ಪರೀಕ್ಷೆ ಅಕ್ರಮ ತಡೆಗೆ AI ತಂತ್ರಜ್ಞಾನ ಬಳಕೆ: ಮೊದಲ ಯತ್ನ ಯಶಸ್ವಿ

ಈ ತಂತ್ರಜ್ಞಾನವು ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಎಂಜಿನಿಯರಿಂಗ್‌ ತಂಡ ಸ್ವತಃ ಸಿದ್ಧಪಡಿಸಿದ ಎಐ ತಾಂತ್ರಿಕತೆಯ ಮೊಬೈಲ್‌ ಆಧರಿತ ಅಭ್ಯರ್ಥಿ ದೃಢೀಕರಣ (ಮೊಬೈಲ್‌-ಬೇಸ್ಡ್ ಕ್ಯಾಂಡಿಡೇಟ್‌ ಅಥೆಂಟಿಕೇಷನ್‌) ವ್ಯವಸ್ಥೆಯನ್ನು ಶನಿವಾರ ನಡೆದ ನೇಮಕಾತಿ ಪರೀಕ್ಷೆಯಲ್ಲಿ ಮೊಟ್ಟ ಮೊದಲ ಬಾರಿಗೆ ಬಳಸಿದ್ದು, ಈ ಪ್ರಯತ್ನ ಯಶಸ್ವಿಯಾಗಿದೆ.

ಈ ತಂತ್ರಜ್ಞಾನವು ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಿದೆ. ವಿಧಾನ ಪರಿಷತ್​ನಲ್ಲಿ ಖಾಲಿ ಇರುವ ಕಂಪ್ಯೂಟರ್ ಆಪರೇಟರ್ ಹಾಗೂ ಇನ್ನಿತರ ಹುದ್ದೆಗಳಿಗೆ 4 ದಿನಗಳ ಪರೀಕ್ಷೆ ಶನಿವಾರ ಆರಂಭವಾಗಿದ್ದು, ಇದರಲ್ಲಿ ಕೆಇಎ ಇಂಜಿನಿಯರಿಂಗ್ ತಂಡದವರು ಅಭಿವೃದ್ಧಿಪಡಿಸಿರುವ ಎಐ ಪ್ರಯೋಗಾರ್ಥವಾಗಿ ಬಳಸಲಾಯಿತು. ಅಭ್ಯರ್ಥಿಗಳು ಪರೀಕ್ಷಾ ಕೊಠಡಿ ಪ್ರವೇಶಿಸುವಾಗ ಮೊಬೈಲ್ ಆ್ಯಪ್ ಬಳಸಿ ಅವರ ಮುಖದ ಚಿತ್ರ ಸೆರೆ ಹಿಡಿಯಲಾಗಿತ್ತು.

ಇದು, ತಕ್ಷಣವೇ ಕೆಇಎ ಸರ್ವರ್​ನೊಂದಿಗೆ ಆನ್​ಲೈನ್ ಮೂಲಕ ಸಂಪರ್ಕಗೊಂಡು ಅಭ್ಯರ್ಥಿಗಳು ಅರ್ಜಿ ಹಾಕುವ ಸಂದರ್ಭದಲ್ಲಿ ಹಾಕಿದ್ದ ಭಾವಚಿತ್ರದೊಂದಿಗೆ ತಾಳೆ ನೋಡಿ, ಅಭ್ಯರ್ಥಿ ನೈಜತೆಯನ್ನು ತಕ್ಷಣವೇ ದೃಢಪಡಿಸಿತ್ತು.

ಇದರಿಂದ, ನಕಲಿ ಅಭ್ಯರ್ಥಿಗಳನ್ನು ಪರೀಕ್ಷಾ ಕೊಠಡಿ ಪ್ರವೇಶಿಸದಂತೆ ತಡೆಯಲು ಸಾಧ್ಯವಾಯಿತು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಹೇಳಿದ್ದಾರೆ.

ಸಂಗ್ರಹ ಚಿತ್ರ
ಎಐ ಕೌಶಲ ಕುರಿತು ರಾಜ್ಯ ಸರ್ಕಾರದ ಜೊತೆ ಒಡಂಬಡಿಕೆಗೆ ಮೈಕ್ರೋಸಾಪ್ಟ್ ಒಲವು: ಎಂಬಿ ಪಾಟೀಲ

ಶನಿವಾರ ಬೆಳಗ್ಗೆ 74 ಅಭ್ಯರ್ಥಿಗಳು ಹಾಗೂ ಮಧ್ಯಾಹ್ನ 267 ಅಭ್ಯರ್ಥಿಗಳು ಪರೀಕ್ಷೆ ಬರೆದರು. ಈ ತಾಂತ್ರಿಕ ವ್ಯವಸ್ಥೆಯ ಮೊದಲ ದಿನದ ಪ್ರಯೋಗ ಯಶಸ್ವಿಯಾಗಿದ್ದು, ಇನ್ನು ಮುಂದೆ ಇತರ ಪರೀಕ್ಷೆಗಳಿಗೂ ಇದರ ಬಳಕೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಪರೀಕ್ಷೆ ಮುಗಿದ ತಕ್ಷಣವೇ ಅಭ್ಯರ್ಥಿಗಳ ಒಎಂಆರ್ ಶೀಟ್​ಗಳನ್ನು ಕೆಇಎ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡುವ ಕೆಲಸವನ್ನೂ ಇದೇ ಮೊದಲು ಮಾಡಲಾಯಿತು.

ಇದು ಪಾರದರ್ಶಕ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದ್ದು, ಯಾರು ಬೇಕಾದರೂ ಒಎಂಆರ್ ಶೀಟ್​ಗಳನ್ನು ನೋಡಬಹುದು. ಇದರಿಂದ ಅಕ್ರಮ/ಅನುಮಾನಗಳಿಗೆ ಅವಕಾಶವೇ ಇಲ್ಲದಂತಾಗಲಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com