ಅಂಕೋಲಾದ ಎರಡು 'Belgian Malinois' ಶ್ವಾನಗಳು ಬೆಂಗಳೂರು CRPF ಶಿಬಿರಕ್ಕೆ ಸೇರ್ಪಡೆ!

ಅಂಕೋಲಾದ ಈ ನಾಯಿಮರಿಗಳನ್ನು ಬೆಂಗಳೂರು ಸಮೀಪದ ಕನಕಪುರ ರಸ್ತೆಯ ಕಗ್ಗಲಿಪುರ ಬಳಿಯ ತರಲುವಿನಲ್ಲಿರುವ ನಾಯಿ ಸಾಕಣೆ ಮತ್ತು ತರಬೇತಿ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ.
CRPF team with two puppies at Bavikere
ಬೆಲ್ಜಿಯನ್ ಮಾಲಿನೋಯಿಸ್ ನಾಯಿಮರಿಗಳು
Updated on

ಬಾವಿಕೆರೆ(ಉತ್ತರ ಕನ್ನಡ): ಅಂಕೋಲಾ ತಾಲ್ಲೂಕಿನ ಎರಡು ಬೆಲ್ಜಿಯನ್ ಮಾಲಿನೋಯಿಸ್ ನಾಯಿಗಳು ಬೆಂಗಳೂರಿನ ಸಿಆರ್‌ಪಿಎಫ್ ಶಿಬಿರಕ್ಕೆ ಸೇರಲಿದ್ದು ಅಲ್ಲಿ ಅವುಗಳಿಗೆ ತರಬೇತಿ ನೀಡಿ ಕಾರ್ಯಾಚರಣೆಗಳಲ್ಲಿ ಬಳಸಿಕೊಳ್ಳಲಾಗುತ್ತದೆ.

ಈ ಎರಡು ನಾಯಿಗಳನ್ನು ಅಂಕೋಲಾದ ರಾಘವೇಂದ್ರ ಭಟ್ ದೇಶಕ್ಕೆ ಸೇವೆ ಸಲ್ಲಿಸಲು ಉಡುಗೊರೆಯಾಗಿ ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಜಿಲ್ಲಾ ಅಂಗವೈಕಲ್ಯ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಭಟ್, ಭಾರತೀಯ ತಳಿಗಳಾದ ಬುಲ್ಲಿ ಕುಟ್ಟಾ (ಪಿಟ್ ಬುಲ್‌ಗೆ ಹೋಲುವ ಭಾರತೀಯ ಮಾಸ್ಟಿಫ್), ಮುಧೋಳ ಹೌಂಡ್‌, ಜರ್ಮನ್ ಶೆಫರ್ಡ್ ಮತ್ತು ಬಾಕ್ಸರ್ ಸೇರಿದಂತೆ ಹಲವಾರು ಅಪರೂಪದ ತಳಿಗಳ ನಾಯಿಗಳನ್ನು ಸಾಕಿದ್ದಾರೆ.

ಕೆಲವು ವರ್ಷಗಳ ಹಿಂದೆ, ಅಂಕೋಲಾದ ಬಾವಿಕೆರೆಯ ಬೆಲ್ಜಿಯನ್ ಮಾಲಿನೋಯಿಸ್ ನಾಯಿಗಳು ಅಸ್ಸಾಂ ರೈಫಲ್ಸ್‌ನ ಅರೆಸೈನಿಕ ಪಡೆಗಳು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಗಡಿಗಳಲ್ಲಿ ಗಸ್ತು ತಿರುಗಲು ಹುಡುಕಿದಾಗ ಇತಿಹಾಸ ಸೃಷ್ಟಿಸಿದವು. ಅಂಕೋಲಾದ ಈ ನಾಯಿಮರಿಗಳನ್ನು ಬೆಂಗಳೂರು ಸಮೀಪದ ಕನಕಪುರ ರಸ್ತೆಯ ಕಗ್ಗಲಿಪುರ ಬಳಿಯ ತರಲುವಿನಲ್ಲಿರುವ ನಾಯಿ ಸಾಕಣೆ ಮತ್ತು ತರಬೇತಿ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ ಮತ್ತು ಕರ್ತವ್ಯಕ್ಕೆ ನಿಯೋಜಿಸುವ ಮೊದಲು 40 ವಾರಗಳ ಕಾಲ ತರಬೇತಿ ನೀಡಲಾಗುತ್ತದೆ.

ಬಾವಿಕೆರೆ ಗ್ರಾಮದಲ್ಲಿ ಭಟ್ ಸಾಕಿರುವ ನಾಯಿಗಳನ್ನು ಮಂಗಳವಾರ ಸಿಆರ್‌ಪಿಎಫ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು. ನಾಯಿಗಳನ್ನು ಪರೀಕ್ಷಿಸಲು ಇಬ್ಬರು ಅಧಿಕಾರಿಗಳು ಬಂದಿದ್ದರು, ಈ ನಾಯಿರಿಗಳು ತಮ್ಮ ಅವಶ್ಯಕತೆಗಳನ್ನು ಪೂರೈಸುತ್ತವೆಯೇ ಎಂದು ನಿರ್ಣಯಿಸಲು, ಅವುಗಳ ಜಾಗರೂಕತೆ, ಗುಣಮಟ್ಟ, ಎತ್ತರ ಮತ್ತು ತೂಕ ಮತ್ತು ಪ್ರತಿಕ್ರಿಯೆಯನ್ನು ಪರೀಕ್ಷಿಸಿದರು," ಎಂದು ರಾಘವೇಂದ್ರ ಭಟ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

CRPF team with two puppies at Bavikere
ಎಸ್‌ಪಿಜಿ ಭದ್ರತಾ ಪಡೆಗೆ ಈಗ ಮುಧೋಳ ನಾಯಿ ಸೇರ್ಪಡೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com