ಪಹಲ್ಗಾಮ್ ಭಯೋತ್ಪಾದಕ ದಾಳಿ: ಕಾರವಾರ ನೌಕಾ ನೆಲೆಯಲ್ಲಿ ಹೈ ಅಲರ್ಟ್

ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನದ ನಿಯಂತ್ರಣದಲ್ಲಿರುವ ನೀರು ಕಾರವಾರ ಕರಾವಳಿಯಿಂದ 250 ಕಿ.ಮೀ ದೂರದಲ್ಲಿದೆ ಮತ್ತು ದೊಡ್ಡ ದೋಣಿಗಳನ್ನು ಅಂತರರಾಷ್ಟ್ರೀಯ ಗಡಿಗಳಿಂದ ದೂರವಿರಲು ತಿಳಿಸಲಾಗಿದೆ.
File Image
ಸಂಗ್ರಹ ಚಿತ್ರ
Updated on

ಕಾರವಾರ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಮೀನುಗಾರರು ಮತ್ತು ದೊಡ್ಡ ಟ್ರಾಲರ್‌ಗಳ ನಿರ್ವಾಹಕರಿಗೆ ಕಾರವಾರದ ಕರಾವಳಿ ಭದ್ರತಾ ಪಡೆ ಎಚ್ಚರಿಕೆ ನೀಡಿದ್ದು ಸಮುದ್ರದಲ್ಲಿ ಯಾವುದೇ ಅನುಮಾನಾಸ್ಪದ ದೋಣಿಗಳ ಚಲನೆಯ ಮೇಲೆ ನಿಗಾ ಇಡುವಂತೆ ಸೂಚಿಸಿದೆ.

26 ಭಾರತೀಯರ ಜೀವವನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭದ್ರತೆ ಸಂಬಂಧ ಚರ್ಚಿಸಲು ಇತ್ತೀಚೆಗೆ ಕಾರವಾರದಲ್ಲಿ ಸಭೆ ಕರೆಯಲಾಗಿತ್ತು. ಕಾರವಾರವು ಭಾರತದ ಅತಿದೊಡ್ಡ ನೌಕಾ ನೆಲೆ ಯಾಗಿದ್ದು INS ಕದಂಬ - ಮತ್ತು ದೇಶದ ಮೊದಲ ವಿಮಾನವಾಹಕ ನೌಕೆ - INS ವಿಕ್ರಮಾದಿತ್ಯ ಇಲ್ಲಿ ನೆಲೆಗೊಂಡಿದೆ.

ಕಾರವಾರ ನೌಕಾ ನೆಲೆಯು ಗೋವಾ, ಕೊಚ್ಚಿ ಮತ್ತು ಮುಂಬೈ ನಂತರ ಶಸ್ತ್ರಾಸ್ತ್ರ ವಿಭಾಗ ಮತ್ತು ಕಾರ್ಯತಂತ್ರದ ನೌಕಾ ರಕ್ಷಣಾ ಸ್ಥಳವಾಗಿದೆ. ಈ ನೆಲೆಯನ್ನು ತರಬೇತಿ ಉದ್ದೇಶಗಳಿಗಾಗಿಯೂ ಬಳಸಲಾಗುತ್ತದೆ. ಸಮುದ್ರದಲ್ಲಿ ಯಾವುದೇ ಅನುಮಾನಾಸ್ಪದ ದೋಣಿಗಳು ಕಂಡುಬಂದರೆ, ತಕ್ಷಣ ವರದಿ ಮಾಡಲು ಭದ್ರತಾ ಪಡೆಗಳು ಮೀನುಗಾರರಿಗ ತಿಳಿಸಿದೆ.

