ಸುಹಾಸ್ ಶೆಟ್ಟಿ ಹತ್ಯೆ ಹಿಂದೆ PFI ಕೈವಾಡ: VHP ಆರೋಪ

ಪಿಎಫ್‌ಐ ನಡೆಸಿದ ಕೊಲೆಗಳ ಕಾರ್ಯವೈಖರಿ ಹಾಗೂ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ವೇಳೆ ನಡೆದಿರುವ ಕಾರ್ಯವೈಖರಿಯಲ್ಲಿ ಬಹಳಷ್ಟು ಹೋಲಿಕೆಗಳಿವೆ.
VHP and HJV leaders during a press conference in Mangaluru.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಎಚ್‌ಪಿ ಮತ್ತು ಎಚ್‌ಜೆವಿ ನಾಯಕರು.
Updated on

ಮಂಗಳೂರು: ಹಿಂದೂ ಕಾರ್ಯಕರ್ತ ಮತ್ತು ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ಹಿಂದೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕೈವಾಡವಿದ್ದು, ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕೆಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಹಿಂದೂ ಜಾಗರಣ ವೇದಿಕೆ (ಎಚ್‌ಜೆವಿ) ಸೋಮವಾರ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ, ಎಚ್‌ಜೆವಿ ಪ್ರಾಂತ ಪ್ರಮುಖ ಕೆಟಿ ಉಲ್ಲಾಸ್ ಮತ್ತು ವಿಎಚ್‌ಪಿ ನಾಯಕ ಶರಣ್ ಪಂಪ್‌ವೆಲ್ ಅವರು, ಪಿಎಫ್‌ಐ ನಡೆಸಿದ ಕೊಲೆಗಳ ಕಾರ್ಯವೈಖರಿ ಹಾಗೂ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ವೇಳೆ ನಡೆದಿರುವ ಕಾರ್ಯವೈಖರಿಯಲ್ಲಿ ಬಹಳಷ್ಟು ಹೋಲಿಕೆಗಳಿವೆ. ಮೊಹಮ್ಮದ್ ಫಾಜಿಲ್ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಸಲುವಾಗಿಯೇ ಸುಹಾಸ್ ಹತ್ಯೆ ಮಾಡಲಾಗಿದೆ ಎಂದು ತೋರುತ್ತಿಲ್ಲ ಎಂದು ಹೇಳಿದ್ದಾರೆ.

