ಮಳೆ ಹಾನಿ ಪ್ರದೇಶಕ್ಕೆ BJP ನಾಯಕರ ಭೇಟಿ: 'ಬ್ಯಾಡ್‌ ಬೆಂಗಳೂರು' ಪೋಸ್ಟರ್‌ಗಳ ಪ್ರದರ್ಶನ; ಸರ್ಕಾರದ ವಿರುದ್ಧ ಕಿಡಿ

ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾದರೂ ಅಭಿವೃದ್ಧಿ ಕಾರ್ಯ ಮಾಡದೆ ಕೇವಲ ಭ್ರಷ್ಟಾಚಾರ, ಹಗರಣ ಮತ್ತು ಬೆಲೆಯೇರಿಕೆಯಲ್ಲೇ ಸಾಧನೆಗೈದ ಕಾಂಗ್ರೆಸ್‌ ವಿರುದ್ಧ ಬ್ಯಾಡ್‌ ಬೆಂಗಳೂರು ಪೋಸ್ಟರ್‌ಗಳನ್ನು ಪ್ರದರ್ಶಿಸಿದರು.
ಮಳೆ ಹಾನಿ ಪ್ರದೇಶದಲ್ಲಿ ಬಿಜೆಪಿ ನಾಯಕರು.
ಮಳೆ ಹಾನಿ ಪ್ರದೇಶದಲ್ಲಿ ಬಿಜೆಪಿ ನಾಯಕರು.
Updated on

ಬೆಂಗಳೂರು: ಬೆಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಬಿಜೆಪಿ ನಾಯಕರುಗಳ ನಿಯೋಗ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕರುಗಳಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕ ಸತೀಶ್‌ರೆಡ್ಡಿ, ಸಿ.ಕೆ. ರಾಮಮೂರ್ತಿ ಸೇರಿದಂತೆ ಬಿಜೆಪಿ ನಾಯಕರುಗಳ ನಿಯೋಗ ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ಭೇಟಿ ನೀಡಿ, ಮಳೆ ಹಾನಿಯನ್ನು ಪರಿಶೀಲಿಸಿತು.

ಬಳಿಕ ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾದರೂ ಅಭಿವೃದ್ಧಿ ಕಾರ್ಯ ಮಾಡದೆ ಕೇವಲ ಭ್ರಷ್ಟಾಚಾರ, ಹಗರಣ ಮತ್ತು ಬೆಲೆಯೇರಿಕೆಯಲ್ಲೇ ಸಾಧನೆಗೈದ ಕಾಂಗ್ರೆಸ್‌ ವಿರುದ್ಧ ಬ್ಯಾಡ್‌ ಬೆಂಗಳೂರು ಪೋಸ್ಟರ್‌ಗಳನ್ನು ಪ್ರದರ್ಶಿಸಿದರು.

ಬೆಂಗಳೂರಿನಲ್ಲಿ ಇಷ್ಟೆಲ್ಲಾ ಮಳೆಯಾದರೂ ಸರ್ಕಾರ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಮಳೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷ್ಯ ತಾಳಿದೆ ಎಂದು ಕಿಡಿಕಾರಿದರು.

ಮಳೆಯಿಂದ ಬೆಂಗಳೂರಿನ ಜನರ ಜೀವನ ನರಕವಾಗಿದೆ. ಸಾಕಷ್ಟು ತೊಂದರೆಯೂ ಆಗಿದೆ. ಇಷ್ಟಾದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಜನರ ನೆರವಿಗೆ ಧಾವಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮುಂದಿನ ದಿನಗಳಲ್ಲೂ ಭಾರೀ ಮಳೆಯಾಗಲಿದೆ. ಇಷ್ಟಾದರೂ ಮಳೆಯನ್ನು ಸಮರ್ಪಕವಾಗಿ ಎದುರಿಸಲು ಅಗತ್ಯ ಸಿದ್ದತೆಯನ್ನೆ ಮಾಡಿಕೊಂಡಿಲ್ಲ. ಸಣ್ಣ ಮಳೆಯಾದರೂ ಬೆಂಗಳೂರಿನ ಜನ ತೊಂದರೆಗೆ ಸಿಲುಕುವಂತಾಗಿದೆ. ಕಳೆದ ೨ ವರ್ಷದಲ್ಲಿ ಸರ್ಕಾರ ಮಾಡಿದ್ದೇನು, ಇದೆಯಾ ಬ್ರ್ಯಾಂಡ್ ಬೆಂಗಳೂರು ಎಂದು ಪ್ರಶ್ನಿಸಿದರು.

ಮಳೆ ಹಾನಿ ಪ್ರದೇಶದಲ್ಲಿ ಬಿಜೆಪಿ ನಾಯಕರು.
ವರುಣನ ಆರ್ಭಟಕ್ಕೆ ಬೆಂಗಳೂರು ತತ್ತರ: ರಾಜ್ಯದಲ್ಲಿ ಮಳೆ ಸಂಬಂಧಿ ಅನಾಹುತಕ್ಕೆ ಐವರು ಬಲಿ

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com