ಕಾರವಾರ ಕರಾವಳಿಯಲ್ಲಿ ಭದ್ರತಾ ಪರಿಸ್ಥಿತಿಯ ಬಗ್ಗೆ ದೊಡ್ಡ ದೋಣಿ ನಿರ್ವಾಹಕರಿಗೆ ಮಾಹಿತಿ ನೀಡಲಾಯಿತು. ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನದ ನಿಯಂತ್ರಣದಲ್ಲಿರುವ ನೀರು ಕಾರವಾರ ಕರಾವಳಿಯಿಂದ 250 ಕಿ.ಮೀ ದೂರದಲ್ಲಿದೆ ಮತ್ತು ದೊಡ್ಡ ದೋಣಿಗಳನ್ನು ಅಂತರರಾಷ್ಟ್ರೀಯ ಗಡಿಗಳಿಂದ ದೂರವಿರಲು ತಿಳಿಸಲಾಗಿದೆ" ಎಂದು ಕಾರವಾರದ ಮೀನುಗಾರಿಕಾ ಟ್ರಾಲರ್ ನಿರ್ವಾಹಕರು ಹೇಳಿದರು.

File Image
ಕಾರವಾರ ನೌಕಾ ನೆಲೆಯ ಸೂಕ್ಷ್ಮ ಮಾಹಿತಿ ಪಾಕಿಸ್ತಾನಕ್ಕೆ ಸೋರಿಕೆ: ಇಬ್ಬರನ್ನು ಬಂಧಿಸಿದ NIA

"ಹೆಚ್ಚಿನ ಸಮಯ ಮೀನುಗಾರರು ಯಾವುದೇ ಅನುಮಾನಾಸ್ಪದ ದೋಣಿಗಳ ಬಗ್ಗೆ ಎಚ್ಚರವಾಗಿರುತ್ತಾರೆ. ಹೆಚ್ಚಿನ ಮೀನುಗಾರಿಕಾ ದೋಣಿಗಳು ತಮ್ಮ ರಾಜ್ಯಗಳನ್ನು ಪ್ರತಿನಿಧಿಸುವ ಪ್ರತ್ಯೇಕ ಬಣ್ಣಗಳನ್ನು ಹೊಂದಿರುತ್ತವೆ. ಅಂತಹ ಯಾವುದೇ ಚಲನೆ ದಾಖಲಾಗಿದ್ದರೆ, ನಾವು ಕರಾವಳಿ ಭದ್ರತಾ ಪಡೆಗೆ ತಿಳಿಸುತ್ತೇವೆ" ಎಂದು ಟ್ರಾಲರ್ ಮಾಲೀಕರು ಹೇಳಿದರು.

ಭಾರತೀಯ ನೌಕಾಪಡೆಯು ಈಗಾಗಲೇ ನೌಕಾ ನೆಲೆಯ ಉದ್ದಕ್ಕೂ ಭದ್ರತೆಯನ್ನು ಹೆಚ್ಚಿಸಿದೆ. ಭದ್ರತೆಯ ಭಾಗವಾಗಿ ಹೆಚ್ಚುವರಿ ಚೆಕ್‌ಪೋಸ್ಟ್‌ಗಳು ಮತ್ತು ಗಸ್ತು ತಿರುಗುವಿಕೆ ನಡೆಸಲಾಗುತ್ತಿದೆ.

"ಸಾಮಾನ್ಯವಾಗಿ ಸಮುದ್ರದಲ್ಲಿ ಯುದ್ಧ ವ್ಯಾಯಾಮಗಳು ನಡೆಯುವಾಗ ನೆಲೆಯನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗುತ್ತದೆ. ಇಲ್ಲಿಯವರೆಗೆ ನೌಕಾಪಡೆ ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ನಿರ್ದಿಷ್ಟ ಮಾಹಿತಿ ಬಂದಿಲ್ಲ, ಆದರೆ ಜಿಲ್ಲಾ ಕೇಂದ್ರಗಳು ನೌಕಾ ನೆಲೆಯನ್ನು ಹೊಂದಿರುವುದರಿಂದ ಹೈ ಅಲರ್ಟ್‌ನಲ್ಲಿವೆ" ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com