
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಕಸ್ಟಮ್ಸ್ ಅಧಿಕಾರಿಗಳು ಭಾನುವಾರ ರಾತ್ರಿ ಮಲೇಷ್ಯಾದಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಸೂಟ್‌ಕೇಸ್‌ನೊಳಗೆ ಉಸಿರುಗಟ್ಟಿಸುವ ಸ್ಥಿತಿಯಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಎರಡು ಅಳಿವಿನಂಚಿನಲ್ಲಿರುವ ಮಂಗಗಳನ್ನು ರಕ್ಷಿಸಿದ್ದಾರೆ.
ನಾಲ್ಕು ಸಿಯಾಮಾಂಗ್ ಗಿಬ್ಬನ್ ಮಂಗಗಳು ಮತ್ತು ಎರಡು ನಾರ್ತ್ ಪಿಗ್‌ಟೇಲ್ಡ್ ಮ್ಯಾಕ್ವಾಕ್ ಗಳನ್ನು ರಕ್ಷಿಸಿ ಮಲೇಶಿಯಾ ದೇಶಕ್ಕೆ ಹಿಂತಿರುಗಿಸಲಾಗಿದೆ ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ. ಕೌಲಾಲಂಪುರದಿಂದ ಕೆಐಎಯ ಟರ್ಮಿನಲ್ 2 ಗೆ ರಾತ್ರಿ 11.30 ಕ್ಕೆ ಆಗಮಿಸಿದ ಮಲೇಷ್ಯಾದ ಏರ್‌ಲೈನ್ಸ್ ವಿಮಾನ MH 192 ರಲ್ಲಿ ಪ್ರಾಣಿಗಳನ್ನು ರಕ್ಷಿಸಲಾಗಿದೆ.
ತಮಿಳುನಾಡು ಮೂಲದ ಈ ನಿರ್ದಿಷ್ಟ ವ್ಯಕ್ತಿಯನ್ನು ನಾವು ಪತ್ತೆಹಚ್ಚಿದ್ದೇವೆ. ಆರು ಮಂಗಗಳನ್ನು ಒಂದೇ ಟ್ರಾಲಿ ಸೂಟ್‌ಕೇಸ್‌ನೊಳಗೆ ಚಾಕೊಲೇಟ್‌ಗಳು ಮತ್ತು ಬಟ್ಟೆಗಳ ನಡುವೆ ತುಂಬಿಸಲಾಗಿತ್ತು, ಅದನ್ನು ಅವರು ಹತ್ತುವಾಗ ಪರಿಶೀಲಿಸಿದ್ದರ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರ ಮಂಗಗಳನ್ನು ಮಲೇಷ್ಯಾಕ್ಕೆ ಹಿಂತಿರುಗಿಸಲಾಗಿದೆ. ಕಳೆದ ವರ್ಷದಿಂದ ಬೆಂಗಳೂರಿಗೆ ವಿದೇಶಿ ಜಾತಿಗಳ ಕಳ್ಳಸಾಗಣೆಯಲ್ಲಿ ಹೆಚ್ಚುತ್ತಿರುವ ಪ್ರವೃತ್ತಿಯನ್ನು ನಾವು ಗಮನಿಸಿದ್ದೇವೆ ಎಂದು ಅಧಿಕಾರಿ ಹೇಳಿದರು.
ಸಿಯಾಮಾಂಗ್ ಗಿಬ್ಬನ್ ಮಲೇಷ್ಯಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದ ಕಾಡುಗಳಲ್ಲಿ ಮಾತ್ರ ಕಂಡುಬರುತ್ತದೆ ಎಂದು ವನ್ಯಜೀವಿ ತಜ್ಞರೊಬ್ಬರು ಹೇಳಿದ್ದಾರೆ.
ದೇಶದಲ್ಲಿ ಸಾಕುಪ್ರಾಣಿಗಳಾಗಿ ಪೋಷಿಸಲು ಈ ವಿಲಕ್ಷಣ ಜಾತಿಗಳಿಗೆ ಬೇಡಿಕೆಯಿದೆ ಎಂದು ತಜ್ಞರು ಹೇಳಿದರು. ಆಗ್ನೇಯ ಏಷ್ಯಾದಾದ್ಯಂತ ಕಂಡುಬರುವ ಪಿಗ್‌ಟೇಲ್ಡ್ ಮಕಾಕ್‌ಗಳನ್ನು ಜೈವಿಕ ವೈದ್ಯಕೀಯ ಸಂಶೋಧನೆಯಲ್ಲಿ ಬಳಸಲಾಗುತ್ತದೆ ಏಕೆಂದರೆ ಅವುಗಳ ಸಂತಾನೋತ್ಪತ್ತಿ ವ್ಯವಸ್ಥೆಯು ಮಾನವರಿಗೆ ಹೋಲುತ್ತದೆ ಎಂದು ತಿಳಿಸಿದ್ದಾರೆ.
Advertisement