ಚಿತ್ರದುರ್ಗ: ಮದುವೆ ಮಂಟಪದಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ಕಿರಿಕ್; ಮುರಿದು ಬಿತ್ತು 'ಟೆಕಿ'ಗಳ ಮದುವೆ!

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿರತಹಳ್ಳಿ ಗ್ರಾಮದ ಯುವತಿ ಹಾಗೂ ಜಗಳೂರು ಪಟ್ಟಣದ ಯುವಕನ ವಿವಾಹ ನಿಶ್ಚಯವಾಗಿತ್ತು.
Wedding called off after fight over drinking water
ನೀರಿನ ವಿಚಾರಕ್ಕೆ ಮುರಿದು ಬಿದ್ದ ವಿವಾಹ
Updated on

ಚಿತ್ರದುರ್ಗ: ಕುಡಿಯುವ ನೀರಿನ ವಿಚಾರಕ್ಕೆ ಜಗಳ ನಡೆದು, ಮುದುವೆ ಮುರಿದು ಬಿದ್ದ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಲಿಜ ಶ್ರೇಯ ಭವನದಲ್ಲಿ ಭಾನುವಾರ ನಡೆದಿದೆ.

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿರತಹಳ್ಳಿ ಗ್ರಾಮದ ಯುವತಿ ಹಾಗೂ ಜಗಳೂರು ಪಟ್ಟಣದ ಯುವಕನ ವಿವಾಹ ನಿಶ್ಚಯವಾಗಿತ್ತು. ವಧು-ವರರಿಬ್ಬರೂ ಎಂಜಿನಿಯರಿಂಗ್ ಪದವೀಧರರಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಶನಿವಾರ ಆರತಕ್ಷತೆ ನಡೆದು, ಭಾನುವಾರ ಬೆಳಗ್ಗೆ 10.30ರಿಂದ 11.30ರ ಸಮಯದಲ್ಲಿ ಮುಹೂರ್ತ ನಡೆಯಬೇಕಿತ್ತು. ಈ ನಡುವೆ ಶನಿವಾರ ಸಂಜೆ ಆರತಕ್ಷತೆ ಮುಗಿಸಿಕೊಂಡು ಊಟಕ್ಕೆ ಹೋದ ವರನ ಕಡೆಯ ಕೆಲವರಿಗೆ ಕುಡಿಯುವ ನೀರು ಸಿಕ್ಕಿಲ್ಲ. ಇದೇ ವಿಚಾರಕ್ಕೆ ವಧು ಹಾಗೂ ವರನ ಕಡೆಯವರ ನಡುವೆ ಜಗಳ ನಡೆದಿದೆ. ನೀರಿನ ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಮದುವೆಯೇ ನಿಲ್ಲುವ ಸೂಚನೆ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಹಿರಿಯರು ಶನಿವಾರ ರಾತ್ರಿಯಿಂದಲೇ ಸಂಧಾನ ನಡೆಸಿದ್ದರು.

ಕುಡಿಯೋ ನೀರಿನ ಗಲಾಟೆಗೆ ಲಕ್ಷ, ಲಕ್ಷ ಖರ್ಚು ಮಾಡಿ ಮದುವೆ ಮಾಡುತ್ತಿದ್ದ ಪೋಷಕರು ಶಾಕ್ ಆಗಿದ್ದಾರೆ. ರಾತ್ರಿ ನೀರಿನ ಜಗಳ‌ ಮರೆತು ಮದುವೆಗೆ ಒಪ್ಪುವಂತೆ ವರನ ಕಡೆಯವರು ಮನವಿ ಮಾಡಿದ್ದಾರೆ. ಆದರೆ ಈ ವರನ ಜೊತೆ ನನಗೆ ಮದುವೆ ಬೇಡವೇ ಬೇಡ ಎಂದು ವಧು ನಿರಾಕರಿಸಿದ್ದಾರೆ. ಮದುವೆ ಮುರಿದು ಬೀಳುತ್ತಿದ್ದಂತೆ ಕಲ್ಯಾಣ ಮಂಟಪದಿಂದ ಸಂಬಂಧಿಕರು ಗಂಟು ಮೂಟೆ ಕಟ್ಟಿ‌ ಮನೆಗೆ ತೆರಳಿದ್ದಾರೆ.

Wedding called off after fight over drinking water
ವಧುವಿನ ಕಡೆಯವರ ಮಟನ್ ಊಟದಲ್ಲಿ 'ನಲ್ಲಿ ಮೂಳೆ' ಇಲ್ಲವೆಂದು ಮುರಿದು ಬಿದ್ದ ಮದುವೆ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com