
ಚಿಕ್ಕಬಳ್ಳಾಪುರ: ತಾಯಿಯ ಸಾವಿನಿಂದ ಮನನೊಂದು ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಂದಿ ಮೋರಿ ಬಳಿ ನಡೆದಿದೆ.
ನೇಣಿಗೆ ಶರಣಾದ ಯುವಕನನ್ನು ಕೊನಘಟ್ಟ ಗ್ರಾಮದ ರಕ್ಷಿತ್ ಬಾಬು (24) ಎಂದು ಗುರುತಿಸಲಾಗಿದೆ. ಇವರ ತಾಯಿ ಚಂದ್ರಿಕಾ ಸಹ ಕಳೆದ ಒಂದೂವರೆ ತಿಂಗಳ ಹಿಂದೆ ಸಾಲಬಾಧೆಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದರು.
ಮೃತ ಯುವಕ, ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement