರೆ.
ಈಗ ಅರಣ್ಯ ಇಲಾಖೆಗೆ ಹೊಸ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. "ಅರಣ್ಯ ಇಲಾಖೆಯಿಂದ ಲಿಖಿತ ಒಪ್ಪಿಗೆ ಸಿಕ್ಕ ತಕ್ಷಣ ರಸ್ತೆಯನ್ನು ಪೂರ್ಣಗೊಳಿಸಲು ನಾವು ಆಶಿಸುತ್ತೇವೆ" ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.
Advertisement