ಎಲ್ಲದಕ್ಕೂ ಒಂದು ಮಿತಿ ಇದೆ- ಗೆಟ್ ಔಟ್: ಹರೀಶ್ ಪೂಂಜಾಗೆ ಸ್ಪೀಕರ್ ವಾರ್ನಿಂಗ್; ಸದನದಲ್ಲಿ ಖಾದರ್ ಕೆಂಡಾಮಂಡಲ

ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆದಾಗ ತಾಳ್ಮೆ ಕಳೆದುಕೊಂಡು, ಕೆಂಡಾಮಂಡಲರಾದ ಸ್ಪೀಕರ್ ‌ಯು.ಟಿ ಖಾದರ್ ʻತೆಗೆದು ಬಿಸಾಡುತ್ತೇನೆ, ಗೆಟ್ ಔಟ್!ʼ ಎಂದು ಬಿಜೆಪಿ ಸದಸ್ಯ ಹರೀಶ್ ಪೂಂಜಾಗೆ ಖಡಕ್ ವಾರ್ನಿಂಗ್ ನೀಡಿದರು.
U T Khader
ಸ್ಪೀಕರ್ ಖಾದರ್
Updated on

ಬೆಂಗಳೂರು: ಸದನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಯಾರು? ಎಂಬ ಬಿರುಸು ಚರ್ಚೆ ನಡೆಯಿತು.

ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆದಾಗ ತಾಳ್ಮೆ ಕಳೆದುಕೊಂಡು, ಕೆಂಡಾಮಂಡಲರಾದ ಸ್ಪೀಕರ್ ‌ಯು.ಟಿ ಖಾದರ್ ʻತೆಗೆದು ಬಿಸಾಡುತ್ತೇನೆ, ಗೆಟ್ ಔಟ್!ʼ ಎಂದು ಬಿಜೆಪಿ ಸದಸ್ಯ ಹರೀಶ್ ಪೂಂಜಾಗೆ ಖಡಕ್ ವಾರ್ನಿಂಗ್ ನೀಡಿದರು.

ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ (SCSP/TSP) ನಿಧಿಯನ್ನು ಖಾತರಿ ಯೋಜನೆಗಳಿಗಾಗಿ ಬಳಸಲಾಗಿದೆ ಎಂಬ ಆರೋಪದ ಮೇಲೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ತೀವ್ರ ವಾಗ್ವಾದ ನಡೆಸಿದರು. ಮುಖ್ಯಮಂತ್ರಿ ತಮ್ಮ ಉತ್ತರ ನೀಡುತ್ತಿರುವಾಗ ಬಿಜೆಪಿ ಸದಸ್ಯರು ಈ ವಿಷಯವನ್ನು ಎತ್ತಿದರು.

ಎಲ್ಲದಕ್ಕೂ ಒಂದು ಮಿತಿ ಇದೆ ಎಂದು ಖಾದರ್ ಹೇಳಿದರು. "ನೀವು ಕೇಳಲು ಬಯಸದಿದ್ದರೆ, ಸದನದಿಂದ ಹೊರನಡೆಯಿರಿ. ಇಲ್ಲದಿದ್ದರೆ, ನಾನು ನಿಮ್ಮನ್ನು ಹೊರಗೆ ಬಿಸಾಡಬೇಕಾಗುತ್ತದೆ. ಕುಳಿತು ಆಲಿಸಿ, ಅಥವಾ ಹೊರನಡೆಯಿರಿ" ಎಂದು ಅವರು ಸದನದಲ್ಲಿ ಗದ್ದಲ ಸೃಷ್ಟಿಸುತ್ತಿದ್ದ ಬಿಜೆಪಿ ಸದಸ್ಯರಿಗೆ ಹೇಳಿದರು.

