ವರುಣನ ಆರ್ಭಟಕ್ಕೆ ಬೆಂಗಳೂರು ತತ್ತರ: ರಾಜ್ಯದಲ್ಲಿ ಮಳೆ ಸಂಬಂಧಿ ಅನಾಹುತಕ್ಕೆ ಐವರು ಬಲಿ

ಮಳೆಗೆ ಸಂಬಂಧಿಸಿದ ಅನಾಹುತಗಳಿಗೆ ನಗರದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನ ಸಾಯಿ ಲೇಔಟ್ ದ್ವೀಪದಂತಿದೆ. ಇಲ್ಲಿನ ಮನೆಗಳ ನೆಲ ಮಹಡಿ ಅರ್ಧ ಮುಳುಗಿದ್ದು, ಜನರು ಮನೆಗಳಿಂದ ಹೊರಬರಲು ಸಾಧ್ಯವಾಗುತ್ತಿಲ್ಲ.
Residents of Sai Layout in Bengaluru being evacuated on a dingy following heavy rain on Monday. Housekeeping staffer Shashikala
ಬೆಂಗಳೂರಿನ ಸಾಯಿ ಲೇಔಟ್ ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ.
Updated on

ಬೆಂಗಳೂರು: ಕಳೆದ 36 ಗಂಟೆಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆ ಇಂದು ಮಂಗಳವಾರವೂ ಮುಂದುವರಿದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು. ಮೊಣಕಾಲು ಆಳದ ನೀರಿನಲ್ಲಿ ಜನರು ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದ್ದು, ಹಲವೆಡೆ ಸಂಚಾರ ದಟ್ಟಣೆ ಉಂಟಾಗಿದೆ.

ಮಳೆಗೆ ಸಂಬಂಧಿಸಿದ ಅನಾಹುತಗಳಿಗೆ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನ ಸಾಯಿ ಲೇಔಟ್ ದ್ವೀಪದಂತಿದೆ. ಇಲ್ಲಿನ ಮನೆಗಳ ನೆಲ ಮಹಡಿ ಅರ್ಧ ಮುಳುಗಿದ್ದು, ಜನರು ಮನೆಗಳಿಂದ ಹೊರಬರಲು ಸಾಧ್ಯವಾಗುತ್ತಿಲ್ಲ.

ನಿನ್ನೆ ಸುಮಾರು 150 ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸಾಯಿ ಲೇಔಟ್‌ನಲ್ಲಿ ಜನರಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಿತ್ತು.

Residents of Sai Layout in Bengaluru being evacuated on a dingy following heavy rain on Monday. Housekeeping staffer Shashikala
ಇನ್ನೂ 1 ವಾರ ಭಾರೀ ಮಳೆ ಮುನ್ಸೂಚನೆ: ಬೆಂಗಳೂರು ಸೇರಿ 13 ಜಿಲ್ಲೆಗಳಿಗೆ yellow ಅಲರ್ಟ್ ಘೋಷಣೆ

ಸಾಯಿ ಲೇಔಟ್‌ನಲ್ಲಿ ವಾಸಿಸುವ ಜನರ ಸಂಕಷ್ಟಗಳ ಬಗ್ಗೆ ಪಾಲಿಕೆ ಕಾಳಜಿ ವಹಿಸುತ್ತಿಲ್ಲ ಎಂದು ನಿವಾಸಿಗಳು ಆರೋಪಿಸುತ್ತಾರೆ. ನಗರದ ಹೆಣ್ಣೂರಿನಲ್ಲಿರುವ ಅನಾಥಾಶ್ರಮವು ಸಹ ಮಳೆಯ ತೀವ್ರತೆಯನ್ನು ಅನುಭವಿಸಿತು. ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಮತ್ತು ವಿಪತ್ತು ನಿರ್ವಹಣಾ ಪಡೆ ಅನಾಥಾಶ್ರಮದಲ್ಲಿನ ಜನರನ್ನು ರಕ್ಷಿಸಿದ ಕಾರಣ ಸ್ಥಳವು ನೀರಿನಿಂದ ತುಂಬಿತ್ತು.

