
ಚಿತ್ರದುರ್ಗ: ಟಿಟಿ ವಾಹನ ಪಲ್ಟಿಯಾಗಿ ಮೂವರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆ ಗ್ರಾಮದಲ್ಲಿ ನಡೆದಿದೆ. ಶಂಕರಿಬಾಯಿ(65ವ), ಕುಮಾರ ನಾಯ್ಕ್(46ವ) ಮತ್ತು ಶ್ವೇತಾ(38ವ) ಮೃತರಾಗಿದ್ದಾರೆ. ಐವರಿಗೆ ಗಂಭೀರ ಗಾಯಗಳಾಗಿದ್ದು, ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೆಗ್ಗೆರೆ ಗ್ರಾಮದ ಬಳಿ ಟಿಟಿ ವಾಹನಕ್ಕೆ ಟಿಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾಮ ಟಿಟಿ ವಾಹನ ಪಲ್ಟಿ ಹೊಡೆದಿದ್ದು, ಅದರಲ್ಲಿ ಮೂವರು ಮೃತಪಟ್ಟು, ಐವರು ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂವರು ನೀರುಪಾಲು
ಕೆರೆಯಲ್ಲಿ ಹಸು ತೊಳೆಯಲು ಹೋಗಿದ್ದ ಮೂವರು ನೀರುಪಾಲಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಾಮಳ್ಳಿಯಲ್ಲಿ ನಡೆದಿದೆ. ಮುದ್ದೇಗೌಡ(48ವ), ಬಸವೇಗೌಡ(45ವ), ವಿನೋದ್(17ವ) ಮೃತರಾಗಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಯುಗಾದಿ ಹಬ್ಬ ಹಿನ್ನೆಲೆ ಹಸುಗಳನ್ನು ತೊಳೆಯಲು ವಿನೋದ್ ಕೆರೆಗೆ ಹೋಗಿದ್ದರು. ಈ ವೇಳೆ ವಿನೋದ್‌ನನ್ನು ಹಸು ಕೆರೆಗೆ ಎಳೆದೊಯ್ದಿದೆ. ಆತನ ರಕ್ಷಣೆಗೆ ಮುದ್ದೇಗೌಡ ಮತ್ತು ಬಸವೇಗೌಡ ಕೆರೆಗೆ ಇಳಿದಿದ್ದಾರೆ. ಈಜು ಬಾರದೆ ನೀರಿನಲ್ಲಿ ಮುಳುಗಿ ಮೂವರೂ ಮೃತಪಟ್ಟಿದ್ದಾರೆ.
Advertisement