U T Khader
ಬಾಯಿಗೆ ಬಂದ ಹಾಗೆ ಮಾತನಾಡಲು ಇದು RSS ಕಚೇರಿ ಅಲ್ಲ: ಸದನದಲ್ಲಿ ಕೆರಳಿದ ಪ್ರಿಯಾಂಕ್‌ ಖರ್ಗೆ

ಬಿಜೆಪಿ ಸದಸ್ಯ ಹರೀಶ್ ಪೂಂಜಾ ಬೇರೆ ಸದಸ್ಯರ ಆಸನದಲ್ಲಿ ಇದ್ದಾಗ ಅವರಿಗೆ ಎಚ್ಚರಿಕೆ ಕೊಟ್ಟ ಸ್ಪೀಕರ್ ‘ ನಿನ್ನ ಸೀಟಿಗೆ ಹೋಗಿ ಮಾತನಾಡು. ಇಲ್ಲಾಂದ್ರೆ ಹೊರಗಡೆ ನಡಿ ಗೆಟ್ ಔಟ್ ಎಂದು ತಾಳ್ಮೆ ಕಳೆದುಕೊಂಡು ವಾರ್ನಿಂಗ್ ಮಾಡಿದರು. ಸ್ಪೀಕರ್ ʻಬಿಸಾಡುತ್ತೇನೆʼ ಎಂಬ ಪದ ಬಳಕೆಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಹಾಗೆ ಮಾತನಾಡುವುದು ಸರಿಯಲ್ಲ. ಯಾವ ಅಧ್ಯಕ್ಷರೂ ಹೀಗೆ ಮಾತನಾಡಿಲ್ಲ ಎಂದು ಬಿಜೆಪಿ ಸದಸ್ಯ ಸಿ ಸಿ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅವರ ಪಕ್ಷದ ಇತರ ಸದಸ್ಯರು ಸಹ ಪ್ರತಿಭಟನೆಗೆ ಸೇರಿಕೊಂಡರು ಮತ್ತು ಹಿರಿಯ ಬಿಜೆಪಿ ಶಾಸಕ ಸಿ.ಸಿ. ಪಾಟೀಲ್ ಅವರು, ಯಾವುದೇ ಸ್ಪೀಕರ್ ಸದನದ ಸದಸ್ಯರೊಂದಿಗೆ ಇಷ್ಟು ಒರಟಾಗಿ ವರ್ತಿಸಿಲ್ಲ ಎಂದು ಹೇಳಿದರು. ಸ್ಪೀಕರ್ ಅಂತಹ ಪದಗಳನ್ನು ಉಚ್ಚರಿಸುವುದು ಸದನದ ವಿರುದ್ಧವಾಗಿದೆ, ಇದನ್ನು ಅಧಿಕೃತ ದಾಖಲೆಗಳಿಂದ ತೆಗೆದುಹಾಕಬೇಕು ಎಂದು ಅವರು ಹೇಳಿದರು.

ಅಂಬೇಡ್ಕರ್ ಬಗ್ಗೆ ಮಾತನಾಡಿದಾಗ ಬಿಸಾಡುತ್ತೇನೆ ಎಂದರೆ ಏನು ಅರ್ಥ?, ನಾವು ಬಿಟ್ಟಿಗೆ ಬಂದಿದ್ದೇವಾ? ಎಂದು ಹರೀಶ್ ಪೂಂಜಾ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸದಸ್ಯರ ಅಸಮಾಧಾನದ ವೇಳೆ ತಿರುಗೇಟು ಕೊಟ್ಟ ಸ್ಪೀಕರ್ ‘ ಮಂಗಳೂರಿನ ಜ್ಯೋತಿಯಲ್ಲಿ ಅಂಬೇಡ್ಕರ್ ಸರ್ಕಲ್ ಕಟ್ಟಿ ಎಷ್ಟು ವರ್ಷವಾಯ್ತು. ಒಂದು ಸರ್ಕಲ್ ಕಟ್ಟುವ ಯೋಗ್ಯತೆ ಇಲ್ಲ. ಇಲ್ಲಿ ಮಾತನಾಡುತ್ತೀರಾ’ ಎಂದು ಗದರಿಸಿದರು‌.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com