ಬಹುರಾಷ್ಟ್ರೀಯ ಕಂಪನಿಗಳ ಕಚೇರಿಗಳನ್ನು ಹೊಂದಿರುವ ಮಾನ್ಯತಾ ಟೆಕ್ ಪಾರ್ಕ್ ಬಳಿ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ಸೇರಿದಂತೆ ಹಲವು ಸ್ಥಳಗಳಲ್ಲಿ ಮೊಣಕಾಲುವರೆಗೆ ತುಂಬಿದ ನೀರಿನಲ್ಲಿ ಪ್ರಯಾಣಿಕರು ಕಷ್ಟಪಡಬೇಕಾಯಿತು. ನಗರದ ರಸ್ತೆಗಳಲ್ಲಿ ಹೊಸ ಗುಂಡಿಗಳು ಕಾಣಿಸಿಕೊಂಡು ವಾಹನ ಸವಾರರಿಗೆ ಅಪಾಯವನ್ನುಂಟುಮಾಡಿದವು. ನೀರು ತುಂಬಿದ್ದರಿಂದ ವಾಹನಗಳು ಸಿಲುಕಿಕೊಂಡಿದ್ದರಿಂದ ನಗರದ ಹಲವು ಭಾಗಗಳಲ್ಲಿ ದೀರ್ಘ ಸಂಚಾರ ದಟ್ಟಣೆ ಉಂಟಾಯಿತು.

ನಗರದ ಅಪಾರ್ಟ್‌ಮೆಂಟ್‌ಗೆ ಪ್ರವೇಶಿಸಿದ ಮಳೆನೀರನ್ನು ಹೊರಹಾಕಲು ಪ್ರಯತ್ನಿಸುತ್ತಿದ್ದಾಗ 12 ವರ್ಷದ ಬಾಲಕ ಸೇರಿದಂತೆ ಇಬ್ಬರು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೈಕೋ ಲೇಔಟ್ ಪೊಲೀಸರ ಪ್ರಕಾರ, ಬಿಟಿಎಂ 2 ನೇ ಹಂತದ ಬಳಿಯ ಎನ್ಎಸ್ ಪಾಳ್ಯದ ಮಧುವನ್ ಅಪಾರ್ಟ್‌ಮೆಂಟ್ ನಿವಾಸಿ ಮನಮೋಹನ್ ಕಾಮತ್ (63ವ) ನಿನ್ನೆ ಸಂಜೆ ತನ್ನ ಮನೆಯಿಂದ ನೀರನ್ನು ಹೊರಹಾಕಲು ಪಂಪ್ ಬಳಸಲು ಪ್ರಯತ್ನಿಸಿದ್ದರು.

ಪಂಪ್ ನ್ನು ಸಾಕೆಟ್‌ಗೆ ಸಂಪರ್ಕಿಸಿದಾಗ, ಶಾರ್ಟ್ ಸರ್ಕ್ಯೂಟ್ ಉಂಟಾಗಿ ವಿದ್ಯುತ್ ಆಘಾತಕ್ಕೆ ಒಳಗಾದರು ಎಂದು ಪೊಲೀಸರು ತಿಳಿಸಿದ್ದಾರೆ. ಕಾಮತ್ ಬಳಿಯ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಕೆಲಸ ಮಾಡುತ್ತಿದ್ದ ನೇಪಾಳದ ವ್ಯಕ್ತಿಯ ಮಗ ದಿನೇಶ್ (12ವ) ಕೂಡ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಎರಡೂ ಪ್ರಕರಣಗಳಲ್ಲಿ ಅಸ್ವಾಭಾವಿಕ ಸಾವಿನ ವರದಿಗಳು (ಯುಡಿಆರ್‌ಗಳು) ದಾಖಲಿಸಲಾಗುವುದು ಎಂದು ಸ್ಟೇಷನ್ ಹೌಸ್ ಆಫೀಸರ್ ದೃಢಪಡಿಸಿದರು.

ರಾಜ್ಯದಲ್ಲಿ ಮೃತರ ಸಂಖ್ಯೆ 5ಕ್ಕೇರಿಕೆ

ನಿನ್ನೆ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಂಪನಿಯಲ್ಲಿ ಗುಡಿಸುವಾಗ ಶಶಿಕಲಾ (35) ಅವರ ಮೇಲೆ ಕಾಂಪೌಂಡ್ ಗೋಡೆ ಬಿದ್ದು ಮೃತಪಟ್ಟರು. ರಾಯಚೂರು ಮತ್ತು ಕಾರವಾರದಲ್ಲಿ ಸಿಡಿಲಿಗೆ ಇಬ್ಬರು ಮೃತಪಟ್ಟಿದ್ದಾರೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಸುಮಾರು 30 ಮಿ.ಮೀ ಮಳೆಯಾಗಿದೆ. ಮೊನ್ನೆ ಭಾನುವಾರ ಮತ್ತು ನಿನ್ನೆ ಸೋಮವಾರ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ನಗರದಲ್ಲಿ 105 ಮಿ.ಮೀ ಮಳೆ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com