ಬೆಳಗಾವಿ: ಈದ್ಗಾಕ್ಕೆ ಹಾನಿ ಆರೋಪ, ನಾಲ್ವರ ಬಂಧನ; ಕುರಾನ್ ಗೆ ಬೆಂಕಿ, ಇನ್ಸ್‌ಪೆಕ್ಟರ್‌ ಅಮಾನತು!

ಆರೋಪಿಗಳು ಈದ್ಗಾದ ನಾಲ್ಕು ಗುಮ್ಮಟಗಳನ್ನು ಧ್ವಂಸಗೈದಿದ್ದಾರೆ ಎಂದು ಆರೋಪಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಳಗಾವಿ: ಸಂತಿ ಬಸ್ತವಾಡ ಗ್ರಾಮದಲ್ಲಿ ಈದ್ಗಾವನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಲಕ್ಷ್ಮಣ ಯಲ್ಲಪ್ಪ ಉಚವಾಡೆ (30), ಮುತ್ತಪ್ಪ ಭರ್ಮ ಉಚವಾಡೆ (26), ಲಕ್ಷ್ಮಣ ನಾಗಪ್ಪ ನಾಯಕ್ (30), ಮತ್ತು ಶಿವರಾಜ್ ಯಲ್ಲಪ್ಪ ಗುಡ್ಲಿ (29) ಎಂದು ಗುರುತಿಸಲಾಗಿದೆ. ಏಪ್ರಿಲ್‌ನಲ್ಲಿ ಈ ಘಟನೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಈದ್ಗಾದ ನಾಲ್ಕು ಗುಮ್ಮಟಗಳನ್ನು ಧ್ವಂಸಗೈದಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲವು ಸಮಾಧಿಗಳು ಮತ್ತು ನಾಮಫಲಕಗಳನ್ನು ಹಾನಿಗೊಳಿಸಿದ ಪ್ರಕರಣದಲ್ಲಿಯೂ ಅವರು ಭಾಗಿಯಾಗಿದ್ದಾರೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಇಯಾಡಾ ಮಾರ್ಟಿನ್ ಮಾರ್ಬನಿಯಾಂಗ್ ತಿಳಿಸಿದ್ದಾರೆ. ಆರೋಪಿಗಳು ಅಪರಾಧವನ್ನು ಒಪ್ಪಿಕೊಂಡ ನಂತರ ಮೇ 15ರಂದು ಅವರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ನಮಗೆ ಪುರಾವೆಗಳು ಸಿಕ್ಕಿವೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು.

ಏತನ್ಮಧ್ಯೆ, ಕುರಾನ್ ಸೇರಿದಂತೆ ಧಾರ್ಮಿಕ ಪುಸ್ತಕಗಳನ್ನು ಸುಟ್ಟುಹಾಕಿದವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ ಇಂದು ಸಹ ಮುಸ್ಲಿಂ ಸಮುದಾಯದ ಸದಸ್ಯರು ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಗ್ರಹ ಚಿತ್ರ
ಮಂಗಳೂರು: ಸಿಎಂ ಸಿದ್ದರಾಮಯ್ಯಗೆ ಘೇರಾವ್‌ಗೆ ಯತ್ನ; BJP ಯುವ ಮೋರ್ಚಾ ಕಾರ್ಯಕರ್ತರ ಬಂಧನ!

ಮೇ 15ರಂದು ಸಂತಿ ಬಸ್ತವಾಡ ಗ್ರಾಮದ ಹತ್ತಿರದ ಹೊಲದಲ್ಲಿ ಕುರಾನ್ ಸೇರಿದಂತೆ ಮೂರು ಧಾರ್ಮಿಕ ಪುಸ್ತಕಗಳು ಸುಟ್ಟುಹೋಗಿರುವುದು ಕಂಡುಬಂದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com