
ಬೆಂಗಳೂರು: ವೈಟ್ ಫೀಲ್ಡ್ ಗೆ ಸಂಪರ್ಕ ಕಲ್ಪಿಸುವ ಪಟ್ಟಂದೂರು ಅಗ್ರಹಾರದ ಕೆಲವು ರಸ್ತೆಗಳಲ್ಲಿ ಮೇ.18 ರಿಂದ 4 ದಿನಗಳ ಕಾಲ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಮೇ.18 ದಿಂದ ನಾಲ್ಕು ದಿನಗಳ ಕಾಲ ಈ ಮಾರ್ಗದಲ್ಲಿ ದೀಪೋತ್ಸವ ಮತ್ತು ದೇವರ ಪಲ್ಲಕ್ಕಿಗಳ ಉತ್ಸವಗಳ ಕಾರ್ಯಕ್ರಮ ನಡೆಯಲಿದೆ. ವಾಹನ ಸಂಚಾರವನ್ನು ನಿರ್ಬಂಧಿಸಲಾಗಿರುವ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಪರ್ಯಾಯ ಮಾರ್ಗವನ್ನು ಬೆಂಗಳೂರು ಸಂಚಾರಿ ಪೊಲೀಸರು ಸೂಚಿಸಿದ್ದಾರೆ.
ಮೇ. 18 ಮದ್ಯಾಹ್ನ 02.00 ಗಂಟೆಯಿಂದ ಬುಧವಾರ (ಮೇ. 21) ಸಂಜೆ 6 ಗಂಟೆಯವರೆಗೆ ಪಟ್ಟಂದೂರು ಅಗ್ರಹಾರ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ
ಐಟಿಪಿಎಲ್ ಕಡೆಯಿಂದ ಪಟ್ಟಂದೂರು ಅಗ್ರಹಾರ ಮಾರ್ಗವಾಗಿ ನಲ್ಲೂರಹಳ್ಳಿ ವೈಟ್ ಫೀಲ್ಡ್ ಕಡೆಗೆ ಸಂಚರಿಸುವ ವಾಹನಗಳು ಸತ್ಯಸಾಯಿ ಆಸ್ಪತ್ರೆ ವೈದೇಹಿ ಜಿ.ಇ ಕ್ರಾಸ್ ಮೂಲಕ ಸಾಗಬಹುದು.
ಇಮ್ಮಡಿಹಳ್ಳಿ ವೈಟ್ಫೀಲ್ಡ್ ಕಡೆಯಿಂದ ಪಟ್ಟಂದೂರು ಅಗ್ರಹಾರ ಮಾರ್ಗವಾಗಿ ಐಟಿಪಿಎಲ್ ಮತ್ತು ನಲ್ಲೂರಹಳ್ಳಿ ಕಡೆಗೆ ಸಂಚರಿಸುವ ಲಘು ವಾಹನಗಳು ಇ.ಸಿ.ಸಿ ರಸ್ತೆ, ಹೋಫ್ ಫಾರಂ ರಸ್ತೆ ಮೂಲಕ ಐಟಿಪಿಎಲ್ ಕಡೆಗೆ ಸಂಚರಿಸಬಹುದಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೆ.ಆರ್. ಪುರ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಅಸ್ತಿತ್ವದಲ್ಲಿರುವ ಹೆಬ್ಬಾಳ ಮೇಲೇತುವೆಗೆ ಹೆಚ್ಚುವರಿ ಬ್ಯಾಂಪ್ಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಕಾಮಗಾರಿಯ ಭಾಗವಾಗಿ, ರೈಲ್ವೆ ಹಳಿಗಳ ಮೇಲೆ 33.5 ಮೀ ಉದ್ದದ 07 ಉಕ್ಕಿನ ಗರ್ಡ್ಗಳನ್ನು ಅಳವಡಿಸುವ ಕಾಮಗಾರಿ ಮೇ.17 ದಿಂದ ಬುಧವಾರ (ಮೇ.21) ವರೆಗೆ ರಾತ್ರಿ 12:00 ರಿಂದ ಬೆಳಗಿನ ಜಾವ 03:00 ರವರೆಗೆ ನಡೆಯುತ್ತದೆ. ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಕಾಮಗಾರಿ ನಡೆಯುವ ಸಮಯದಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಸಂಚಾರ ಮಾರ್ಪಾಡು ಮಾಡಿದ್ದಾರೆ.
ಪರ್ಯಾಯ ಮಾರ್ಗ
ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಖ್ರಿ ವೃತ್ತದ ಕಡೆಗೆ ಚಲಿಸುವ ವಾಹನಗಳು ಎಸ್ಟ್ರೀಮ್ ಮಾಲ್‌ನಲ್ಲಿರುವ ಸರ್ವಿಸ್ ರಸ್ತೆಯನ್ನು ಪ್ರವೇಶಿಸಿ ಹೆಬ್ಬಾಳ ವೃತ್ತದಲ್ಲಿ ಹೊರ ವರ್ತುಲಕ್ಕೆ ಬಲ ತಿರುವು ಪಡೆದು ತುಮಕೂರು ಮಾರ್ಗವಾಗಿ ಚಲಿಸಿ, ಕುವೆಂಪು ವೃತ್ತದಲ್ಲಿ ಎಡ ತಿರುವು ಪಡೆದು ನ್ಯೂ ಬಿಇಎಲ್ ರಸ್ತೆ ಮೂಲಕ ಮೇಖ್ರಿ ವೃತ್ತವನ್ನು ತಲುಪಬಹುದಾಗಿದೆ.
Advertisement