ಬೆಂಗಳೂರಿಗೆ ಟೈಟಾನಿಕ್ ಬೋಟ್‌ ಇಳಿಸಿದ Uber: ಎಲ್ಲಾಕ್ಕಿಂತ ಇದೇ Faster!?

ಊಬರ್ ಸರ್ವಿಸ್ ಲಿಸ್ಟ್ನಲ್ಲಿ ಈ ಫೋಟೋ ಹಾಕಿದ್ದು, ಒಂದು ನಿಮಿಷದಲ್ಲಿ ವೇಗವಾಗಿ ಟೈಟಾನಿಕ್ ಬೋಟ್ ಸೇವೆ ಸಿಗಲಿದೆ. ಕೇವಲ 149 ರೂ. ಹಣಕ್ಕೆ ಈ ಸೇವೆ ಒದಗಿಸಲಾಗುವುದು ಎಂದು ಪೋಸ್ಟ್ ಮಾಡಿದೆ.
uber company post viral
ಉಬರ್ ಕಂಪನಿ ಪೋಸ್ಟ್
Updated on

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕಳೆದ 2 ದಿನಗಳಲ್ಲಿ ಭಾರೀ ಮಳೆಯಾಗಿದ್ದು, ನಗರದ ರಸ್ತೆಗಳಲ್ಲಿ ನದಿಯಂತೆ ನೀರು ಹರಿಯುತ್ತಿದೆ. ಬೆಂಗಳೂರಿಗೆ ಟೈಟಾನಿಕ್ ಬೋಟ್‌ನ ವ್ಯವಸ್ಥೆಯಿದೆ ಎನ್ನುವ ಫೋಟೋವನ್ನು ಊಬರ್ ಕಂಪನಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.

ಬೆಂಗಳೂರಿನ ಈ ಪರಿಸ್ಥಿತಿಯನ್ನು ಊಬರ್ ಕಂಪನಿ ವ್ಯಂಗ್ಯ ಮಾಡಿ, ಟೈಟಾನಿಕ್‌ಬೋಟ್‌ನ್ನು ರಸ್ತೆಗೆ ಇಳಿಸಿದೆ. ಈ ರೀತಿಯಾಗಿ ಬೆಂಗಳೂರಿನ ತುಂಬೆಲ್ಲಾ ರಸ್ತೆಗಳಲ್ಲಿ ನೀರು ತುಂಬಿಕೊಂಡಿರುವುದನ್ನು ಊಬರ್ ಕಂಪನಿಯು ಲೇವಡಿ ಮಾಡಿದೆ.

ಊಬರ್ ಸರ್ವಿಸ್ ಲಿಸ್ಟ್ನಲ್ಲಿ ಈ ಫೋಟೋ ಹಾಕಿದ್ದು, ಒಂದು ನಿಮಿಷದಲ್ಲಿ ವೇಗವಾಗಿ ಟೈಟಾನಿಕ್ ಬೋಟ್ ಸೇವೆ ಸಿಗಲಿದೆ. ಕೇವಲ 149 ರೂ. ಹಣಕ್ಕೆ ಈ ಸೇವೆ ಒದಗಿಸಲಾಗುವುದು ಎಂದು ಬೆಂಗಳೂರಿನ ಸ್ಥಿತಿಯನ್ನ ಆಡಿಕೊಂಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಕಳೆದ ಎರಡು ದಿನಗಳಲ್ಲಿ ಸುರಿದ ಮಳೆಯಿಂದ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತವಾಗಿದ್ದವು. ಇನ್ನು ಕೆಲವು ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡಿದರು. ಇದೀಗ ಬೆಂಗಳೂರಿನ ಈ ಸ್ಥಿತಿಯನ್ನು ಊಬರ್ ಕಂಪನಿ ಟ್ರೋಲ್ ಮಾಡಿದೆ.

uber company post viral
ಮಳೆ ಹಾನಿ ಪ್ರದೇಶಕ್ಕೆ BJP ನಾಯಕರ ಭೇಟಿ: 'ಬ್ಯಾಡ್‌ ಬೆಂಗಳೂರು' ಪೋಸ್ಟರ್‌ಗಳ ಪ್ರದರ್ಶನ; ಸರ್ಕಾರದ ವಿರುದ್ಧ ಕಿಡಿ

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com