
ಬೆಂಗಳೂರು: ಇತ್ತೀಚೆಗೆ ನಿರ್ಮಿಸಲಾದ ರಸ್ತೆಗಳು ಮತ್ತು ಚರಂಡಿಗಳನ್ನು ಕಳೆದ ಎರಡು ದಿನಗಳಿಂದ ಬಿಬಿಎಂಪಿ ಅಗೆಯುತ್ತಿರುವುದರಿಂದ ಆರ್ ಆರ್ ನಗರ ನಿವಾಸಿಗಳು ಅಸಮಾಧಾನಗೊಂಡಿದ್ದಾರೆ.
ಗಿರಿಧಾಮ ಲೇಔಟ್‌ನಲ್ಲಿ ಎಂಟು ತಿಂಗಳ ಹಿಂದೆ ಚರಂಡಿಗಳು ಮತ್ತು ರಸ್ತೆಗಳ ಡಾಂಬರೀಕರಣ ಕಾಮಗಾರಿ ನಡೆದಿತ್ತು. ಈಗ ಗುಣಮಟ್ಟದ ಪರಿಶೀಲನೆಯ ನೆಪದಲ್ಲಿ, ಚರಂಡಿಗಳನ್ನು ಕತ್ತರಿಸಿ, ಸ್ಲ್ಯಾಬ್‌ಗಳನ್ನು ಸ್ಥಳಾಂತರಿಸಿ, ಶುಕ್ರವಾರ ರಸ್ತೆಗಳನ್ನು ಅಗೆಯಲಾಗಿದೆ ಎಂದು ಆರ್ ಆರ್ ನಗರದ ಗಿರಿಧಾಮ ಲೇಔಟ್‌ನ ನಿವಾಸಿಯೊಬ್ಬರು ಹೇಳಿದರು. ಶನಿವಾರ, ಆರ್ ಆರ್ ನಗರದ ಫಾರೆಸ್ಟ್ ಲೇಔಟ್‌ನಲ್ಲಿ ಡಾಂಬರೀಕರಣಗೊಂಡ ರಸ್ತೆಗಳನ್ನು ಸಹ ಅಗೆಯಲಾಗಿದೆ.
ಗಿರಿಧಾಮ ಲೇಔಟ್ ಮತ್ತು ಫಾರೆಸ್ಟ್ ಲೇಔಟ್‌ನಲ್ಲಿನ ಕಾಮಗಾರಿಗಳನ್ನು ಎರಡು ಪ್ಯಾಕೇಜ್‌ಗಳಲ್ಲಿ ಕಾರ್ಯಗತಗೊಳಿಸಲಾಯಿತು. ಕಾಮಗಾರಿಗಳಿಗೆ ಬಿಬಿಎಂಪಿಗೆ ಸುಮಾರು 31 ಕೋಟಿ ರೂ. ಖರ್ಚು ಮಾಡಿದೆ ಎಂದು ಆರ್ ಆರ್ ನಗರದ ನಿವಾಸಿಯೊಬ್ಬರು ಹೇಳಿದರು. ಆರ್ ಆರ್ ನಗರದ ಶಾಸಕ ಮುನಿರತ್ನ ನಾಯ್ಡು ಅವರು ಈ ಪ್ರದೇಶದ ಚರಂಡಿಗಳು ಮತ್ತು ರಸ್ತೆಗಳ ಗುಣಮಟ್ಟದ ಪರಿಶೀಲನೆ ನಡೆಸುವಂತೆ ಬಿಬಿಎಂಪಿಗೆ ಪತ್ರ ಬರೆದಿದ್ದರು ಎಂದು ಆರ್ ಆರ್ ನಗರ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಈ ಬೆಳವಣಿಗೆಯಲ್ಲಿ ತಮ್ಮದಾಗಲಿ ಅಥವಾ ಅವರ ಬೆಂಬಲಿಗರಾಗಲಿ ಯಾವುದೇ ಪಾತ್ರವಿಲ್ಲ ಎಂದು ಅವರು ಮುನಿರತ್ನ ಸ್ಪಷ್ಟ ಪಡಿಸಿದ್ದಾರೆ. ಬೆಂಗಳೂರು ನಗರ ಅಭಿವೃದ್ಧಿಯ ಉಸ್ತುವಾರಿ ವಹಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಮುನಿರತ್ನಅವರು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಕೆಲಸವನ್ನು ಪುನಃ ಮಾಡುವುದರಿಂದ ಹಣ ವ್ಯರ್ಥವಾಗುತ್ತಿದೆ. ಆರ್.ಆರ್. ನಗರ ನಿವಾಸಿಗಳು ಏಕೆ ಕಷ್ಟಪಡಬೇಕು?" ಎಂದು ನಿವಾಸಿಯೊಬ್ಬರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
Advertisement