ನಿಮ್ಮ ಸೆ*** ವಿಡಿಯೋ ಇದೆ: ಆನಂದ ಗುರೂಜಿ ಕಾರು ಅಡ್ಡಗಟ್ಟಿ ಹಣಕ್ಕಾಗಿ ಬ್ಲ್ಯಾಕ್ ಮೇಲ್; ಪ್ರಕರಣ ದಾಖಲು!

ಕೋರ್ಟ್​ನಿಂದ ತಡೆಯಾಜ್ಞೆ ತಂದರೂ ನಿಮ್ಮ ಸೆ... ವಿಡಿಯೋ ಇದೆ ಎಂದು ಪ್ರತಿನಿತ್ಯ ಹಣಕ್ಕಾಗಿ ಆರೋಪಿಗಳು ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾರೆ ಎಂದು ಆನಂದ್ ಗುರೂಜಿ ಆರೋಪಿಸಿದ್ದಾರೆ.
ಆನಂದ ಗುರೂಜಿ, ದಿವ್ಯಾ ವಸಂತ
ಆನಂದ ಗುರೂಜಿ, ದಿವ್ಯಾ ವಸಂತ
Updated on

ಬೆಂಗಳೂರು: ರಾಜ್ಯದಲ್ಲಿ ಹಣಕ್ಕಾಗಿ ಬ್ಲ್ಯಾಕ್​ಮೇಲ್ ಹಾಗೂ ಜೀವ ಬೆದರಿಕೆ ಹಾಕುತ್ತಿರುವ ಪ್ರಕರಣ ಹೆಚ್ಚಾಗುತ್ತಿವೆ. ಇದೀಗ ಪ್ರಖ್ಯಾತ ಆನಂದ ಗುರೂಜಿ ಕಾರು ಅಡ್ಡಿಗಟ್ಟಿ ಹಣಕ್ಕೆ ಬ್ಲ್ಯಾಕ್​ಮೇಲ್ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆಂಗಳೂರಿನ ಚಿಕ್ಕಜಾಲ ಠಾಣೆಯಲ್ಲಿ ಆನಂದ ಗುರೂಜಿ ದೂರು ದಾಖಲಿಸಿದ್ದಾರೆ. ಈ ದೂರಿನ ಸಂಬಂಧ ಪೊಲೀಸರು ಕೃಷ್ಣಮೂರ್ತಿ(A1) ಹಾಗೂ ದಿವ್ಯಾ ವಸಂತ (A2) ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕೋರ್ಟ್​ನಿಂದ ತಡೆಯಾಜ್ಞೆ ತಂದರೂ ನಿಮ್ಮ ಸೆ... ವಿಡಿಯೋ ಇದೆ ಎಂದು ಪ್ರತಿನಿತ್ಯ ಹಣಕ್ಕಾಗಿ ಆರೋಪಿಗಳು ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾರೆ ಎಂದು ಆನಂದ್ ಗುರೂಜಿ ಆರೋಪಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ದುಷ್ಕರ್ಮಿಗಳು ತಮ್ಮ ಕಾರು ಅಡ್ಡಗಟ್ಟಿ ಅಶ್ಲೀಲ ಪದಗಳಿಂದ ನಿಂದನೆ ಮಾಡಿದ್ದಾರೆ ಎಂದು ಆನಂದ್ ಗುರೂಜಿ ದೂರಿನಲ್ಲಿ ಆರೋಪಿಸಿದ್ದಾರೆ. ಸದ್ಯ ಚಿಕ್ಕಜಾಲ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಹಿಂದೆ ಹನಿಟ್ರ್ಯಾಪ್​ ಪ್ರಕರಣದಲ್ಲಿ ದಿವ್ಯಾ ವಸಂತ ಬಂಧನವಾಗಿದ್ದಳು. ಇಂದಿರಾ ನಗರದ ಬ್ಯೂಟಿ ಪಾರ್ಲರ್ ನಲ್ಲಿ ಸ್ಟಿಂಗ್​​ ಆಪರೇಷನ್​ ನಡೆಸಿ ಬಳಿಕ ಹಣಕ್ಕಾಗಿ ಬ್ಲ್ಯಾಕ್​ ಮೇಲ್​ ಮಾಡಿದ್ದಳು. ಈ ಸಂಬಂಧ ಪಾರ್ಲರ್​ ಮಾಲೀಕರು ನೀಡಿದ್ದ ಹನಿಟ್ರ್ಯಾಪ್ ದೂರಿನ ಮೇರೆಗೆ ದಿವ್ಯಾ ವಸಂತಳನ್ನು ಪೊಲೀಸರು ಕೇರಳದಲ್ಲಿ ಬಂಧಿಸಿದ್ದರು.

ಆನಂದ ಗುರೂಜಿ, ದಿವ್ಯಾ ವಸಂತ
ಬೆಳಗಾವಿ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಇಬ್ಬರು ಅಪ್ರಾಪ್ತರ ಬಂಧನ

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com