ಕೆಲ ದುಷ್ಟಶಕ್ತಿಗಳು ಸುಹಾಸ್ ಕೊಲೆಗೆ 50 ಲಕ್ಷ ರೂ. ಸಂಗ್ರಹಿಸಿರುವ ಮಾಹಿತಿಯಿದೆ. ಕುಡುಪುವಿನಲ್ಲಿ ಅಶ್ರಫ್ ಎಂಬಾತನ ಕೊಲೆ ನಡೆದ ಮೂರು ದಿನದಲ್ಲಿ ಪಿಎಫ್‌ಐ ಮಾದರಿ ಯಲ್ಲಿ ಈ ಕೊಲೆ ನಡೆಸಲಾಗಿದೆ. ಕೊಲೆ ನಡೆಸಿದ ಬಳಿಕ ಆರೋಪಿಗಳು ಸ್ಥಳದಿಂದ ತೆರಳಲು ಯಾವುದೇ ಆತುರ ಇರಲಿಲ್ಲ. ಸುಹಾಸ್ ಸಾವಿನ ಬಗ್ಗೆ ಖಾತ್ರಿಯಾದ ಬಳಿಕ ಆರೋಪಿಗಳು ಆರಾಮವಾಗಿ ಸ್ಥಳದಿಂದ ತೆರಳಿದ್ದಾರೆ. ಸ್ಥಳೀಯರ ಸಹಕಾರದಿಂದ ಈ ಹತ್ಯೆ ನಡೆದಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಬಜ್ಪೆ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾನ್‌ಸ್ಟೆಬಲ್ ರಶೀದ್ ಆರೋಪಿಗಳಿಗೆ ಸುಹಾಸ್ ಶೆಟ್ಟಿ ಚಲನವಲನಗಳ ಬಗ್ಗೆ ಮಾಹಿತಿ ನೀಡಿರುವ ಶಂಕೆಗಳು ವ್ಯಕ್ತವಾಗಿದೆ. ಸುಹಾಸ್'ಗೆ ಪದೇ ಪದೇ ಫೋನ್ ಮಾಡುತ್ತಿದ್ದ ರಶೀದ್ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಸುಹಾಸ್ ಶೆಟ್ಟಿ ಸ್ನೇಹಿತರು ಹಾಗೂ ತಾಯಿ ಕೂಡ ಹೇಳಿದ್ದಾರೆ. ಹತ್ಯೆಗೂ ಮೂರು ದಿನಗಳ ಹಿಂದಷ್ಟೇ ಎಸಿಪಿ ಸುಹಾಸ್ ಶೆಟ್ಟಿಗೆ ವಾಹನದಲ್ಲಿ ಶಸ್ತ್ರಾಸ್ತ್ರಗಳ ಕೊಂಡೊಯ್ಯದಂತೆ ಸೂಚಿಸಿದ್ದರು. ಇದಾದ ಬಳಿಕವೇ ದಾಳಿ ನಡೆದಿದೆ. ದಾಳಿಕೋರರಿಗೆ ಸುಹಾಸ್ ಶೆಟ್ಟಿ ನಿಶಸ್ತ್ರಧಾರಿ ಎಂಬುದು ಹೇಗೆ ತಿಳಿದಿತ್ತು? ರಶೀದ್ ದಾಳಿಕೋರರಿಗೆ ಮಾಹಿತಿ ನೀಡಿರಬಹುದು ಎಂಬ ಅನುಮಾನಗಳಿವೆ.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಇತರ ಆರೋಪಿಗಳಾದ ಕಳಸದ ರಜಿತ್ ಮತ್ತು ನಾಗರಾಜ್ ಯಾವುದೇ ಕ್ರಿಮಿನಲ್ ಹಿನ್ನೆಲೆಗಳನ್ನು ಹೊಂದಿಲ್ಲ. ಅವರು ಹಿಂದೂಗಳಾಗಿರುವುದರಿಂದ ಉದ್ದೇಶಪೂರ್ವಕವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಪಿಎಫ್‌ಐ ನಿಷೇಧದ ನಂತರ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆಗಳ ನೀಡಲು ನಿರ್ಧರಿಸಿದ್ದಾರೆಂದು ಹೇಳಿದ್ದಾರೆ.

ರಾಜ್ಯ ಪೊಲೀಸರು ಪ್ರಕರಣವನ್ನು ತನಿಖೆ ಮಾಡಲು ಸಾಕಷ್ಟು ಸಮರ್ಥರಾಗಿದ್ದಾರೆ ಎಂಬ ಗೃಹ ಸಚಿವ ಜಿ ಪರಮೇಶ್ವರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯ ಪೊಲೀಸರ ದಕ್ಷತೆಯ ಬಗ್ಗೆ ಅವರಿಗೆ ಯಾವುದೇ ಸಂದೇಹವಿಲ್ಲ, ಆದರೆ ಪ್ರಸ್ತುತ ಸರ್ಕಾರದ ಅಡಿಯಲ್ಲಿ ನ್ಯಾಯಯುತ ತನಿಖೆ ನಡೆಯುವ ನಂಬಿಕೆಯಿಲ್ಲ ಎಂದು ಹೇಳಿದರು

VHP and HJV leaders during a press conference in Mangaluru.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಬಾಹ್ಯ ಶಕ್ತಿಗಳ ಕೈವಾಡ: NIA ತನಿಖೆಗೆ ಎಸ್‌ಆರ್ ವಿಶ್ವನಾಥ್ ಒತ್ತಾಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com