ಮಾಗಡಿ: ವೈಜಿಗುಡ್ಡ ಡ್ಯಾಮ್‌ನಲ್ಲಿ ಮುಳುಗಿ ಬೆಂಗಳೂರಿನ ಮೂವರು ಯುವತಿಯರ ಸಾವು!

ಏಳು ಯುವತಿಯರ ತಂಡ ಜಲಾಶಯ ವೀಕ್ಷಣೆಗೆಂದು ತೆರಳಿತ್ತು.
ಮಾಗಡಿ: ವೈಜಿಗುಡ್ಡ ಡ್ಯಾಮ್‌ನಲ್ಲಿ ಮುಳುಗಿ ಬೆಂಗಳೂರಿನ ಮೂವರು ಯುವತಿಯರ ಸಾವು!
Updated on

ಮಾಗಡಿ: ರಾಮನಗರ ಜಿಲ್ಲೆಯ ಮಾಗಡಿ ತಾಲೂತಿನ ವೈಜಿಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವತಿಯರನ್ನು ಬೆಂಗಳೂರು ಮೂಲದ 18 ವರ್ಷದ ರಾಘವಿ, 20 ವರ್ಷದ ಮಧುಮಿತ ಹಾಗೂ 22 ವರ್ಷದ ರಮ್ಯಾ ಎಂದು ಗುರುತಿಸಲಾಗಿದೆ. ಏಳು ಯುವತಿಯರ ತಂಡ ಜಲಾಶಯ ವೀಕ್ಷಣೆಗೆಂದು ತೆರಳಿತ್ತು. ಈ ಪೈಕಿ ಓರ್ವ ಯುವತಿ ನೀರಿಗೆ ಬಿದ್ದಿದ್ದು ಆಕೆಯನ್ನು ರಕ್ಷಿಸಲು ಯುವತಿಯರು ಮುಂದಾಗಿದ್ದಾರೆ. ದುರದೃಷ್ಟವಶಾತ್ ಮೂವರು ಯುವತಿಯರು ನೀರುಪಾಲಾಗಿದ್ದು ನಾಲ್ವರು ಯುವತಿಯರನ್ನು ಯುವಕನೋರ್ವ ರಕ್ಷಿಸಿದ್ದಾನೆ. ಸದ್ಯ ಮೃತ ದೇಹಗಳನ್ನು ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

ಮಾಗಡಿ: ವೈಜಿಗುಡ್ಡ ಡ್ಯಾಮ್‌ನಲ್ಲಿ ಮುಳುಗಿ ಬೆಂಗಳೂರಿನ ಮೂವರು ಯುವತಿಯರ ಸಾವು!
Bengaluru rain: Whitefield ನಲ್ಲಿ ಗೋಡೆ ಕುಸಿದು ಮಹಿಳೆ ಸಾವು!

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com