
ಬಾಗಲಕೋಟೆ: 21 ವರ್ಷದ ಯುವಕನೊಬ್ಬ ಕ್ಷುಲ್ಲಕ ಕಾರಣಕ್ಕೆ ಶಾಲಾ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಹಲ್ಲೆಗೊಳಗಾದ ಶಿಕ್ಷಕ ರಾಮಣ್ಣ(36) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ರಾಮಣ್ಣ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ, ಆರೋಪಿ ಪವನ್ ಕುಮಾರ್ ಪಕ್ಕದಲ್ಲಿ ಕ್ರಿಕೆಟ್ ಆಡುತ್ತಿದ್ದರು, ಈ ವೇಳೆ ಚೆಂಡು ಶಿಕ್ಷಕನಿಗೆ ತಗುಲಿದೆ. ನಂತರ ಚೆಂಡು ಕೇಳಿಕೊಂಡು ಬಂದ ಕುಮಾರ್ ಗೆ ನಿನ್ನೆ ಪೋಷಕರನ್ನು ಕರೆದುಕೊಂಡು ಬರುವಂತೆ ರಾಮಣ್ಣ ಹೇಳಿದ್ದಾರೆ. ಆದರೆ ಕುಮಾರ್ ತನ್ನ ಪೋಷಕರನ್ನು ಕರೆದುಕೊಂಡು ಬಂದಿಲ್ಲ.
ನಂತರ ರಾಮಣ್ಣ ಅವರು, ಕುಮಾರ್ ಅವರ ಕುಟುಂಬಕ್ಕೆ ಈ ಬಗ್ಗೆ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಕುಮಾರ್, ಮೇ 13 ರಂದು ಮಧ್ಯಾಹ್ನ 2.30 ಕ್ಕೆ ರಾಮಣ್ಣ ತನ್ನ ಶಾಲೆಯ ಕಚೇರಿ ಕೋಣೆಯಲ್ಲಿದ್ದಾಗ, ಅಲ್ಲಿಗೆ ಹೋಗಿ ಅವಹೇಳನಕಾರಿಯಾಗಿ ನಿಂದಿಸಿದ್ದಾನೆ. ಅಲ್ಲದೆ ಶಿಕ್ಷಕನ ಮೇಲೆ ಮುಷ್ಟಿಯಿಂದ ಹೊಡೆದಿದ್ದಾನೆ ಮತ್ತು ಅದು ರಕ್ತಸ್ರಾವಕ್ಕೆ ಕಾರಣವಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಈ ಸಂಬಂಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು, ಕುಮಾರ್ ನನ್ನು ಬಂಧಿಸಿದ್ದಾರೆ.
Advertisement